AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿ-ರೋಹಿತ್ ರಿಟರ್ನ್ಸ್​: 15 ಪಂದ್ಯಗಳ ವೇಳಾಪಟ್ಟಿ ಪ್ರಕಟ

T20 World Cup 2026: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಭಾರತ ತಂಡವು ಅಫ್ಘಾನಿಸ್ತಾನ್ ಹಾಗೂ ಇಂಗ್ಲೆಂಡ್ ತಂಡಗಳನ್ನು ಎದುರಿಸಲಿದ್ದಾರೆ. ಈ ಎರಡು ಸರಣಿಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ.

ಕೊಹ್ಲಿ-ರೋಹಿತ್ ರಿಟರ್ನ್ಸ್​: 15 ಪಂದ್ಯಗಳ ವೇಳಾಪಟ್ಟಿ ಪ್ರಕಟ
Virat Kohli - Rohit Sharma
ಝಾಹಿರ್ ಯೂಸುಫ್
|

Updated on:Mar 03, 2026 | 8:16 AM

Share

ಟಿ20 ವಿಶ್ವಕಪ್ ಮುಕ್ತಾಯಕ್ಕೂ ಮುನ್ನವೇ ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಪ್ರಕಟವಾಗಿದೆ. ಈ ಸರಣಿಗಳಲ್ಲಿ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಭಾರತ ತಂಡದ ಮುಂದಿನ 15 ಏಕದಿನ ಪಂದ್ಯಗಳ ವೇಳಾಪಟ್ಟಿ ಫಿಕ್ಸ್ ಮಾಡಲಾಗಿದೆ. 2027ರ ಏಕದಿನ ವಿಶ್ವಕಪ್​ಗೂ ಮುನ್ನ ನಡೆಯಲಿರುವ ಈ ಮ್ಯಾಚ್​ಗಳು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ.

ಈ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮುಂಬರುವ ಏಕದಿನ ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಈ ವರ್ಷ ಹಿಟ್​ಮ್ಯಾನ್ ಹಾಗೂ ಕಿಂಗ್ ಕೊಹ್ಲಿ ಕಣಕ್ಕಿಳಿಯಲಿರುವ ಹದಿನೈದು ಮ್ಯಾಚ್​ಗಳ ವೇಳಾಪಟ್ಟಿ ಈ ಕೆಳಗಿನಂತಿದೆ….

ಭಾರತ vs ಅಫ್ಘಾನಿಸ್ತಾನ್:

ಜೂನ್ ತಿಂಗಳಲ್ಲಿ ಟೀಮ್ ಇಂಡಿಯಾ ವಿರುದ್ಧ 4 ಪಂದ್ಯಗಳ ಸರಣಿ ಆಡಲು ಅಫ್ಘಾನಿಸ್ತಾನ್ ತಂಡ ಭಾರತಕ್ಕೆ ಆಗಮಿಸಲಿದೆ. ಈ ಸರಣಿಯಲ್ಲಿ ಒಂದು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಾಗುತ್ತದೆ. ಏಕದಿನ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ…

  • 1ನೇ ಏಕದಿನ: ಜೂನ್ 14, 2026 – ಧರ್ಮಶಾಲಾ (ಮಧ್ಯಾಹ್ನ 1:30).
  • 2ನೇ ಏಕದಿನ: ಜೂನ್ 17, 2026 – ಲಕ್ನೋ (ಮಧ್ಯಾಹ್ನ 1:30).
  • 3ನೇ ಏಕದಿನ: ಜೂನ್ 20, 2026 – ಚೆನ್ನೈ (ಮಧ್ಯಾಹ್ನ 1:30).

ಭಾರತ vs ಇಂಗ್ಲೆಂಡ್:

ಅಫ್ಘಾನಿಸ್ತಾನ್ ವಿರುದ್ಧದ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಭಾರತ ಮೂರು ಏಕದಿನ ಪಂದ್ಯಗಳನ್ನಾಡಲಿದ್ದಾರೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

  • 1ನೇ ಏಕದಿನ: ಜುಲೈ 14, 2026 – ಬರ್ಮಿಂಗ್‌ಹ್ಯಾಮ್.
  • 2ನೇ ಏಕದಿನ: ಜುಲೈ 16, 2026 – ಕಾರ್ಡಿಫ್.
  • 3ನೇ ಏಕದಿನ: ಜುಲೈ 19, 2026 – ಲಂಡನ್ (ಲಾರ್ಡ್ಸ್).

ಭಾರತ vs ವೆಸ್ಟ್ ಇಂಡೀಸ್:

ಭಾರತ ತಂಡವು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2026 ರ ಅವಧಿಯಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಆತಿಥ್ಯ ವಹಿಸಲಿದೆ. ಈ ಸರಣಿಯಲ್ಲಿ 3 ಏಕದಿನ ಮತ್ತು 5 ಟಿ20  ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯ ಅಧಿಕೃತ ದಿನಾಂಕಗಳು ಮತ್ತು ಕ್ರೀಡಾಂಗಣಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಬಿಸಿಸಿಐ ತಿಳಿಸಿದೆ.

ಭಾರತ vs ನ್ಯೂಝಿಲೆಂಡ್:

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾ ನ್ಯೂಝಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಲಿರುವ ಈ ಸರಣಿಯಲ್ಲೂ ಭಾರತ ತಂಡ 3 ಏಕದಿನ ಪಂದ್ಯಗಳನ್ನಾಡಲಿದೆ. ಈ ಸರಣಿಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್ ಪ್ರಕಟಿಸಲಿದೆ.

ಭಾರತ vs ಶ್ರೀಲಂಕಾ:

ಈ ವರ್ಷಾಂತ್ಯದಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಎದುರಿಸಲಿದೆ. ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಈ ಸರಣಿಯ ಸ್ಥಳಗಳನ್ನು ಸಹ ಶೀಘ್ರದಲ್ಲೇ ನಿಗದಿ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಇದನ್ನೂ ಓದಿ: T20 World Cup 2026: ಸೆಮಿಫೈನಲ್ ಪಂದ್ಯ ರದ್ದಾದ್ರೆ ಯಾರು ಫೈನಲ್​ಗೆ?

ಅಂದರೆ ಈ ವರ್ಷ ಟೀಮ್ ಇಂಡಿಯಾ 15 ಏಕದಿನ ಪಂದ್ಯಗಳನ್ನಾಡಲಿದೆ. ಅತ್ತ ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ 15 ಮ್ಯಾಚ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ 2027ರ ಏಕದಿನ ವಿಶ್ವಕಪ್​ಗೆ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಳ್ಳಲಿದ್ದಾರೆ.

Published On - 8:15 am, Tue, 3 March 26

Follow Us
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ
ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ