AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಲ್ಕರ್ ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ ರಾಜಮೌಳಿ

ಹಲವಾರು ಸಿನಿಮಾ ಸೆಲೆಬ್ರಿಟಿಗಳು ‘ಆಕಾಶಂಲೊ ಒಕ ತಾರ’ ಸಿನಿಮಾ ನೋಡಿ ಮೆಚ್ಚಿ ಕೊಂಡಾಡುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ‘ಪುಷ್ಪ’ ನಿರ್ದೇಶಕ ಸುಕುಮಾರ್, ಈಗ ರಾಜಮೌಳಿಯೂ ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು, ದುಲ್ಕರ್ ಸಲ್ಮಾನ್ ಅವರನ್ನು ಕೊಂಡಾಡಿದ್ದಾರೆ. ‘ನೀವು ಇಲ್ಲದೇ ಹೋಗಿದ್ದರೆ ಈ ಸಿನಿಮಾ ನಿರ್ಮಾಣವೇ ಆಗುತ್ತಿರಲಿಲ್ಲವೇನೋ’ ಎಂದಿದ್ದಾರೆ.

ದುಲ್ಕರ್ ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ ರಾಜಮೌಳಿ
Ss Rajamouli Dulquer
ಮಂಜುನಾಥ ಸಿ.
|

Updated on: Nov 29, 2026 | 6:55 PM

Share

ಮುಖ್ಯಾಂಶಗಳು

  • ದುಲ್ಕರ್ ಸಿನಿಮಾ ಕೊಂಡಾಡಿದ ರಾಜಮೌಳಿ
  • ಆಕಾಶಂಲೊ ಒಕ ತಾರಾ ಸಿನಿಮಾ ವೀಕ್ಷಿಸಿದ ರಾಜಮೌಳಿ
  • ಭರ್ಜರಿ ಗಳಿಕೆ ಮಾಡುತ್ತಿದೆ ಸಿನಿಮಾ

ಪ್ರಸ್ತುತ ಭಾರತೀಯ ಚಿತ್ರರಂಗ ಕಮರ್ಷಿಯಲ್, ಮಾಸ್ ಮಸಾಲಾ, ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಓಡುತ್ತಿದೆ. ಸ್ಲೋ ಮೋಷನ್ ಎಂಟ್ರಿ ಸೀನ್‌ಗಳು, ಕಿವಿಗಡಚಿಕ್ಕುವ ಸಂಗೀತ, ಹತ್ತಾರು ಫೈಟ್ ಸೀನ್‌ಗಳು, ಐಟಂ ಹಾಡುಗಳು, ಭರ್ಜರಿ ಡೈಲಾಗ್‌ಗಳು, ಓವರ್ ದಿ ಟಾಪ್ ವಿಎಫ್‌ಎಕ್ಸ್‌ಗಳು—ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಸಣ್ಣ, ಮಧ್ಯಮ, ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಕಾಣಸಿಗುತ್ತಿರುವ ಕಾಮನ್ ವಿಷಯಗಳಾಗಿಬಿಟ್ಟಿವೆ. ಮನಸ್ಸಿಗೆ ತಾಗುವ ಕತೆಯುಳ್ಳ ಸಿನಿಮಾಗಳು ಅಪರೂಪವಾಗಿವೆ. ಆದರೆ ಅಲ್ಲಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಲೇ ಇದ್ದು, ಇಂತಹ ಒಳ್ಳೆಯ ಪ್ರಯತ್ನಕ್ಕೆ ಜನಬೆಂಬಲವೂ ಸಿಗುತ್ತಿದೆ. ಅಂತಹುದೇ ಒಂದು ಪ್ರಯತ್ನ ‘ಆಕಾಶಂಲೊ ಒಕ ತಾರ’.

ದುಲ್ಕರ್ ಸಲ್ಮಾನ್ ನಟಿಸಿರುವ ತೆಲುಗು ಸಿನಿಮಾ ‘ಆಕಾಶಂಲೊ ಒಕ ತಾರ’ ಸರಳವಾದ ಆದರೆ ಸುಂದರ ಕತೆಯುಳ್ಳ ಸಿನಿಮಾ, ಇದೀಗ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಆಕ್ಷನ್, ಫೈಟ್ ಯಾವುದೂ ಇಲ್ಲದ ಅಪ್ಪಟ ಕೌಟುಂಬಿಕ ಕತೆ ಹೊಂದಿರುವ ಈ ಸಿನಿಮಾ ಇದೀಗ ತೆಲುಗಿನ ಕೌಟುಂಬಿಕ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುತ್ತಿದೆ. ಸ್ಟಾರ್ ಹೀರೋ ಆದರೂ ನಾಯಕಿ ಪ್ರಧಾನ ಸಿನಿಮಾ ಒಪ್ಪಿಕೊಂಡು ಅದ್ಭುತವಾಗಿ ನಟಿಸಿ ಅದರಲ್ಲೂ ಮಿಂಚಿದ್ದಾರೆ ದುಲ್ಕರ್ ಸಲ್ಮಾನ್.

ಹಲವಾರು ಸಿನಿಮಾ ಸೆಲೆಬ್ರಿಟಿಗಳು ‘ಆಕಾಶಂಲೊ ಒಕ ತಾರ’ ಸಿನಿಮಾ ನೋಡಿ ಮೆಚ್ಚಿ ಕೊಂಡಾಡುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ‘ಪುಷ್ಪ’ ನಿರ್ದೇಶಕ ಸುಕುಮಾರ್, ಈಗ ರಾಜಮೌಳಿಯೂ ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು, ದುಲ್ಕರ್ ಸಲ್ಮಾನ್ ಅವರನ್ನು ಕೊಂಡಾಡಿದ್ದಾರೆ. ‘ನೀವು ಇಲ್ಲದೇ ಹೋಗಿದ್ದರೆ ಈ ಸಿನಿಮಾ ನಿರ್ಮಾಣವೇ ಆಗುತ್ತಿರಲಿಲ್ಲವೇನೋ’ ಎಂದಿದ್ದಾರೆ.

ಇದನ್ನೂ ಓದಿ:ಬಿಗ್ ಬಾಸ್ ಧಮಾಕಾ; ಒಂದೇ ವೇದಿಕೆಯಲ್ಲಿ ನಾಲ್ಕು ಭಾರತೀಯ ಚಿತ್ರರಂಗದ ದಿಗ್ಗಜರು

‘ಇಡೀ ಸಿನಿಮಾ ದುಲ್ಕರ್ ಸಲ್ಮಾನ್ ಹೆಗಲ ಮೇಲೆ ಇತ್ತು, ಅವರು ಅದನ್ನು ಅದ್ಭುತವಾಗಿ ಹೊತ್ತು ದಡ ತಲುಪಿಸಿದ್ದಾರೆ. ದುಲ್ಕರ್ ಸಲ್ಮಾನ್, ಅಪ್ಪಟ ತೆಲುಗು ಪ್ರಜೆಯೇ ಆಗಿದ್ದಾರೆ. ಅವರು ಅಪ್ಪಟ ತೆಲುಗು ಕತೆಗಳ ಸಿನಿಮಾಗಳನ್ನು ಆರಿಸಿ ನಟಿಸುತ್ತಿದ್ದಾರೆ’ ಎಂದರು. ಸಿನಿಮಾದ ನಾಯಕಿ ಸಾತ್ವಿಕಾ ನಟನೆಯನ್ನೂ ಕೊಂಡಾಡಿರುವ ರಾಜಮೌಳಿ, ಅವರನ್ನು ಶ್ರೀದೇವಿ ಅವರಿಗೆ ಹೋಲಿಕೆ ಮಾಡಿದ್ದಾರೆ.

ಎಲ್ಲ ನಟರು ಪ್ಯಾನ್ ಇಂಡಿಯಾ, ಮಾಸ್ ಮಸಾಲಾ, ಆಕ್ಷನ್ ಭರಿತ ಸಿನಿಮಾಗಳತ್ತ ಮುಖ ಮಾಡಿದ್ದರೆ ದುಲ್ಕರ್ ಸಲ್ಮಾನ್ ಮಾತ್ರ ಮನಸ್ಸಿಗೆ ತಟ್ಟುವ ಸರಳವಾದ ಸಿನಿಮಾಗಳನ್ನು ಆಯ್ಕೆ ಮಾಡಿ ನಟಿಸಿ ಹಿಟ್ ಮೇಲೆ ಹಿಟ್ ನೀಡುತ್ತಿದ್ದಾರೆ. ಅವರ ನಟನೆಯ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳಾದ ‘ಲಕ್ಕಿ ಭಾಸ್ಕರ್’, ‘ಸೀತಾ ರಾಮಂ’, ‘ಕಾಂತಾ’, ಈಗ ‘ಆಕಾಶಂಲೊ ಒಕ ತಾರ’ದಲ್ಲೂ ನಟಿಸಿದ್ದು, ಎಲ್ಲವೂ ಹಿಟ್ ಆಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More