
Mahesh Babu
ಟಾಲಿವುಡ್ನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಚಿತ್ರರಂಗ ಹಿನ್ನೆಲೆಯಿಂದ ಬಂದವರು. ಅವರ ತಂದೆ ಕೃಷ್ಣ ತೆಲುಗಿನಲ್ಲಿ ಹೀರೋ ಹಾಗೂ ರಾಜಕಾರಣಿ ಆಗಿದ್ದರು. ಅವರು 1975ರ ಆಗಸ್ಟ್ 9ರಂದು ತಮಿಳುನಾಡಿನಲ್ಲಿ ಜನಿಸಿದರು. ಬಾಲ ಕಲಾವಿದನಾಗಿಯೇ ಮಹೇಶ್ ಬಾಬು ಚಿತ್ರರಂಗಕ್ಕೆ ಕಾಲಿಟ್ಟರು. 1999ರಲ್ಲಿ ‘ರಾಜ ಕುಮಾರುಡು’ ಸಿನಿಮಾ ಮೂಲಕ ಅವರು ಹೀರೋ ಆಗಿ ಮಿಂಚಿದರು. ಈ ಚಿತ್ರ ಅವರ ವೃತ್ತಿ ಜೀವನವನ್ನು ಬದಲಿಸಿತು. ‘ಪೋಕಿರಿ’, ‘ಮಹರ್ಷಿ’ ಮೊದಲಾದ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಮಹೇಶ್ ಬಾಬು ಅವರು ನಟಿ ನಮ್ರತಾ ಶಿರೋಡ್ಕರ್ ಅವರನ್ನು 2005ರಲ್ಲಿ ಮದುವೆ ಆದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಹೇಶ್ ಬಾಬು ಮಗಳು ಸಿತಾರಾ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.
ಶೋಭಿತಾ ಹಾಗೂ ನಾಗ ಚೈತನ್ಯರನ್ನು ನಿರ್ಲಕ್ಷಿಸಿದ್ರಾ ಮಹೇಶ್ ಬಾಬು?
ಮಹೇಶ್ ಬಾಬು ಅವರು ಅಖಿಲ್ ಅಕ್ಕಿನೇನಿ ಮದುವೆಯಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಅವರನ್ನು ನಿರ್ಲಕ್ಷಿಸಿದ್ದಾರೆ ಎಂಬ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಹೇಶ್ ಬಾಬು ಮತ್ತು ಸಮಂತಾ ಅವರ ನಿಕಟ ಸ್ನೇಹದ ಹಿನ್ನೆಲೆಯಲ್ಲಿ ಈ ಘಟನೆಗೆ ಹಲವು ವ್ಯಾಖ್ಯಾನಗಳು ಕೇಳಿಬರುತ್ತಿವೆ. ನಾಗ ಚೈತನ್ಯ ಮತ್ತು ಶೋಭಿತಾ ವಿವಾಹಕ್ಕೆ ಮಹೇಶ್ ಬಾಬು ಬೇಸರಗೊಂಡಿದ್ದಾರೆ ಎಂಬ ಊಹಾಪೋಹಗಳು ಹಬ್ಬುತ್ತಿವೆ.
- Shreelaxmi H
- Updated on: Jun 17, 2025
- 7:53 am
ಮಹೇಶ್ ಬಾಬು ಸಿನಿಮಾದಲ್ಲಿ ಆರ್. ಮಾಧವನ್? ಹಿರಿದಾಗುತ್ತಿದೆ ಪಾತ್ರವರ್ಗ
ಬಹುನಿರೀಕ್ಷಿತ ‘ಎಸ್ಎಸ್ಎಂಬಿ 29’ ಸಿನಿಮಾದ ಪಾತ್ರವರ್ಗದ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು ಬಹಿರಂಗ ಆಗುತ್ತಿವೆ. ರಾಜಮೌಳಿ, ಮಹೇಶ್ ಬಾಬು ಕಾಂಬಿನೇಷನ್ನ ಈ ಸಿನಿಮಾಗೆ ಸ್ಟಾರ್ ಕಲಾವಿದರು ಒಬ್ಬೊಬ್ಬರಾಗಿಯೇ ಸೇರ್ಪಡೆ ಆಗುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಬಳಿಕ ಆರ್. ಮಾಧವನ್ ಕೂಡ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.
- Madan Kumar
- Updated on: Jun 9, 2025
- 9:03 pm
ಮಹೇಶ್ ಬಾಬು ಧರಿಸಿದ ಈ ಶರ್ಟ್ನ ಬೆಲೆಯಲ್ಲಿ ಬರುತ್ತೆ ದುಬಾರಿ ಬೈಕ್
ಮಹೇಶ್ ಬಾಬು ಅವರು ಧರಿಸಿದ ದುಬಾರಿ ಬೆಲೆಯ ಹರ್ಮೆಸ್ ಟಿ-ಶರ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಖಿಲ್ ಅಕ್ಕಿನೇನಿ ಅವರ ಆರತಕ್ಷತೆಯಲ್ಲಿ ಈ ಟಿ-ಶರ್ಟ್ ಧರಿಸಿದ್ದರು. ಅಭಿಮಾನಿಗಳು ಈ ಬೆಲೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ ಮಹೇಶ್ ಬಾಬು ಅವರ ದುಬಾರಿ ಸಿನಿಮಾ ಸಂಭಾವನೆಯನ್ನು ಪರಿಗಣಿಸಿದರೆ ಇದು ಅಚ್ಚರಿಯಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
- Shreelaxmi H
- Updated on: Jun 9, 2025
- 11:03 am
20 ಕೋಟಿ ರೂ. ಕೊಟ್ಟರೂ ಆ ಪಾತ್ರ ಮಾಡಲ್ಲ: ರಾಜಮೌಳಿಗೆ ನೋ ಎಂದ ನಾನಾ ಪಾಟೇಕರ್
ಬಾಲಿವುಡ್ ನಟ ನಾನಾ ಪಾಟೇಕರ್ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅವರು ಕೇಳಿದಷ್ಟು ಸಂಬಳ ನೀಡಲು ನಿರ್ಮಾಪಕರು ರೆಡಿ ಇದ್ದಾರೆ. ‘ಎಸ್ಎಸ್ಎಂಬಿ 29’ ಸಿನಿಮಾದಲ್ಲಿ ನಾನಾ ಪಾಟೇಕರ್ ಅವರಿಂದ ಒಂದು ಪಾತ್ರ ಮಾಡಿಸಬೇಕು ಎಂಬುದು ನಿರ್ದೇಶಕ ರಾಜಮೌಳಿ ಅವರ ಉದ್ದೇಶ ಆಗಿತ್ತು. ಆದರೆ ನಾನಾ ಪಾಟೇಕರ್ ಅವರು ಆ ಪಾತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ.
- Madan Kumar
- Updated on: Jun 5, 2025
- 7:38 pm
ಮಹೇಶ್ ಬಾಬು ಕುಟುಂಬದಲ್ಲಿ ಕೊವಿಡ್; ಅಭಿಮಾನಿಗಳಲ್ಲಿ ಹೆಚ್ಚಿತು ಆತಂಕ
ಟಾಲಿವುಡ್ ನಟ ಮಹೇಶ್ ಬಾಬು ಕುಟುಂಬದಲ್ಲೊಬ್ಬರಿಗೆ ಕೊವಿಡ್-19 ಸೋಂಕು ತಗುಲಿದೆ. ಇದರಿಂದ ಮಹೇಶ್ ಬಾಬು ಕುಟುಂಬ ಹಾಗೂ ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿದೆ. ನಟಿ ನಿಕಿತಾ ದತ್ತ ಅವರಿಗೂ ಕೊವಿಡ್-19 ಸೋಂಕು ತಗುಲಿದೆ. ದೇಶದಲ್ಲಿ ಕೊವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
- Rajesh Duggumane
- Updated on: May 23, 2025
- 7:04 am
ಇಡಿ ವಿಚಾರಣೆಗೆ ಹಾಜರಿ ಹಾಕಲ್ಲ ಮಹೇಶ್ ಬಾಬು; ಕಾರಣ ಇಲ್ಲಿದೆ
ಮಹೇಶ್ ಬಾಬು ಅವರನ್ನು ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನ ಗ್ರೂಪ್ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ವಿಚಾರಣೆಗೆ ಕರೆಯಲಾಗಿದೆ. ಆದರೆ, ಚಿತ್ರೀಕರಣದ ಕಾರಣದಿಂದಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಅವರು ಇಡಿಗೆ ಪತ್ರ ಬರೆದಿದ್ದಾರೆ. ಮಹೇಶ್ ಬಾಬು ಅವರು ತನಿಖೆಗೆ ಬೇರೆ ದಿನಾಂಕವನ್ನು ಕೋರಿದ್ದಾರೆ.
- Shreelaxmi H
- Updated on: Apr 28, 2025
- 8:13 am
Mahesh Babu: ಮಹೇಶ್ ಬಾಬುಗೆ ಇಡಿ ನೋಟಿಸ್; ಖ್ಯಾತ ನಟನಿಗೆ ಸಂಕಷ್ಟ
Mahesh Babu ED Notice: ಟಾಲಿವುಡ್ ನಟ ಮಹೇಶ್ ಬಾಬು ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ಜಾರಿ ಮಾಡಿದೆ. ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 28 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. 3.4 ಕೋಟಿ ರೂಪಾಯಿಗಳ ಪ್ರಚಾರದ ಹಣ ಪಡೆದ ಆರೋಪ ಮೇಲೆ ತನಿಖೆ ನಡೆಯುತ್ತಿದೆ.
- Rajesh Duggumane
- Updated on: Apr 22, 2025
- 8:45 am
ಎರಡು ಪಾರ್ಟ್ನಲ್ಲಿ ಕಥೆ ಹೇಳೋದನ್ನು ನಿಲ್ಲಿಸಿದ ರಾಜಮೌಳಿ; ಕೊನೆ ಆಗಲಿದೆ ಟ್ರೆಂಡ್?
ರಾಜಮೌಳಿ ಅವರು ಪ್ರಾರಂಭಿಸಿದ ಎರಡು ಪಾರ್ಟ್ಗಳ ಚಿತ್ರಗಳ ಟ್ರೆಂಡ್ಗೆ ಅವರೇ ತೆರೆ ಎಳೆಯುತ್ತಿದ್ದಾರೆ. ಮಹೇಶ್ ಬಾಬು ಅಭಿನಯದ SSMB29 ಚಿತ್ರ ಒಂದೇ ಭಾಗದಲ್ಲಿ ಬಿಡುಗಡೆಯಾಗಲಿದೆ. ಬಾಹುಬಲಿ ಚಿತ್ರದ ಯಶಸ್ಸಿನ ನಂತರ ಈ ಟ್ರೆಂಡ್ ಅನೇಕ ನಿರ್ಮಾಪಕರು ಅನುಸರಿಸಿದ್ದಾರೆ. ಆದರೆ, ಕಥೆಯನ್ನು ಅನಗತ್ಯವಾಗಿ ಎಳೆದು ಹಣ ಸಂಪಾದಿಸುವ ಉದ್ದೇಶದಿಂದ ಇದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ರಾಜಮೌಳಿ ಅವರು ಅಭಿಪ್ರಾಯಪಟ್ಟಿದ್ದಾರೆ.
- Shreelaxmi H
- Updated on: Apr 6, 2025
- 6:30 am
ಮಹೇಶ್ ಬಾಬು ಕಾರಣಕ್ಕೆ ಶಾಲೆ ಬಂಕ್ ಮಾಡ್ತಾರೆ ಸಿತಾರಾ
ಸಿತಾರಾ ಘಟ್ಟಮನೇನಿ ಅವರ ಇತ್ತೀಚಿನ ಸಂದರ್ಶನ ವೈರಲ್ ಆಗಿದೆ. ಅದರಲ್ಲಿ, ತಮ್ಮ ತಂದೆ ಮಹೇಶ್ ಬಾಬು ಅವರು ತಮ್ಮ ಶಾಲೆಗೆ ಬಂಕ್ ಮಾಡಲು ಅನುಮತಿಸುತ್ತಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಮಹೇಶ್ ಬಾಬು ಮತ್ತು ಸಿತಾರಾ ನಡುವಿನ ಬಲವಾದ ಬಾಂಡಿಂಗ್ ಅನ್ನು ಈ ಘಟನೆ ಎತ್ತಿ ತೋರಿಸುತ್ತದೆ.
- Shreelaxmi H
- Updated on: Apr 4, 2025
- 8:15 am
ಸಿತಾರಾ ಘಟ್ಟಮನೇನಿ ಸಿನಿಮಾ ರಂಗಕ್ಕೆ ಕಾಲಿಡೋದು ಯಾವಾಗ? ಉತ್ತರಿಸಿದ ತಾಯಿ ನಮ್ರತಾ
ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಪರೋಕ್ಷವಾಗಿ ಆ್ಯಕ್ಟೀವ್ ಆಗಿದ್ದಾರೆ ಸಿತಾರಾ. ಹೌದು, ಮಹೇಶ್ ಬಾಬು ಮಗಳು ಎಂಬ ಕಾರಣಕ್ಕೆ ಸಿತಾರಾಗೆ ಚಿತ್ರರಂಗದ ಜೊತೆ ಒಡನಾಟ ಬೆಳೆದಿದೆ. ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಇದರಲ್ಲಿ ಹಲವು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದಾರೆ. ಅವರು ಚಿತ್ರರಂಗಕ್ಕೆ ಬರೋದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
- Rajesh Duggumane
- Updated on: Mar 31, 2025
- 11:40 am