ಬೆಳೆ ಉಳಿಸಿಕೊಳ್ಳಲು ಪರದಾಟ: ವಿದ್ಯುತ್ಗಾಗಿ ಅಧಿಕಾರಿಗಳ ಕಾಲಿಗೆ ಬಿದ್ದ ರೈತ
ರಾಯಚೂರು ಜಿಲ್ಲೆಯ ರೈತರು ತೀವ್ರ ವಿದ್ಯುತ್ ಅಭಾವದಿಂದ ಕಂಗಾಲಾಗಿದ್ದಾರೆ. ಬೆಳೆ ಉಳಿಸಿಕೊಳ್ಳಲು ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಜೆಸ್ಕಾಂ ಅಧಿಕಾರಿಗಳ ಕಾಲಿಗೆ ಬಿದ್ದ ರೈತನ ವಿಡಿಯೋ ವೈರಲ್ ಆಗಿದೆ. ಕೇವಲ 6-7 ಗಂಟೆ ವಿದ್ಯುತ್ ಪೂರೈಕೆಯಿಂದ ಬೆಳೆಗಳು ಒಣಗುತ್ತಿದ್ದು, ರಾಜ್ಯ ಸರ್ಕಾರದ 2,500 ರೂ ಪರಿಹಾರವನ್ನು ರೈತರು ಅಸಮರ್ಪಕವೆಂದು ತಳ್ಳಿಹಾಕಿದ್ದಾರೆ.
ರಾಯಚೂರು, ಸೆಪ್ಟೆಂಬರ್ 25: ಜಿಲ್ಲೆಯ ರೈತರು ತೀವ್ರ ಬರಗಾಲ ಮತ್ತು ವಿದ್ಯುತ್ ಅಭಾವದಿಂದ ತತ್ತರಿಸಿ ಹೋಗಿದ್ದಾರೆ. ಬೆಳೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೈತರೊಬ್ಬರು ಜೆಸ್ಕಾಂ ಅಧಿಕಾರಿಗಳ ಕಾಲಿಗೆ ಬಿದ್ದಿರುವ ಘಟನೆ ನಡೆದಿದೆ. ಈ ಹಿಂದೆ 12 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಾಗುತ್ತಿದ್ದು, ಆದರೆ ಇತ್ತೀಚೆಗೆ ಕೇವಲ 6-7 ಗಂಟೆ ವಿದ್ಯುತ್ ನೀಡಲಾಗಿತ್ತು. ಯಾಪಲದಿನ್ನಿ ಗ್ರಾಮದ ಜಯನ ನಾಯಕ್ ಎಂಬ ರೈತ ಜೆಸ್ಕಾಂ ಅಧಿಕಾರಿಯ ಕಾಲುಗಳಿಗೆ ಬಿದ್ದು, ‘ಮೊದಲಿನಂತೆ 12 ಗಂಟೆ ವಿದ್ಯುತ್ ನೀಡಿ, ಇಲ್ಲವಾದರೆ ನಮ್ಮ ಬೆಳೆ ಹಾಳಾಗಿ ನಮ್ಮ ಬದುಕು ಬೀದಿಗೆ ಬರುತ್ತದೆ’ ಎಂದು ಅಳಲು ತೋಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 25, 2026 10:53 PM
Follow Us

