AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುರಿದುಬಿದ್ದ ಸ್ಟೀಲ್ ಬ್ರಿಡ್ಜ್​​​​ ಸೇತುವೆ ಸರಳು: ರಾಯಚೂರು-ಮಂತ್ರಾಲಯ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌

ಮುರಿದುಬಿದ್ದ ಸ್ಟೀಲ್ ಬ್ರಿಡ್ಜ್​​​​ ಸೇತುವೆ ಸರಳು: ರಾಯಚೂರು-ಮಂತ್ರಾಲಯ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌

ಭೀಮೇಶ್​​ ಪೂಜಾರ್
| Edited By: |

Updated on:Jul 20, 2026 | 2:54 PM

Share

ರಾಯಚೂರು ತಾಲೂಕಿನ (Raichur) ಗಿಲ್ಲೆಸುಗೂರು ಬಳಿ ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಮಾರ್ಗದಲ್ಲಿ ತುಂಗಭದ್ರಾ ನದಿಗೆ (Tungabhadra River) ಅಡ್ಡಲಾಗಿ ನಿರ್ಮಿಸಿದ ಉಕ್ಕಿನ ಸೇತುವೆಯ (Steel Bridge) ಸರಳುಗಳು ತುಂಡಾಗಿವೆ. ಇದರಿಂದ ರಾಯಚೂರು – ಮಂತ್ರಾಲಯ ಮಾರ್ಗದಲ್ಲಿ ಎರಡು ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಅದೃಷ್ಟವಶಾತ್, ಅದೃಷ್ಟವಶಾತ್ ಈ ಅವಘಡದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಂಧ್ರಪ್ರದೇಶದ ಮಾದಾವರಂ ಪೊಲೀಸರ ಭೇಟಿ, ಪರಿಶೀಲನೆ ಮಾಡಿದರು.

ರಾಯಚೂರು, (ಜುಲೈ 20): ತಾಲೂಕಿನ (Raichur) ಗಿಲ್ಲೆಸುಗೂರು ಬಳಿ ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಮಾರ್ಗದಲ್ಲಿ ತುಂಗಭದ್ರಾ ನದಿಗೆ (Tungabhadra River) ಅಡ್ಡಲಾಗಿ ನಿರ್ಮಿಸಿದ ಉಕ್ಕಿನ ಸೇತುವೆಯ (Steel Bridge) ಸರಳುಗಳು ತುಂಡಾಗಿವೆ. ಇದರಿಂದ ರಾಯಚೂರು – ಮಂತ್ರಾಲಯ ಮಾರ್ಗದಲ್ಲಿ ಎರಡು ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ರಾಯಚೂರು – ಮಂತ್ರಾಲಯಕ್ಕೆ ತೆರಳುವ ಮಾರ್ಗದ ಮುಖ್ಯ ಸೇತುವೆ ಇದಾಗಿದ್ದು, ಏಕಾಏಕಿ ಬ್ರಿಡ್ಜ್​​​​ ಮೇಲ್ಭಾಗದ ಕಬ್ಬಿಣದ ಸರಳು ಕಟ್ ಆಗಿ ಬಿದ್ದಿದೆ. ಅದೃಷ್ಟವಶಾತ್, ಅದೃಷ್ಟವಶಾತ್ ಈ ಅವಘಡದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಂಧ್ರಪ್ರದೇಶದ ಮಾದಾವರಂ ಪೊಲೀಸರ ಭೇಟಿ, ಪರಿಶೀಲನೆ ಮಾಡಿದರು. ನಂತರ ಕಟ್ ಆಗಿ ಬಿದ್ದಿದ್ದ ಕಬ್ಬಿಣದ ಸರಳು ಸರಿಪಡಿಸಿ ಸಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 20, 2026 02:54 PM

Follow Us