Virat Kohli
ಟೀಂ ಇಂಡಿಯಾವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ನಾಯಕರ ಪೈಕಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಹೆಸರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಕೊಹ್ಲಿ ನಾಯಕತ್ವದಲ್ಲಿ ತಂಡ ಯಾವುದೇ ಐಸಿಸಿ ಟ್ರೋಫಿ ಗೆಲ್ಲದಿರಬಹುದು. ಆದರೆ ಅವರ ನಾಯಕತ್ವದಲ್ಲಿ ಭಾರತ ತಂಡ ಮೂರು ಮಾದರಿಯ ಕ್ರಿಕೆಟ್ನ ಐಸಿಸಿ ರ್ಯಾಂಕಿಂಗ್ನಲ್ಲಿ ನಂಬರ್ 1 ಸ್ಥಾನಕ್ಕೇರಿತ್ತು. ತಂಡದ ಪರ ಇದುವರೆಗೆ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 27 ಶತಕ, 7 ಅರ್ಧಶತಕ ಹಾಗೂ 30 ಅರ್ಧಶತಕ ಸೇರಿದಂತೆ ಒಟ್ಟು 8848 ರನ್ ಸಿಡಿಸಿದ್ದಾರೆ. ಹಾಗೆಯೇ ಏಕದಿನದಲ್ಲಿ 292 ಪಂದ್ಯಗಳನ್ನಾಡಿರುವ ವಿರಾಟ್ 50 ಶತಕ ಹಾಗೂ 72 ಅರ್ಧಶತಕ ಒಳಗೊಂಡಂತೆ 13838 ರನ್ ಕಲೆಹಾಕಿದ್ದರು. ಟಿ20 ಕ್ರಿಕೆಟ್ನಲ್ಲೂ ಛಾಪು ಮೂಡಿಸಿರುವ ವಿರಾಟ್ 117 ಪಂದ್ಯಗಳಲ್ಲಿ 1 ಹಾಗೂ 37 ಅರ್ಧಶತಕ ಸೇರಿದಂತೆ 4037 ರನ್ ಕಲೆಹಾಕಿದ್ದಾರೆ. ಐಪಿಎಲ್ನಲ್ಲೂ ತನ್ನ ಪಾರುಪತ್ಯ ಸೃಷ್ಟಿಸಿರುವ ವಿರಾಟ್ ಆರ್‌ಸಿಬಿ ಪರ ಕಣಕ್ಕಿಳಿಯುತ್ತಿದ್ದು, ಇಲ್ಲಿಯವರೆಗೆ 237 ಪಂದ್ಯಗಳನ್ನಾಡಿದ್ದು, 7 ಶತಕ ಹಾಗೂ 50 ಅರ್ಧಶತಕ ಸೇರಿದಂತೆ 7263 ರನ್ ಕಲೆಹಾಕಿದ್ದಾರೆ.