- TV9 Kannada Photo gallery Cricket photos MI Women WPL: Luke Williams Appointed Head Coach for 2027 Season, Replaces Keightley
ಮುಂಬೈ ಇಂಡಿಯನ್ಸ್ ತಂಡಕ್ಕೆ ನೂತನ ಹೆಡ್ ಕೋಚ್ ನೇಮಕ
ಮುಂಬೈ ಇಂಡಿಯನ್ಸ್ ಮಹಿಳಾ ತಂಡವು 2027ರ WPL ಸೀಸನ್‌ಗಾಗಿ ಲ್ಯೂಕ್ ವಿಲಿಯಮ್ಸ್ ಅವರನ್ನು ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. ಲಿಸಾ ಕೀಟ್ಲಿ ಅವರ ಸ್ಥಾನಕ್ಕೆ ಬಂದಿರುವ ವಿಲಿಯಮ್ಸ್, ಎರಡು ಬಾರಿ ಚಾಂಪಿಯನ್ ಆಗಿರುವ MI ತಂಡಕ್ಕೆ ಹೊಸ ತಂತ್ರಗಳನ್ನು ರೂಪಿಸಲಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಜೊತೆಗೂಡಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಗುರಿ ಹೊಂದಿದ್ದಾರೆ. ಕಳೆದ ಸೀಸನ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
Updated on: Sep 25, 2026 | 6:28 PM

ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಎರಡು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹೊಸ ಮುಖ್ಯ ಕೋಚ್ ನೇಮಕವಾಗಿದೆ. 2027 ರ ಮಹಿಳಾ ಪ್ರೀಮಿಯರ್ ಲೀಗ್ ಸೀಸನ್‌ಗೂ ಮೊದಲು ತಂಡಕ್ಕೆ ಲ್ಯೂಕ್ ವಿಲಿಯಮ್ಸ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ ಎಂದು ಫ್ರಾಂಚೈಸಿ ಗುರುವಾರ ಪ್ರಕಟಿಸಿದೆ(PC-PTI).

ಕಳೆದ ಸೀಸನ್‌ನಲ್ಲಿ ಈ ಹುದ್ದೆಯಲ್ಲಿದ್ದ ಲಿಸಾ ಕೀಟ್ಲಿ ಅವರ ಸ್ಥಾನವನ್ನು ವಿಲಿಯಮ್ಸ್ ತುಂಬಲಿದ್ದಾರೆ. WPL ಇಲ್ಲಿಯವರೆಗೆ ನಾಲ್ಕು ಸೀಸನ್‌ಗಳಲ್ಲಿ ನಡೆದಿದ್ದು, ಮುಂಬೈ ಇಂಡಿಯನ್ಸ್ ಎರಡು ಬಾರಿ ಪ್ರಶಸ್ತಿ ಗೆದ್ದಿದೆ. 2023 ಮತ್ತು 2025 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡವು ಈಗ 2027 ರ ಸೀಸನ್‌ನತ್ತ ಗಮನ ಹರಿಸಿದೆ(PC-PTI).

ಮೊದಲ ಆವೃತ್ತಿಯಿಂದ ತಂಡದ ನಾಯಕಿಯಾಗಿರುವ ಹರ್ಮನ್ಪ್ರೀತ್ ಕೌರ್ ಅವರೊಂದಿಗೆ ವಿಲಿಯಮ್ಸ್ ಕೆಲಸ ಮಾಡುತ್ತಾರೆ. ಹೊಸ ಕೋಚ್ ನೇಮಕದೊಂದಿಗೆ, ಮುಂಬೈ ಮಹಿಳಾ ತಂಡ ಮುಂದಿನ ಸೀಸನ್‌ಗೆ ಹೊಸ ಯೋಜನೆಯೊಂದಿಗೆ ಮುಂದುವರಿಯಲಿದೆ(PC-PTI).

ಲಿಸಾ ಕೀಟ್ಲಿ ಕೇವಲ ಒಂದು ಆವೃತ್ತಿಗೆ ಮುಂಬೈ ತಂಡದ ತರಬೇತುದಾರರಾಗಿ ಸೇವೆ ಸಲ್ಲಿಸಿ ಇದೀಗ ತಂಡದಿಂದ ಹೊರ ನಡೆದಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೀಟ್ಲಿ ತರಬೇತಿಯಲ್ಲಿ ಮುಂಬೈ ಇಂಡಿಯನ್ಸ್ ಐದು ತಂಡಗಳ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ತಂಡವು ತನ್ನ ಎಂಟು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಐದು ಪಂದ್ಯಗಳಲ್ಲಿ ಸೋತಿತು. ಹೀಗಾಗಿ ಮುಂಬೈ ಫ್ರಾಂಚೈಸಿ ತನ್ನ ಹೆಡ್ ಕೋಚ್ ಬದಲಾವಣೆ ಮಾಡಲು ಮುಂದಾಯಿತು(PC-PTI).

ಮುಂಬೈ ಇಂಡಿಯನ್ಸ್ ಸಹ-ಮಾಲೀಕಿ ನೀತಾ ಅಂಬಾನಿ ಅವರು ಲಿಸಾ ಕೀಟ್ಲಿ ಅವರ ಸೇವೆಗಳಿಗೆ ಧನ್ಯವಾದ ಅರ್ಪಿಸಿದ್ದು, ಹೊಸ ಕೋಚ್ ಲ್ಯೂಕ್ ವಿಲಿಯಮ್ಸ್ ಅವರನ್ನು ತಂಡಕ್ಕೆ ಸ್ವಾಗತಿಸಿದ್ದಾರೆ. ಅಲ್ಲದೆ ಲ್ಯೂಕ್ ವಿಲಿಯಮ್ಸ್ ಮಹಿಳಾ ಕ್ರಿಕೆಟ್ ಬಗ್ಗೆ ಉತ್ತಮ ತಿಳುವಳಿಕೆ ಮತ್ತು ಆಟಗಾರ್ತಿಯರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಅನುಭವವನ್ನು ಹೊಂದಿದ್ದು, ಅವರ ಅನುಭವ ತಂಡಕ್ಕೆ ನೆರವಾಗಲಿದೆ ಎಂದಿದ್ದಾರೆ(PC-PTI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



