ಕಳ್ಳಾಟವಾಡುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಶಾಕ್: 80ಕ್ಕೂ ಹೆಚ್ಚು ಮಳಿಗೆಗಳಿಗೆ ನೋಟಿಸ್
ಜನೌಷಧಿ ಕೇಂದ್ರಗಳಲ್ಲಿ ಕೇವಲ ಕಡಿಮೆ ದರದ 'ಜೆನೆರಿಕ್' ಔಷಧಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂಬ ನಿಯಮವಿದೆ. ಆದರೆ, ಹಲವು ಕೇಂದ್ರಗಳಲ್ಲಿ ಹೆಚ್ಚಿನ ಲಾಭಕ್ಕಾಗಿ ಖಾಸಗಿ ಕಂಪನಿಗಳ ಬ್ರಾಂಡೆಡ್ ಔಷಧಿಗಳು ಹಾಗೂ ಕಾಸ್ಮೆಟಿಕ್ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಕರ್ನಾಟಕದ 150 ಜನೌಷಧಿ ಕೇಂದ್ರಗಳ ಮೇಲೆ ಎಫ್ಡಿಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರು, ನವೆಂಬರ್ 26: ಜನೌಷಧಿ ಕೇಂದ್ರಗಳಲ್ಲಿ ಕೇವಲ ಕಡಿಮೆ ದರದ ‘ಜೆನೆರಿಕ್’ ಔಷಧಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂಬ ನಿಯಮವಿದೆ. ಆದರೆ, ಹಲವು ಕೇಂದ್ರಗಳಲ್ಲಿ ಹೆಚ್ಚಿನ ಲಾಭಕ್ಕಾಗಿ ಖಾಸಗಿ ಕಂಪನಿಗಳ ಬ್ರಾಂಡೆಡ್ ಔಷಧಿಗಳು ಹಾಗೂ ಕಾಸ್ಮೆಟಿಕ್ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಕರ್ನಾಟಕದ 150 ಜನೌಷಧಿ ಕೇಂದ್ರಗಳ ಮೇಲೆ ಎಫ್ಡಿಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಹೌದು.. ರಾಜ್ಯಾದ್ಯಂತ 150 ಜನೌಷಧಿ ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದ್ದು, ಈ ವೇಳೆ ಕೆಲವು ಜನೌಷಧಿ ಮಳಿಗೆಗಳಲ್ಲಿ ನಿಯಮಬಾಹಿರವಾಗಿ ಬ್ರಾಂಡೆಡ್ ಔಷಧಿಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ನಿಯಮ ಉಲ್ಲಂಘಟನೆ ಮಾಡಿದ 80ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಜನೌಷಧಿ ಕೇಂದ್ರಗಳಲ್ಲಿ ಬ್ರ್ಯಾಂಡೆಡ್ ಔಷಧ ಮಾರಾಟ ಮಾಡುವಂತಿಲ್ಲ. ಆದರೂ ಜನೌಷಧ ಕೇಂದ್ರಗಳಲ್ಲಿ ಬ್ರ್ಯಾಂಡೆಡ್ ಔಷಧ ಮಾರುತ್ತಿದ್ದರು. ಅಲ್ಲದೇ ತೆ ಕಾಸ್ಮೆಟಿಕ್ಸ್ ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ FDA ನಿಯಮ ಗಾಳಿಗೆ ತೂರಿದ್ದು, ನಿಯಮ ಉಲ್ಲಂಘಿಸಿದ ಮಳಿಗೆಗಳ ಪರವಾನಗಿ ರದ್ದುಪಡಿಸುವ ಬಗ್ಗೆಯೂ ಔಷಧ ನಿಯಂತ್ರಣ ಇಲಾಖೆ ಎಚ್ಚರಿಕೆ ನೀಡಿದೆ. ಸದ್ಯ ಬೇರೆ ಬ್ರ್ಯಾಂಡ್ಗಳ ಔಷಧದ ಮಾದರಿ ಸಂಗ್ರಹಿಸಿದ FDA ಅಧಿಕಾರಿಗಳು, ಲ್ಯಾಬ್ಗೆ ರವಾನಿಸಿದ್ದಾರೆ.

