ನಿರ್ದೇಶಕಿ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಯಶ್ ಬಿಚ್ಚು ಮಾತು
Toxic movie: ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್ದಾಸ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಗೀತೂ ಮೋಹನ್ದಾಸ್, ಯಶ್ ಅವರ ಬಗ್ಗೆ ಬಹಳ ಪ್ರೀತಿ, ಗೌರವದಿಂದ ಮಾತನಾಡಿ ಗಾಸಿಪ್ಗಳಿಗೆ ತೆರೆ ಎಳೆದಿದ್ದರು. ಆದರೆ ಇದೀಗ ನಟ ಯಶ್, ತಮ್ಮ ಹಾಗೂ ಗೀತೂ ಮೋಹನ್ದಾಸ್ ನಡುವೆ ಮೂಡಿದ್ದ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ್ದಾರೆ.

ಮುಖ್ಯಾಂಶಗಳು
- ‘ಟಾಕ್ಸಿಕ್’ ಸಿನಿಮಾ ಶೀಘ್ರ ಬಿಡುಗಡೆ ಆಗಲಿದೆ.
- ಯಶ್ ಅವರು ನಿರ್ದೇಶಕಿ ಬಗ್ಗೆ ಆಸಕ್ತಿಕರ ವಿಷಯ ಹೇಳಿದ್ದಾರೆ.
- ಇಬ್ಬರ ನಡುವೆ ಮೂಡಿದ್ದ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ್ದಾರೆ.
‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಯಶ್ ಅವರೇ ಹೇಳಿದಂತೆ ಅವರು ಈ ಸಿನಿಮಾಕ್ಕಾಗಿ ಸುಮಾರು ಐದು ವರ್ಷ ಕೆಲಸ ಮಾಡಿದ್ದಾರಂತೆ. ಸಿನಿಮಾದ ಚಿತ್ರೀಕರಣ ನಡೆಯುವಾಗ ಹಲವು ಬಾರಿ ಸಿನಿಮಾ ಬಗ್ಗೆ ಏನೇನೋ ಸುದ್ದಿಗಳು ಹರಿದಾಡಿದ್ದವು. ಸಿನಿಮಾ ನಿಂತು ಹೋಗಿದೆ. ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್ದಾಸ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಗೀತೂ ಮೋಹನ್ದಾಸ್, ಯಶ್ ಅವರ ಬಗ್ಗೆ ಬಹಳ ಪ್ರೀತಿ, ಗೌರವದಿಂದ ಮಾತನಾಡಿ ಗಾಸಿಪ್ಗಳಿಗೆ ತೆರೆ ಎಳೆದಿದ್ದರು. ಆದರೆ ಇದೀಗ ನಟ ಯಶ್, ತಮ್ಮ ಹಾಗೂ ಗೀತೂ ಮೋಹನ್ದಾಸ್ ನಡುವೆ ಮೂಡಿದ್ದ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ನಡೆದ ‘ಟಾಕ್ಸಿಕ್’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಯಶ್, ಸಿನಿಮಾದ ಸಂಗೀತದ ಬಗ್ಗೆ, ಹಾಡುಗಳ ಬಗ್ಗೆ, ಅವುಗಳು ಹುಟ್ಟಿದ ರೀತಿಯ ಬಗ್ಗೆ ಮಾತನಾಡಿದರು. ಈ ವೇಳೆ, ತಮಗೂ ಹಾಗೂ ನಿರ್ದೇಶಕಿ ಗೀತೂ ಮೋಹನ್ ನಡುವೆ ಉಂಟಾದ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದರು.
‘ಸಂಗೀತ ಮಾಡುವಾಗ ಸಾಕಷ್ಟು ಸಮಸ್ಯೆ ಆಯ್ತು. ಗೀತೂ ಅವರದ್ದು, ತುಸು ಪಾಶ್ಚಿಮಾತ್ಯ ಸಂಗೀತದ ರುಚಿ. ವೆಸ್ಟರ್ನ್ ಮಾದರಿಯ ಸಂಗೀತಕ್ಕೆ, ಹಾಡುಗಳಿಗೆ ಅವರು ಬೇಡಿಕೆ ಇಡುತ್ತಿದ್ದರು. ಆದರೆ ನನಗೆ ನನ್ನ ಅಭಿಮಾನಿಗಳ ಬಗ್ಗೆಯೂ ಗಮನ ಹರಿಸಬೇಕಿತ್ತು. ನನಗೆ ತುಸು ಲೋಕಲ್, ಇಂಡಿಯನ್ ಶೈಲಿಯ ಸಂಗೀತದ ಕಡೆಗೆ ಒಲವು. ಈ ವಿಷಯವಾಗಿ ನನಗೆ ಹಾಗೂ ಗೀತೂ ಅವರಿಗೆ ಭಿನ್ನಾಭಿಪ್ರಾಯ ಮೂಡಿತ್ತು’ ಎಂದಿದ್ದಾರೆ ನಟ ಯಶ್.
ಇದನ್ನೂ ಓದಿ:ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಸೆಟ್ ಹಾಕಲು ಅಂದಾಜು 75 ಕೋಟಿ ರೂಪಾಯಿ ಬಜೆಟ್
‘ಟಾಕ್ಸಿಕ್’ ಸಿನಿಮಾದ ಎರಡು ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಎರಡೂ ಹಾಡುಗಳು ಹಿಟ್ ಆಗಿವೆ. ಅದರಲ್ಲೂ ಯಶ್ ಹಾಗೂ ಕಿಯಾರಾ ನಟಿಸಿರುವ ‘ತಬಾಹಿ’ ಹಾಡಂತೂ ದೊಡ್ಡ ಹಿಟ್ ಎನಿಸಿಕೊಂಡಿದೆ. ಸಿನಿಮಾಕ್ಕೆ ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಕೆಲ ಹಾಡುಗಳಿಗೆ ವಿಶಾಲ್ ಮಿಶ್ರಾ ಸಂಗೀತ ನೀಡಿದ್ದಾರೆ.
‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಅನ್ನು ಗೀತೂ ಮೋಹನ್ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಹಾಗೂ ಯಶ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




