ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.
ರಾಯಚೂರು: ಬಡ ರೋಗಿಗಳಿಗೆ ತಲುಪಬೇಕಾದ ಔಷಧಿಗಳನ್ನು ತಿಪ್ಪೆ ರಾಶಿಗೆ ಎಸೆದ ಸಿಬ್ಬಂದಿ!
ರಾಯಚೂರಿನ ಬಸವೇಶ್ವರ ವೃತ್ತದ ಬಳಿ ಬಡ ರೋಗಿಗಳಿಗೆ ತಲುಪಬೇಕಿದ್ದ ಆರೋಗ್ಯ ಇಲಾಖೆಯ ಔಷಧಗಳು ತಿಪ್ಪೆಗೆ ಸೇರಿವೆ. ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳಿಗೆ ಬಳಸುವ ಈ ಔಷಧಿಗಳು ಸೆಪ್ಟೆಂಬರ್ನಲ್ಲಿ ಅವಧಿ ಮುಗಿದಿವೆ. ಈ ವರ್ಷದಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ಮತ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.
- Bhemesh Poojar
- Updated on: Oct 14, 2026
- 5:24 pm
ರಾಯಚೂರು ಓಪೆಕ್ ಆಸ್ಪತ್ರೆ ನಿರ್ಲಕ್ಷ್ಯ; ಗಾಯಾಳು ಮಹಿಳೆಯ ತಲೆಯಲ್ಲಿ ಹುಳುಗಳು ಪತ್ತೆ!
ರಾಯಚೂರಿನ ಸರ್ಕಾರಿ ಓಪೆಕ್ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಯ ಘೋರ ನಿರ್ಲಕ್ಷ್ಯ ಮುನ್ನೆಲೆಗೆ ಬಂದಿದೆ. ಅಪಘಾತದಲ್ಲಿ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಸರಿಯಾಗಿ ಡ್ರೆಸ್ಸಿಂಗ್ ಮಾಡದ ಕಾರಣ ತಲೆಯ ಗಾಯದಲ್ಲಿ ಹುಳುಗಳು ಪತ್ತೆಯಾಗಿವೆ. ಸೂಕ್ತ ಚಿಕಿತ್ಸೆ ನೀಡದೆ ಕಾಲಹರಣ ಮಾಡುತ್ತಿರುವ ಸಿಬ್ಬಂದಿ ಹಾಗೂ ತಜ್ಞ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ತಕ್ಷಣವೇ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
- Bhemesh Poojar
- Updated on: Oct 14, 2026
- 10:01 am
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!
ರಾಯಚೂರಿನ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಮಹಾಲಯ ಅಮಾವಾಸ್ಯೆ ಸಂದರ್ಭದಲ್ಲಿ, ಹುಣಸೆ ಮರಕ್ಕೆ ನೇತುಹಾಕಿದ್ದ ಮನುಷ್ಯ ಆಕೃತಿಯ ಕಪ್ಪು ಗೊಂಬೆ ಪತ್ತೆಯಾಗಿದ್ದು, ಸಿಬ್ಬಂದಿಯಲ್ಲಿ ತೀವ್ರ ಆತಂಕ ಮೂಡಿಸಿದೆ. ಕಚೇರಿಯ ಬಾಕಿ ಬಿಲ್ಗಳು ಮತ್ತು ಫೈಲ್ಗಳನ್ನು ತೆರವುಗೊಳಿಸಲು ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
- Bhemesh Poojar
- Updated on: Oct 10, 2026
- 11:56 am
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ರಾಯಚೂರಿನಲ್ಲಿ ಅದ್ಧೂರಿಯಾಗಿ ನಡೆದ ಗಣೇಶೋತ್ಸವ ಯಶಸ್ಸಿಗೆ ವಿವಿಧ ಇಲಾಖೆಗಳ ಶ್ರಮ ಶ್ಲಾಘನೀಯ. ಕಾನೂನು ಸುವ್ಯವಸ್ಥೆ, ವಿದ್ಯುತ್ ನಿರ್ವಹಣೆ, ಸ್ವಚ್ಛತಾ ಕಾರ್ಯಕ್ಕೆ ಎಲ್ಲರೂ ಸಹಕರಿಸಿದ್ದಾರೆ. ದುಬೈ-ಇಸ್ರೇಲ್ ವಿಮಾನದಲ್ಲಿ ಪ್ರಯಾಣಿಕರ ಜೀವ ಉಳಿಸಿದ ವೀರ ಪೈಲಟ್ ಸ್ಮಿತ್ ಮಚ್ಚರ್ ಅವರಿಗೆ ವಿಸರ್ಜನಾ ಮೆರವಣಿಗೆಯಲ್ಲಿ ವಿಶೇಷ ಗೌರವ ಸಲ್ಲಿಸಲಾಯಿತು.
- Bhemesh Poojar
- Updated on: Oct 6, 2026
- 1:57 pm
ಸಿಂಧನೂರಿನಲ್ಲಿ ಸಂಭ್ರಮದ ಬುತ್ತಿ ಜಾತ್ರೆ: ಸಾಮೂಹಿಕ ಭೋಜನ, ಕಂಗೊಳಿಸಿದ ಗ್ರಾಮೀಣ ಸೊಗಡು
ರಾಯಚೂರಿನ ಸಿಂಧನೂರಿನಲ್ಲಿ ಅದ್ದೂರಿ ಬುತ್ತಿ ಜಾತ್ರೆ ನಡೆಯಿತು. ಆ ಮೂಲಕ ಭಾರತೀಯ ಸಂಸ್ಕೃತಿ, ಗ್ರಾಮೀಣ ಸೊಗಡನ್ನು ಮರುಸ್ಥಾಪಿಸಲಾಗಿತ್ತು. ಸಾವಿರಾರು ಮಹಿಳೆಯರು ತಲೆ ಮೇಲೆ ಬುತ್ತಿ ಹೊತ್ತು ಬಂದು, ಪರಸ್ಪರ ಹಂಚಿಕೊಂಡು ಸಾಮೂಹಿಕ ಭೋಜನ ಮಾಡಿದರು. ಬುತ್ತಿ ಜಾತ್ರೆಯ ಫೋಟೋಗಳು ಇಲ್ಲಿವೆ ನೋಡಿ.
- Bhemesh Poojar
- Updated on: Oct 5, 2026
- 8:08 pm
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ರಾಯಚೂರಿನಲ್ಲಿ ನಡೆದ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯು ವಿಶಿಷ್ಟ ಗೌರವಕ್ಕೆ ಸಾಕ್ಷಿಯಾಯಿತು. ದುಬೈನಿಂದ ಇಸ್ರೇಲ್ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರನ್ನು ಪತನದಿಂದ ರಕ್ಷಿಸಿದ್ದ ಭಾರತದ ವೀರ ಪೈಲಟ್ ಸ್ಮಿತ್ ಮಚ್ಚರ್ ಅವರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಿ ಸಾರ್ವಜನಿಕರು ಆಶೀರ್ವಾದ ಕೋರಿದರು. ಈ ಘಟನೆ ಅವರ ಪರಾಕ್ರಮಕ್ಕೆ ಸಂದ ಗೌರವವಾಗಿದೆ.
- Bhemesh Poojar
- Updated on: Oct 4, 2026
- 7:56 pm
ರಾಯಚೂರು: ವಿದ್ಯುತ್ ಸ್ಥಾವರಕ್ಕೆ ಭೂಮಿ ನೀಡಿದ್ದ ರೈತರ ಬದುಕಲ್ಲಿ ಕತ್ತಲು; ವೈಟಿಪಿಎಸ್ ವಿರುದ್ಧ ಸಿಡಿದ 33 ಕುಟುಂಬಗಳು
ರಾಯಚೂರಿನ ವೈಟಿಪಿಎಸ್ ವಿದ್ಯುತ್ ಸ್ಥಾವರಕ್ಕಾಗಿ ಭೂಮಿ ನೀಡಿರುವ ಭೂ ಸಂತ್ರಸ್ತ ರೈತರು ಉದ್ಯೋಗ ವಂಚನೆ ಎದುರಿಸುತ್ತಿದ್ದಾರೆ. ರಾಜ್ಯಕ್ಕೆ ಬೆಳಕು ನೀಡುವ ಘಟಕದ ಸ್ಥಾಪನೆಗೆ 2012ರಲ್ಲಿ ತಮ್ಮ ಫಲವತ್ತಾದ ಕೃಷಿ ಭೂಮಿ ಕಳೆದುಕೊಂಡ 33 ಕುಟುಂಬಗಳಿಗೆ 10 ವರ್ಷಗಳಾದರೂ ಉದ್ಯೋಗ ಸಿಕ್ಕಿಲ್ಲ. ಆರಂಭದಲ್ಲಿ ನೀಡಿದ ಭರವಸೆಗೆ ವಿರುದ್ಧವಾಗಿ ಹೊಸ ಷರತ್ತುಗಳನ್ನು ವಿಧಿಸಲಾಗಿದ್ದು, ಸಂತ್ರಸ್ತರು ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ.
- Bhemesh Poojar
- Updated on: Oct 2, 2026
- 8:04 pm
ಬೆಳೆ ಉಳಿಸಿಕೊಳ್ಳಲು ಪರದಾಟ: ವಿದ್ಯುತ್ಗಾಗಿ ಅಧಿಕಾರಿಗಳ ಕಾಲಿಗೆ ಬಿದ್ದ ರೈತ
ರಾಯಚೂರು ಜಿಲ್ಲೆಯ ರೈತರು ತೀವ್ರ ವಿದ್ಯುತ್ ಅಭಾವದಿಂದ ಕಂಗಾಲಾಗಿದ್ದಾರೆ. ಬೆಳೆ ಉಳಿಸಿಕೊಳ್ಳಲು ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಜೆಸ್ಕಾಂ ಅಧಿಕಾರಿಗಳ ಕಾಲಿಗೆ ಬಿದ್ದ ರೈತನ ವಿಡಿಯೋ ವೈರಲ್ ಆಗಿದೆ. ಕೇವಲ 6-7 ಗಂಟೆ ವಿದ್ಯುತ್ ಪೂರೈಕೆಯಿಂದ ಬೆಳೆಗಳು ಒಣಗುತ್ತಿದ್ದು, ರಾಜ್ಯ ಸರ್ಕಾರದ 2,500 ರೂ ಪರಿಹಾರವನ್ನು ರೈತರು ಅಸಮರ್ಪಕವೆಂದು ತಳ್ಳಿಹಾಕಿದ್ದಾರೆ.
- Bhemesh Poojar
- Updated on: Sep 25, 2026
- 10:54 pm
ಮಕ್ಕಳಿಗೆ ಶಿಫ್ಟ್ ಮಾದರಿಯಲ್ಲಿ ಪಾಠ: ರಾಯಚೂರಿನ ಸರ್ಕಾರಿ ಶಾಲೆಗೆ ಇದೆಂಥಾ ಸ್ಥಿತಿ ನೋಡಿ
ರಾಯಚೂರಿನ ಸರ್ಕಾರಿ ಶಾಲೆಯಲ್ಲಿ ಕಟ್ಟಡ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ-ಮಧ್ಯಾಹ್ನ ಶಿಫ್ಟ್ ಮಾದರಿಯಲ್ಲಿ ತರಗತಿಗಳು ನಡೆಯುತ್ತಿವೆ. ಒಂದೂವರೆ ವರ್ಷದಿಂದ ಹೊಸ ಕಟ್ಟಡ ನಿರ್ಮಾಣವಾಗದಿರುವುದು ಇದಕ್ಕೆ ಕಾರಣ. ಈಗ, ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸ್ಥಳಾಂತರಿಸಲು ಮುಂದಾಗಿದ್ದು, ಪೋಷಕರು ಮತ್ತು ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತಾತ್ಕಾಲಿಕ ಶೆಡ್ ನಿರ್ಮಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.
- Bhemesh Poojar
- Updated on: Sep 23, 2026
- 6:17 pm
ಡಿಜೆ ಸೌಂಡ್‌ನಿಂದ ಮಗಳು ಅಸ್ವಸ್ಥ ಆರೋಪ: ಗಣೇಶೋತ್ಸವ ಟಾರ್ಗೆಟ್ ಆರೋಪಿಸಿ ಶಿವಸೇನೆ ಕೆಂಡಾಮಂಡಲ!
ರಾಯಚೂರಿನಲ್ಲಿ ಅತಿಯಾದ ಡಿಜೆ ಶಬ್ದಕ್ಕೆ ಮಗು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ತಂದೆ ಡಿಸಿ ನಿವಾಸದೆದುರು ಪ್ರತಿಭಟನೆ ನಡೆಸಿದ್ದರು. ಈ ಬೆನ್ನಲ್ಲೇ ಪೊಲೀಸರ ವೈಫಲ್ಯವೆಂದು ಎಸ್‌ಪಿಗೆ ಡಿಸಿ ಪತ್ರ ಬರೆದಿದ್ದು, ಪೊಲೀಸ್ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ವರ್ಷವಿಡೀ ಸುಮ್ಮನಿದ್ದು ಗಣೇಶೋತ್ಸವವನ್ನಷ್ಟೇ ಟಾರ್ಗೆಟ್ ಮಾಡಿ ಪೊಲೀಸರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಶಿವಸೇನೆ ಜಿಲ್ಲಾಡಳಿತ ವಿರುದ್ಧ ಕೆಂಡಾಮಂಡಲವಾಗಿದೆ.
- Bhemesh Poojar
- Updated on: Sep 20, 2026
- 2:55 pm
ರಾಯಚೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಘೋರ ದುರಂತ: ಇಬ್ಬರು ಬಾಲಕರು ಸಾವು
ರಾಯಚೂರು ನಗರದ ಜಹಿರಾಬಾದ್ ಬಡಾವಣೆಯ ಗಣೇಶ ವಿಸರ್ಜನೆ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಬಾಲಕರು ಸಾವನ್ನಪ್ಪಿದ್ದು, ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ರಾಯಚೂರು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
- Bhemesh Poojar
- Updated on: Sep 19, 2026
- 5:12 pm
ಇಡೀ ರಾಜ್ಯಕ್ಕೆ ಬೆಳಕು ನೀಡೋ ಊರಲ್ಲೇ ಕತ್ತಲು: ಜೆಸ್ಕಾಂ ಕಣ್ಣಾಮುಚ್ಚಾಲೆಗೆ ಸಿಡಿದೆದ್ದ ರೈತರು
ಮಳೆ ಇಲ್ಲದ ಕಾರಣ ತೀವ್ರ ಬರಗಾಲದಿಂದ ಕಂಗಾಲಾಗಿರೋ ರಾಯಚೂರು ಜಿಲ್ಲೆ ರೈತರೀಗ ಅಕ್ಷರಶಃ ಕೆರಳಿದ್ದಾರೆ. ರಾಯಚೂರಿನಲ್ಲಿ ಉತ್ಪಾದನೆಯಾಗೋ ವಿದ್ಯುತ್ ಇಡೀ ರಾಜ್ಯಕ್ಕೆ ಬೆಳಕು ನೀಡುತ್ತಿದೆ. ಆದ್ರೆ ಹಿತ್ತಲ ಗಡಿ ಮದ್ದಲ್ಲ ಅನ್ನೋ ಗಾದೆಯ ಹಾಗೇ, ವಿದ್ಯುತ್ ಉತ್ಪಾದನೆ ಮಾಡೋ ರಾಯಚೂರು ಜಿಲ್ಲೆ ರೈತರಿಗೆ ಬೇಕಾಬಿಟ್ಟಿ ವಿದ್ಯುತ್ ಪೂರೈಕೆಯಾಗ್ತಿದೆ. ಹೀಗಾಗಿ ಬೆಳೆ ಒಣಗಿ ಹೋಗ್ತಿದ್ದು ರೈತರು ಹೋರಾಟದ ಹಾದಿ ಹಿಡಿದ್ದಾರೆ.
- Bhemesh Poojar
- Updated on: Sep 14, 2026
- 3:47 pm