‘ಮೋಟಾರ್ ಸೈಕಲ್ ಡೈರೀಸ್’ ಹೊಸ ಸಿನಿಮಾ ಘೋಷಿಸಿದ ರಿಷಬ್ ಶೆಟ್ಟಿ
ನಟ, ನಿರ್ದೇಶಕ, ನಿರ್ಮಾಪಕ ಮೂರು ವಿಭಾಗಗಳಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ ರಿಷಬ್ ಶೆಟ್ಟಿ ಅವರಿಗೆ ನಿನ್ನೆಯಷ್ಟೇ (ನವೆಂಬರ್ 28) ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಅದರ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರು ಇಂದು (ನವೆಂಬರ್ 29) ತೆಲುಗಿನ ನಿರ್ಮಾಣ ಸಂಸ್ಥೆಯೊಂದರ ಜೊತೆಗೂಡಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಸಿನಿಮಾದ ಹೆಸರು ‘ಮೋಟಾರ್ ಸೈಕಲ್ ಡೈರೀಸ್’. ಸಿನಿಮಾದ ಪೋಸ್ಟರ್ ಹಾಗೂ ಕೆಲ ಮಾಹಿತಿಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ರಿಷಬ್.

‘ಮೋಟಾರ್ ಸೈಕಲ್ ಡೈರೀಸ್’ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಜೊತೆಗೂಡಿ ರಿಷಬ್ ಶೆಟ್ಟಿ ಈ ಸಿನಿಮಾ ಘೋಷಣೆ ಮಾಡಿದ್ದಾರೆ. ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಪೋಸ್ಟರ್‌ನಲ್ಲಿ ಡೈರಿ ಹಾಳೆಗಳ ನಡುವೆ ವ್ಯಕ್ತಿಯೊಬ್ಬ ಬುಲೆಟ್ ಬೈಕ್ ಓಡಿಸುತ್ತಿರುವ ಚಿತ್ರವಿದೆ. ಸಿನಿಮಾದ ಪೋಸ್ಟರ್ ಮತ್ತು ಹೆಸರು ನೋಡಿದರೆ ಇದೊಂದು ‘ಫೀಲ್ ಗುಡ್’ ಜಾನರ್‌ಗೆ ಸೇರಿದ ಸಿನಿಮಾ ಇರಬಹುದೆಂದು ಊಹೆ ಮಾಡಬಹುದಾಗಿದೆ.
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಸೂರ್ಯದೇವರ ನಾಗವಂಶಿ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಶಿವ ಚಿರಂತನ ಬರೆದು ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಲಿದ್ದಾರೆ. ಸಿನಿಮಾದ ನಟ-ನಟಿ ಇನ್ನಿತರೆ ಮಾಹಿತಿಗಳನ್ನು ಇನ್ನಷ್ಟೇ ಘೋಷಣೆ ಮಾಡಬೇಕಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಯಾವುದೇ ಖಾತ್ರಿ ಇಲ್ಲ.
View this post on Instagram
ಕೆಲ ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡಿದ್ದ ರಿಷಬ್ ಶೆಟ್ಟಿ, ‘ಅಧ್ಯಾಯ ಎರಡು ಇಲ್ಲಿಂದ ಶುರು’ ಎಂದು ಬರೆದುಕೊಂಡಿದ್ದರು. ಅದಾದ ಬಳಿಕ ಸಿನಿಮಾವೊಂದಕ್ಕಾಗಿ ಕಾಸ್ಟಿಂಗ್ ಕಾಲ್ ಸಹ ಮಾಡಿದ್ದರು. ಅದು ಈಗ ಘೋಷಣೆ ಮಾಡಲಾಗಿರುವ ‘ಮೋಟಾರ್ ಸೈಕಲ್ ಡೈರೀಸ್’ ಸಿನಿಮಾಕ್ಕಾಗಿಯೇ ಮಾಡಲಾಗಿದ್ದ ಕಾಸ್ಟಿಂಗ್ ಕಾಲ್ ಆಗಿತ್ತು. ಬೆಂಗಳೂರು ಮತ್ತು ಕಲಬುರಗಿಗಳಲ್ಲಿ ಆಡಿಷನ್ ಅನ್ನು ರಿಷಬ್ ಶೆಟ್ಟಿ ಮಾಡಿದ್ದರು. ಇದೀಗ ಅಧಿಕೃತವಾಗಿ ಸಿನಿಮಾ ಘೋಷಣೆ ಮಾಡಲಾಗಿದ್ದು, ಪೋಸ್ಟರ್ ಹಂಚಿಕೊಂಡಿರುವ ಜೊತೆಗೆ ‘ಪ್ರತಿ ಮೈಲಿಗಲ್ಲೂ ಒಂದು ನೆನಪು, ಪ್ರತಿ ತಿರುವಲ್ಲೂ ಒಂದು ಕಥೆ’ ಎಂದು ಬರೆದುಕೊಂಡಿದ್ದಾರೆ.
ಇನ್ನು ರಿಷಬ್ ಶೆಟ್ಟಿ ಅವರು ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಬಳಿಕ ಶಿವಾಜಿ ಕುರಿತಾದ ಹಿಂದಿ ಸಿನಿಮಾದಲ್ಲಿ ನಟನೆ ಮಾಡಲಿದ್ದಾರೆ. ಅದರ ಬಳಿಕ ತಮ್ಮದೇ ನಿರ್ದೇಶನದ ಹೊಸ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟನೆ ಮಾಡಲಿದ್ದಾರೆ. ಅದು ‘ಕಾಂತಾರ: ಚಾಪ್ಟರ್ 2’ ಆಗಿರಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ