ತೆಲುಗು ಚಿತ್ರರಂಗವ ಟೀಕಿಸಿದ ಮಹೇಶ್ ಬಾಬು ಪುತ್ರ ಗೌತಮ್
ಗೌತಮ್ ಗಟ್ಟಿಮನೇನಿ ಸಿನಿಮಾ ಬಗ್ಗೆ ಆಸಕ್ತಿಯುಳ್ಳ ಯುವಕ ಆಗಿದ್ದು, ಸಿನಿಮಾಗಳನ್ನು ನೋಡುವುದು ಅವುಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವುದು ಮಾಡುತ್ತಲೇ ಇರುತ್ತಾರೆ. ಈ ಹಿಂದೆ ‘ಟಾಕ್ಸಿಕ್’ ಸಿನಿಮಾದ ಅವರು ಹಂಚಿಕೊಂಡಿದ್ದ ಋಣಾತ್ಮಕ ಅಭಿಪ್ರಾಯ ಸುದ್ದಿ ಆಗಿತ್ತು. ಹಲವು ಸಿನಿಮಾಗಳಿಗೆ ಅವರು ಋಣಾತ್ಮಕ ಅಭಿಪ್ರಾಯವನ್ನೇ ಹಂಚಿಕೊಂಡಿದ್ದಾರೆ. ಇದೀಗ ಅಂಥಹುದೇ ಒಂದು ವಿಮರ್ಶೆಯ ವೇಳೆ ತೆಲುಗು ಚಿತ್ರರಂಗವನ್ನು ಟೀಕೆ ಮಾಡಿದ್ದಾರೆ.

ಮುಖ್ಯಾಂಶಗಳು
- ತೆಲುಗು ಚಿತ್ರರಂಗದ ಬಗ್ಗೆ ಮಹೇಶ್ ಪುತ್ರ ವಿಮರ್ಶೆ
- ತೆಲುಗು ಚಿತ್ರರಂಗದ ಬಗ್ಗೆ ಟೀಕೆ ಮಾಡಿದ ಗೌತಮ್
- ಗೌತಮ್ ಗಟ್ಟಿನೇನಿ ಹೇಳಿರುವುದೇನು?
ಇತ್ತೀಚೆಗಷ್ಟೆ ನಡೆದ ಸಿನಿಮಾ ಕಾರ್ಯಕ್ರಮದಲ್ಲಿ ನಟ ಸುದೀಪ್, ‘ಚಿತ್ರರಂಗ ನನ್ನ ಪಾಲಿನ ದೇವಸ್ಥಾನ’ ಎಂದರು. ಸುದೀಪ್ ಮಾತ್ರವೇ ಅಲ್ಲ, ಯಾವುದೇ ಸ್ಟಾರ್ ನಟರುಗಳು ತಮಗೆ ಗುರುತು, ಹಣ, ಐಶ್ವರ್ಯಾ, ಜನಪ್ರಿಯತೆ ಕೊಟ್ಟ ಚಿತ್ರರಂಗವನ್ನು ಟೀಕಿಸುವುದಿಲ್ಲ. ಅವರ ಕುಟುಂಬದವರೂ ಅಷ್ಟೆ. ಆದರೆ ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಅವರ ಪುತ್ರ ಗೌತಮ್ ಗಟ್ಟಿಮನೇನಿ ಸ್ಟೈಲೇ ವಿಚಿತ್ರ. ತನ್ನ ತಂದೆಯನ್ನು ಸ್ಟಾರ್ ಮಾಡಿ ಮೆರೆಸುತ್ತಿರುವ ತೆಲುಗು ಚಿತ್ರರಂಗವನ್ನು ಟೀಕೆ ಮಾಡಿದ್ದಾರೆ.
ಗೌತಮ್ ಗಟ್ಟಿಮನೇನಿ ಸಿನಿಮಾ ಬಗ್ಗೆ ಆಸಕ್ತಿಯುಳ್ಳ ಯುವಕ ಆಗಿದ್ದು, ಸಿನಿಮಾಗಳನ್ನು ನೋಡುವುದು ಅವುಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವುದು ಮಾಡುತ್ತಲೇ ಇರುತ್ತಾರೆ. ಈ ಹಿಂದೆ ‘ಟಾಕ್ಸಿಕ್’ ಸಿನಿಮಾದ ಅವರು ಹಂಚಿಕೊಂಡಿದ್ದ ಋಣಾತ್ಮಕ ಅಭಿಪ್ರಾಯ ಸುದ್ದಿ ಆಗಿತ್ತು. ಹಲವು ಸಿನಿಮಾಗಳಿಗೆ ಅವರು ಋಣಾತ್ಮಕ ಅಭಿಪ್ರಾಯವನ್ನೇ ಹಂಚಿಕೊಂಡಿದ್ದಾರೆ. ಇದೀಗ ಅಂಥಹುದೇ ಒಂದು ವಿಮರ್ಶೆಯ ವೇಳೆ ತೆಲುಗು ಚಿತ್ರರಂಗವನ್ನು ಟೀಕೆ ಮಾಡಿದ್ದಾರೆ.
ವೆಂಕಟೇಶ್, ಶ್ರೀನಿಧಿ ಶೆಟ್ಟಿ ನಟಿಸಿ, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿರುವ ‘ಆದರ್ಶ ಕುಟುಂಬಂ 47’ ಸಿನಿಮಾ ಅನ್ನು ವಿಮರ್ಶೆ ಮಾಡಿರುವ ಗೌತಮ್ ‘ಕಥಾವಸ್ತುವು ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಅದನ್ನು ತೆರೆಗೆ ತಂದಿರುವ ರೀತಿಯಲ್ಲಿ ಒಂದು ಬಗೆಯ ‘ಸೋಮಾರಿತನ’ ಎದ್ದು ಕಾಣುತ್ತದೆ. ಪ್ರಸ್ತುತ ಟಾಲಿವುಡ್‌ನ ಬಹುತೇಕ ‘ಸ್ಟಾರ್’ ನಟರ ಸಿನಿಮಾಗಳಲ್ಲಿ ಇದೇ ರೀತಿಯ ಸಮಸ್ಯೆ ಕಂಡುಬರುತ್ತದೆ. ಅಲ್ಲದೆ, ಕೆಲವು ಹಿನ್ನೆಲೆ ಸಂಗೀತಗಳು, ಎಐ ಬಳಸಿ ಸೃಷ್ಟಿಸಿದಂತಿವೆ. ಇದು ನಿಜವಾಗಿರಬಾರದೆಂದೇ ನಾನು ಆಶಿಸುತ್ತೇನೆ. ಇನ್ನು ಕೆಲವು ಕಡೆ ಡಬ್ಬಿಂಗ್ ಕೂಡ ದೃಶ್ಯದೊಂದಿಗೆ ಸರಿಯಾಗಿ ಹೊಂದಿಕೆಯಾಗಿರಲಿಲ್ಲ, ಇದು ಕೂಡ ನಿರ್ಮಾಣದ ಹಂತದಲ್ಲಿನ ಆ ಸೋಮಾರಿತನವನ್ನೇ ಎತ್ತಿ ತೋರಿಸುತ್ತದೆ. ಆದರೂ, ಸಿನಿಮಾ ನನಗೆ ಸಾಕಷ್ಟು ನಗು ತರಿಸಿತು. ಕೆಲವು ಭಾಗಗಳು ನಿಜವಾಗಿಯೂ ಚೆನ್ನಾಗಿದ್ದವು. ಆದರೆ, ಒಟ್ಟಾರೆಯಾಗಿ ಸಿನಿಮಾ ನಿರೀಕ್ಷಿತ ಮಟ್ಟವನ್ನು ತಲುಪದೇ ನಿರಾಸೆ ಮೂಡಿಸಿದ್ದು ವಿಷಾದನೀಯ’ ಎಂದಿದ್ದಾರೆ.
ಇದನ್ನೂ ಓದಿ:ಡಿಸೆಂಬರ್ 4ರಂದು ಬಣ್ಣದಲ್ಲಿ ರಿಲೀಸ್ ಆಗಲಿದೆ ‘ಜಗ ಮೆಚ್ಚಿದ ಮಗ’ ಸಿನಿಮಾ
ಆ ಮೂಲಕ ತೆಲುಗು ಚಿತ್ರರಂಗವು ಸ್ಟಾರ್ ನಟರ ಸಿನಿಮಾಗಳನ್ನು ನಿರ್ಮಿಸುವಾಗ ಸೋಮಾರಿತನವನ್ನು ಪ್ರದರ್ಶಿಸುತ್ತದೆ. ಕಾಳಜಿ ವಹಿಸಿ ಸಿನಿಮಾ ಮಾಡುವುದಿಲ್ಲ ಎಂದು ಪರೋಕ್ಷವಾಗಿ ವಿಮರ್ಶೆ ಮಾಡಿದ್ದಾರೆ. ಗೌತಮ್ ಅವರ ಅಭಿಪ್ರಾಯಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲರು ಟೀಕೆ ಸಹ ಮಾಡಿದ್ದಾರೆ.
ಗೌತಮ್, ಕಟು ವಿಮರ್ಶಕರಾಗಿದ್ದು, ‘ಟಾಕ್ಸಿಕ್’ ಮಾತ್ರವೇ ಅಲ್ಲದೆ ಅವರ ತಂದೆ ಮಹೇಶ್ ಬಾಬು ಅವರ ಕೆಲವು ಸಿನಿಮಾಗಳಿಗೂ ಸಹ ಅವರು ಕೇವಲ ಎರಡು ಸ್ಟಾರ್ಗಳನ್ನು ಈ ಹಿಂದೆ ನೀಡಿದ್ದರು. ಗೌತಮ್ ಗಟ್ಟಿಮನೇನಿಗೆ ನಿರ್ದೇಶಕ ಆಗುವ ಆಸೆ ಇದೆಯಂತೆ. ಈ ಹಿಂದೆ ಅವರು ವಿದೇಶದಲ್ಲಿ ಶಿಕ್ಷಣದ ವೇಳೆ ನಾಟಕ, ಕಿರುಚಿತ್ರಗಳಲ್ಲಿ ನಟನೆ ಸಹ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




