AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೀಕ್ ಆದ ನನ್ನ ಖಾಸಗಿ ವಿಡಿಯೋನ ವಾಚ್​​ಮನ್ ಕೂಡ ನೋಡುತ್ತಿದ್ದ; ರಾಧಿಕಾ ಆಪ್ಟೆ

ಬೋಲ್ಡ್ ಸಿನಿಮಾಗಳ ದೃಶ್ಯ ಸೋರಿಕೆಯಾದಾಗ ಬಾಲಿವುಡ್ ನಟಿ ರಾಧಿಕಾ ಆಪ್ಟೆ ತೀವ್ರ ಮಾನಸಿಕ ಕಿರುಕುಳ ಅನುಭವಿಸಿದ್ದರು. ಅಪಾರ್ಟ್‌ಮೆಂಟ್ ವಾಚ್‌ಮನ್ ಅದೇ ವಿಡಿಯೋ ನೋಡುತ್ತಿದ್ದನ್ನು ಕಂಡು ಬೆಚ್ಚಿಬಿದ್ದಿದ್ದ ನಟಿ, ನಾಲ್ಕು ದಿನ ಮನೆಯಿಂದ ಹೊರಬರದೆ ಭಯದಲ್ಲಿ ದಿನ ಕಳೆದಿದ್ದಾಗಿ ಹಳೆಯ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಲೀಕ್ ಆದ ನನ್ನ ಖಾಸಗಿ ವಿಡಿಯೋನ ವಾಚ್​​ಮನ್ ಕೂಡ ನೋಡುತ್ತಿದ್ದ; ರಾಧಿಕಾ ಆಪ್ಟೆ
ರಾಧಿಕಾ
ರಾಜೇಶ್ ದುಗ್ಗುಮನೆ
|

Updated on: Sep 26, 2026 | 9:03 AM

Share

ಮುಖ್ಯಾಂಶಗಳು

  • ವಾಚ್‌ಮನ್ ಮೊಬೈಲ್‌ನಲ್ಲಿ ಲೀಕ್ ವಿಡಿಯೋ
  • ನಾಲ್ಕು ದಿನ ಮನೆ ಒಳಗೇ ಬಂಧಿಯಾದ ನಟಿ
  • ಕಹಿ ಘಟನೆ ನೆನೆದು ಕಣ್ಣೀರಿಟ್ಟ ರಾಧಿಕಾ ಆಪ್ಟೆ

ನಟಿ ರಾಧಿಕಾ ಆಪ್ಟೆ ಅವರು ತಮ್ಮ ಬೋಲ್ಡ್ ದೃಶ್ಯ ಹಾಗೂ ನೇರಮಾತುಗಳಿಂದ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರು ನಟಿಸಿದ ಸಿನಿಮಾ ಒಂದರ ಬೋಲ್ಡ್ ದೃಶ್ಯ ಈ ಮೊದಲು ಆನ್​ಲೈನ್​ ಅಲ್ಲಿ ಲೀಕ್ ಆಗಿತ್ತು. ಈ ವಿಡಿಯೋ ಅವರ ಮನೆಯ ವಾಚ್‌ಮನ್ ಮೊಬೈಲ್‌ನಲ್ಲಿಯೂ ಇತ್ತಂತೆ. ಈ ವಿಷಯ ತಿಳಿದು ನಟಿ ತೀವ್ರ ಆಘಾತಕ್ಕೆ ಒಳಗಾದರು. ನಾಲ್ಕು ದಿನ ಅವರು ಮನೆಯಿಂದ ಹೊರಗೇ ಬಂದಿರಲಿಲ್ಲ. ಈ ಮಾನಸಿಕ ಒತ್ತಡದ ಬಗ್ಗೆ ಅವರು ಮಾತನಾಡಿದ್ದಾರೆ.

ಚಿತ್ರರಂಗದಲ್ಲಿ ಬೋಲ್ಡ್ ಪಾತ್ರಗಳಿಗೆ ಹೆಸರಾದವರು ನಟಿ ರಾಧಿಕಾ ಆಪ್ಟೆ. ಅವರು ಸಿನಿಮಾಗಳಲ್ಲಿ ನಟಿಸಿದ ಕೆಲವು ಆಕ್ಷೇಪಾರ್ಹ ದೃಶ್ಯಗಳು ವೈರಲ್ ಆಗಿದ್ದವು. ಈ ಘಟನೆಯಿಂದ ಅವರು ತೀವ್ರ ಮಾನಸಿಕ ಒತ್ತಡ ಎದುರಿಸಿದ್ದರು. ನೆಟ್‌ಫ್ಲಿಕ್ಸ್‌ನ ‘ಲಸ್ಟ್ ಸ್ಟೋರೀಸ್ 3’ ಪ್ರಚಾರದ ವೇಳೆ ಅವರು ಈ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ.

ರಾಧಿಕಾ ನಟಿಸಿದ್ದ ದೃಶ್ಯವೊಂದು ಇಂಟರ್‌ನೆಟ್‌ನಲ್ಲಿ ಸೋರಿಕೆಯಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಿಂದ ಹೆದರಿದ ರಾಧಿಕಾ ನಾಲ್ಕು ದಿನ ಮನೆ ಬಾಗಿಲು ಹಾಕಿಕೊಂಡಿದ್ದರು. ಹೊರಗೆ ಬರಲು ಅವರಿಗೆ ತೀವ್ರ ಭಯವಾಗಿತ್ತು.

‘ಒಂದು ದಿನ ನನ್ನ ಮನೆಯ ಭದ್ರತಾ ಸಿಬ್ಬಂದಿ ಅದೇ ವಿಡಿಯೋ ನೋಡುತ್ತಿದ್ದ. ಇದನ್ನು ಕಂಡು ನನಗೆ ತೀವ್ರ ಆಘಾತವಾಯಿತು. ಘಟನೆಯಿಂದ ಮನಸ್ಸು ಸ್ಥಿಮಿತ ಕಳೆದುಕೊಂಡಿತು. ತಕ್ಷಣವೇ ನಾನು ನನ್ನ ಕಾರು ಚಾಲಕನಿಗೆ ಕರೆ ಮಾಡಿದೆ. ಸೋರಿಕೆಯಾದ ವಿಡಿಯೋದ ವಿಚಾರವನ್ನು ಅವನಿಗೆ ತಿಳಿಸಿದೆ. ನನ್ನ ಜೊತೆ ಕೆಲಸ ಮಾಡಲು ಸಮ್ಮತಿ ಇದ್ದರೆ ಮಾತ್ರ ಇರು ಎಂದು ಹೇಳಿದೆ. ಇಲ್ಲದಿದ್ದರೆ ಸಂಬಳ ಪಡೆದು ಕೆಲಸ ಬಿಟ್ಟು ಹೋಗಬಹುದು ಎಂದೆ. ಆದರೆ, ಕಾರು ಚಾಲಕ ಭಯಪಡದಂತೆ ಸೂಚಿಸಿದ’ ಎಂದಿದ್ದಾರೆ ರಾಧಿಕಾ.

ಇದನ್ನೂ ಓದಿ: ಆ ದೃಶ್ಯಕ್ಕೆ ಒಳ ಉಡುಪಿನಲ್ಲಿ ಬಾ ಅಂದ್ರು; ಬಾಲಿವುಡ್ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ರಾಧಿಕಾ ಆಪ್ಟೆ

ವಿಡಿಯೋ ಲೀಕ್​ನಿಂದ ರಾಧಿಕಾ ಒಂಟಿಯಾಗಿರಲು ತುಂಬಾ ಹೆದರಿದ್ದರು. ತಮ್ಮ ಕುಟುಂಬದ ಸುರಕ್ಷತೆಯ ಬಗ್ಗೆ ಅವರಿಗೆ ಆತಂಕವಿತ್ತು. ಈ ಭಯದಿಂದಾಗಿ ಅವರು ಬಂದಿದ್ದ ಒಂದು ಒಳ್ಳೆ ಸಿನಿಮಾವನ್ನು ತಿರಸ್ಕರಿಸಿದರು. ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ಆ ಸಿನಿಮಾ ಮಾಡದಂತೆ ಸಲಹೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More