AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೀರ್ಥಹಳ್ಳಿಯಲ್ಲಿ ಅರಣ್ಯ ವೀಕ್ಷಕನ ಮನೆಯಲ್ಲಿಯೇ ಲಕ್ಷಾಂತರ ಮೌಲ್ಯದ ಅಕ್ರಮ ನಾಟ ವಶ!

ತೀರ್ಥಹಳ್ಳಿಯಲ್ಲಿ ಅರಣ್ಯ ವೀಕ್ಷಕನ ಮನೆಯಲ್ಲಿಯೇ ಲಕ್ಷಾಂತರ ಮೌಲ್ಯದ ಅಕ್ರಮ ನಾಟ ವಶ!

Basavaraj Yaraganavi
| Edited By: |

Updated on:Sep 26, 2026 | 6:31 AM

Share

ತೀರ್ಥಹಳ್ಳಿಯ ಮುಂಡುವಳ್ಳಿ ಗ್ರಾಮದಲ್ಲಿ ಅರಣ್ಯ ವೀಕ್ಷಕ ಫಿಲಿಪ್ ಡಿಸೋಜಾ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊನ್ನೆ, ಮತ್ತಿ, ಬೋಗಿ ಜಾತಿಯ ಮರಗಳನ್ನು ಅಕ್ರಮವಾಗಿ ಕಡಿದು ಸಂಗ್ರಹಿಸಿದ್ದ ಈತ ಹತ್ತು ಎಕರೆ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ತೋಟವನ್ನಾಗಿ ಪರಿವರ್ತಿಸಿರೋದು ಕೂಡ ಗೊತ್ತಾಗಿದೆ.

ಶಿವಮೊಗ್ಗ, ಸೆಪ್ಟೆಂಬರ್​​ 26: ತೀರ್ಥಹಳ್ಳಿ ತಾಲೂಕಿನ ಮುಂಡುವಳ್ಳಿ ಗ್ರಾಮದ ಶಾಂತಿಕೆರೆಯ ಮೃಗವಧೆ ಮೀಸಲು ಅರಣ್ಯದ ಸರ್ವೇ ನಂ. 188ರಲ್ಲಿ ಅಕ್ರಮ ನಾಟ (ಮರದ ದಿಮ್ಮಿ) ದಂಧೆ ಬಯಲಾಗಿದೆ. ಫಾರೆಸ್ಟ್ ವಾಚರ್ ಫಿಲಿಪ್ ಡಿಸೋಜಾ ತೋಟದ ಮನೆಯಲ್ಲಿ ಅಕ್ರಮ ನಾಟ ಪತ್ತೆಯಾಗಿದ್ದು, ಹೊನ್ನೆ, ಮತ್ತಿ, ಬೋಗಿ ಸೇರಿದಂತೆ ವಿವಿಧ ಜಾತಿಯ ಮರಗಳ ನಾಟ ಸಿಕ್ಕಿವೆ. ಕಾಡಿನ ಮರಗಳನ್ನು ಕಡಿದು ನಾಟಗಳನ್ನು ಸಿದ್ಧಪಡಿಸಿದ್ದ ವಾಚರ್​​ಗೆ ಡಿಆರ್​​ಎಫ್​​ಒ ಹರೀಶ್ ನಾಯ್ಕ್ ಕೂಡ ಸಾಥ್​​ ನೀಡಿದ್ದಾರೆ ಎನ್ನಲಾಗಿದ್ದು, ಫಿಲಿಪ್ ಎಂಪಿಎಂನ ನಡುತೋಪಿನ ಅರಣ್ಯವಲಯದಲ್ಲಿ ವಾಚರ್ ಆಗಿದ್ದಾರೆ. ಎಂಪಿಎಂಗೆ ಸೇರಿದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ 10 ಎಕೆರೆಗೂ ಅಧಿಕ ಭೂಮಿಯಲ್ಲಿ ತೋಟವನ್ನೂ ಮಾಡಲಾಗಿದ್ದು, ಅಕ್ರಮ ನಾಟ ಸಂಗ್ರಹಿಸಿರುವ ಕುರಿತು ಶಿವಮೊಗ್ಗ ಡಿಎಫ್ ಒಗೆ ದೂರು ನೀಡಲಾಗಿತ್ತು. ಈ ಸಂಬಂಧ ದಾಳಿ ನಡೆಸಿದ ಸಂಚಾರಿ ಅರಣ್ಯಾಧಿಕಾರಿಗಳ ವಿಭಾಗ, ವಾಚರ್ ಮನೆಯಲ್ಲಿರುವ ಅಕ್ರಮ ನಾಟ ಸೀಜ್ ಮಾಡಿದೆ. ವಾಚರ್​​ಗೆ ಸಾಥ್ ನೀಡಿರುಡಿಆರ್​​ಎಫ್​​ಒ ಹರೀಶ್ ನಾಯ್ಕ್ ವಿರುದ್ಧವೂ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Sep 26, 2026 06:30 AM

Follow Us
Basavaraj Yaraganavi
Basavaraj Yaraganavi