AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಭಾರತೀಯ ಚಿತ್ರರಂಗ; ಹೊಸ ದಾಖಲೆ

ಭಾರತೀಯ ಚಿತ್ರರಂಗವು 2026ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾಗಳ ವಿಶ್ವಾದ್ಯಂತ ಒಟ್ಟು ಗಳಿಕೆಯು 15,637 ಕೋಟಿ ರೂಪಾಯಿಗಳನ್ನು ದಾಟಿದೆ. ರಾಮಾಯಣ, ಧುರಂಧರ್ 2 ಹಾಗೂ ಜೈಲರ್ 2 ಸಿನಿಮಾಗಳ ಭರ್ಜರಿ ಯಶಸ್ಸು ಈ ಬೃಹತ್ ದಾಖಲೆಗೆ ಕಾರಣವಾಗಿದೆ.

15 ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಭಾರತೀಯ ಚಿತ್ರರಂಗ; ಹೊಸ ದಾಖಲೆ
15 ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಭಾರತೀಯ ಚಿತ್ರರಂಗ; ಹೊಸ ದಾಖಲೆ
ರಾಜೇಶ್ ದುಗ್ಗುಮನೆ
|

Updated on: Nov 18, 2026 | 2:43 PM

Share

ಮುಖ್ಯಾಂಶಗಳು

  • 2026ರಲ್ಲಿ 15,637 ಕೋಟಿ ರೂ. ಬಾಚಿಕೊಂಡು ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಚಿತ್ರರಂಗ
  • 'ರಾಮಾಯಣ', 'ಧುರಂಧರ್ 2' ಮತ್ತು 'ಜೈಲರ್ 2' ಅಬ್ಬರ
  • ಪ್ರೇಮದ ಊರಲಿ ಚಿತ್ರದಿಂದಲೂ ಸಿಕ್ತು ಕೊಡುಗೆ

ಕೋವಿಡ್ ಲಾಕ್‌ಡೌನ್ ಕರಾಳ ದಿನಗಳಿಂದ ಹೊರಬಂದ ಭಾರತೀಯ ಚಿತ್ರರಂಗ ಈಗ ಹೊಸ ಇತಿಹಾಸ ಸೃಷ್ಟಿಸಿದೆ. 2020 ಮತ್ತು 2021ರಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರೋದ್ಯಮ ಮತ್ತೆ ಭರ್ಜರಿಯಾಗಿ ಪುಟಿದೆದ್ದಿದೆ. ಎಲ್ಲಾ ಭಾಷೆಗಳ ಸಿನಿಮಾಗಳ ಸಂಘಟಿತ ಪ್ರಯತ್ನದಿಂದ ಪ್ರೇಕ್ಷಕರು ಥಿಯೇಟರ್‌ಗಳತ್ತ ಮುಗಿಬಿದ್ದಿದ್ದಾರೆ. 2026ರಲ್ಲಿ ಭಾರತೀಯ ಸಿನಿಮಾಗಳ ವಿಶ್ವಾದ್ಯಂತ ಕಲೆಕ್ಷನ್ ಇದೇ ಮೊದಲ ಬಾರಿಗೆ 15,000 ಕೋಟಿ ರೂಪಾಯಿ ಗಡಿ ದಾಟಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ.

ನವೆಂಬರ್ 15ರವರೆಗಿನ ಅಂಕಿಅಂಶಗಳ ಪ್ರಕಾರ ಭಾರತೀಯ ಸಿನಿಮಾಗಳು ದೇಶೀಯ ಮಾರುಕಟ್ಟೆಯಲ್ಲಿ 11,789 ಕೋಟಿ ರೂ. ನೆಟ್ ಗಳಿಕೆ ಕಂಡಿವೆ. ವಿಶ್ವಾದ್ಯಂತ ಒಟ್ಟು 15,637 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿವೆ. ಈ ವರ್ಷ ಒಟ್ಟು 1,141 ಭಾರತೀಯ ಸಿನಿಮಾಗಳು ತೆರೆಕಂಡಿವೆ. ‘ರಾಮಾಯಣ’ ಮತ್ತು ‘ಧುರಂಧರ್: ದಿ ರಿವೆಂಜ್’ ಚಿತ್ರಗಳು ಒಟ್ಟಾಗಿ 3,000 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿ ಬಾಲಿವುಡ್ ಕೀರ್ತಿಯನ್ನು ಹೆಚ್ಚಿಸಿವೆ.

ತಮಿಳಿನಲ್ಲಿ ರಜನಿಕಾಂತ್ ಅವರ ‘ಜೈಲರ್ 2’ ಸಿನಿಮಾ 835 ಕೋಟಿ ರೂ. ಬಾಚಿಕೊಂಡು ಅತಿ ದೊಡ್ಡ ಹಿಟ್ ಎನಿಸಿಕೊಂಡಿದೆ. ನಟ ಸೂರ್ಯ ಅವರ ಮೂರು ಸಿನಿಮಾಗಳು 200 ಕೋಟಿ ಕ್ಲಬ್ ಸೇರಿವೆ. ತಮಿಳಿನ ‘ಡಿಸಿ’ ಸಿನಿಮಾ ಕೂಡ ಉತ್ತಮ ಗಳಿಕೆ ಮಾಡಿದೆ. ಮಲಯಾಳಂನ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಚಿತ್ರ 330 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಆದರೆ ಕನ್ನಡದ ‘ಟಾಕ್ಸಿಕ್’, ತಮಿಳಿನ ‘ಜನ ನಾಯಗನ್’, ತೆಲುಗಿನ ‘ಪೆದ್ದಿ’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ನಿರಾಸೆ ಮೂಡಿಸಿವೆ. ಆದರೆ ಇವು ಕೂಡ ಸಣ್ಣ ಪ್ರಮಾಣದ ಕೊಡುಗೆ ನೀಡಿವೆ.

ದೊಡ್ಡ ಬಜೆಟ್ ಸಿನಿಮಾಗಳ ಜೊತೆಗೆ ಸಣ್ಣ ಬಜೆಟ್ ಚಿತ್ರಗಳೂ ಈ ವರ್ಷ ಭರ್ಜರಿ ಲಾಭ ಮಾಡಿವೆ. ‘ಪ್ರೇಮದ ಊರಲಿ’ ಸಿನಿಮಾ ಕೇಲವ 3 ಕೋಟಿ ಬಜೆಟ್​​ನಲ್ಲಿ ರೆಡಿ ಆಗಿ, 130 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕೇವಲ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ‘ಹನುಮಾನ್ ಅಂಶ್’ ಭಕ್ತಿಪ್ರಧಾನ ಚಿತ್ರವು 440 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಇದು ಭಾರತೀಯ ಚಿತ್ರರಂಗದ ಅತ್ಯಂತ ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ. ಸ್ಟಾರ್ ನಟರಿಲ್ಲದ ‘ಮಿರ್ಜಾಪುರ್’ ಸಿನಿಮಾ ಕೂಡ 325 ಕೋಟಿ ರೂ. ಬಾಚಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಇದನ್ನೂ ಓದಿ: ಎರಡನೇ ಸೋಮವಾರವೂ ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಅಬ್ಬರ; 1,400 ಕೋಟಿ ರೂ. ಕ್ಲಬ್ ಸೇರಿದ ಸಿನಿಮಾ

ಭಾರತದಲ್ಲಿ ವಿದೇಶಿ ಸಿನಿಮಾಗಳೂ ಉತ್ತಮ ವಹಿವಾಟು ನಡೆಸಿದ್ದು 1,500 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿವೆ. ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರ ಭಾರತದಲ್ಲಿ 594 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ ಚಿತ್ರ 200 ಕೋಟಿ ರೂ. ದಾಟಿದೆ. ಒಟ್ಟಾರೆಯಾಗಿ 2026ನೇ ಇಸವಿಯು ಭಾರತೀಯ ಚಿತ್ರರಂಗದ ಪಾಲಿಗೆ ಸುವರ್ಣ ವರ್ಷವಾಗಿ ದಾಖಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ
ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ
ಎರಡು ದಿನಗಳ ಫಿಲಿಪೈನ್ಸ್​ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಪ್ರಧಾನಿ ಮೋದಿ
ಎರಡು ದಿನಗಳ ಫಿಲಿಪೈನ್ಸ್​ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಪ್ರಧಾನಿ ಮೋದಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ