AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ

BCCI Central Contract 2026: ಪ್ರತಿ ವರ್ಷ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಒಪ್ಪಂದದ ಅನುಸಾರ ಆಟಗಾರರಿಗೆ ವಾರ್ಷಿಕ ಮೊತ್ತವನ್ನು ಪಾವತಿಸಲಾಗುತ್ತದೆ. ಇಲ್ಲಿ ಆಟಗಾರರನ್ನು  A, B ಮತ್ತು C  ಗ್ರೇಡ್ ಎಂದು ವಿಂಗಡಿಸಲಾಗುತ್ತಿದ್ದು, ಈ ಮೂಲಕ ಕೋಟಿ ರೂ. ಮೊತ್ತದ ವೇತನವನ್ನು ಪಾವತಿಸಲಾಗುತ್ತದೆ.

ಝಾಹಿರ್ ಯೂಸುಫ್
|

Updated on: Feb 07, 2026 | 8:36 AM

Share
ಟೀಮ್ ಇಂಡಿಯಾ ಆಟಗಾರರ ಜೊತೆಗಿನ 2026ರ ಕೇಂದ್ರ ಒಪ್ಪಂದಕ್ಕೆ ಬಿಸಿಸಿಐ ಸಿದ್ಧತೆಗಳನ್ನು ಶುರು ಮಾಡಿದೆ. ಈ ಬಾರಿಯ ಒಪ್ಪಂದದಲ್ಲಿ ಕೆಲ ಮಹತ್ವದ ಬದಲಾವಣೆ ಕಂಡು ಬರಲಿದೆ. ಈ ಬದಲಾವಣೆಯೊಂದಿಗೆ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿಗೆ (Virat Kohli) ಹಿಂಬಡ್ತಿ ನೀಡಲಾಗುತ್ತಿದೆ.

1 / 5
ಪ್ರಸ್ತುತ ಮಾಹಿತಿ ಪ್ರಕಾರ, ಈ ಬಾರಿಯ ಒಪ್ಪಂದ ಪಟ್ಟಿಯಲ್ಲಿ A+ ಗ್ರೇಡ್​ ಇರುವುದಿಲ್ಲ. ಬದಲಾಗಿ A,B.C ಗ್ರೇಡ್ ಮಾತ್ರ ಇರಲಿದೆ. ಈ ಗ್ರೇಡ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು B ಗ್ರೇಡ್​ನಲ್ಲಿರಿಸಲಾಗಿದೆ. ಈ ಹಿಂದೆ ಇಬ್ಬರು ದಿಗ್ಗಜರು A+ ಗ್ರೇಡ್​ನಲ್ಲಿ ಕಾಣಿಸಿಕೊಂಡಿದ್ದರು.

2 / 5
ಇದೀಗ ಬಿ ಗ್ರೇಡ್​ನಲ್ಲಿರಿಸಿರುವ ಕಾರಣ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಾರ್ಷಿಕ 3 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಇದಕ್ಕೂ ಮುನ್ನ ಇಬ್ಬರಿಗೆ ನೀಡಲಾಗುತ್ತಿದ್ದ ವಾರ್ಷಿಕ ಮೊತ್ತ 5 ಕೋಟಿ ರೂ. ಇದೀಗ ಗ್ರೇಡ್​ನಲ್ಲಿ ಹಿಂಬಡ್ತಿ ನೀಡಿರುವ ಕಾರಣ ಸಂಭಾವನೆ ಕೂಡ ಕಡಿತವಾಗಿದೆ.

3 / 5
ಇದರೊಂದಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಯುಗಾಂತ್ಯವಾಗುವುದು ಸಹ ಖಚಿತವಾಗಿದೆ. ಅಂದರೆ 2027ರ ಏಕದಿನ ವಿಶ್ವಕಪ್ ಬೆನ್ನಲ್ಲೇ ಇಬ್ಬರು ನಿವೃತ್ತಿ ಘೋಷಿಸಲಿದ್ದಾರೆ. ಅದರ ಮನ್ಸೂಚನೆಯಾಗಿ ಇದೀಗ ರೋಹಿತ್ ಹಾಗೂ ವಿರಾಟ್​ಗೆ ಒಪ್ಪಂದ ಪಟ್ಟಿಯಲ್ಲಿ ಹಿಂಬಡ್ತಿ ನೀಡಲಾಗಿದೆ.

4 / 5
ಇನ್ನು ಈ ಬಾರಿಯ ಒಪ್ಪಂದದಲ್ಲಿ A ಗ್ರೇಡ್​ನಲ್ಲಿ ಸ್ಥಾನ ಪಡೆದಿರುವುದು ಮೂವರು ಆಟಗಾರರು ಮಾತ್ರ. ಅವರೆಂದರೆ ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಭ್​​ಮನ್ ಗಿಲ್, ಯಾರ್ಕರ್ ಸ್ಪೆಷಲಿಸ್ಟ್ ಜಸ್​ಪ್ರೀತ್ ಬುಮ್ರಾ ಹಾಗೂ ಆಲ್​ರೌಂಡರ್ ರವೀಂದ್ರ ಜಡೇಜಾ.

5 / 5
Follow Us
ಸಂಸತ್ ಮುಂಗಾರು ಅಧಿವೇಶನ: ಉಭಯ ಸದನಗಳಲ್ಲಿ ಭಾರಿ ಹೈಡ್ರಾಮಾ

ಬಂಡೀಪುರದಲ್ಲಿ ಏಕಾಏಕಿ ಕಾರುಗಳ ಮೇಲೆ ಕಾಡಾನೆ ದಾಳಿ

ಯಲಬುರ್ಗಾ: ರೈತರ ಮೇಲೆ ಪಿಎಸ್​ಐ ಗುರುರಾಜ್​ ದೌರ್ಜನ್ಯ ಆರೋಪ, ವಿಡಿಯೋ ವೈರಲ್

ತಾಯಿ ಪಾರ್ಥಿವ ಶರೀರದ ಎದುರು ಶ್ಲೋಕ ಪಠಿಸುತ್ತಲೇ ಪುತ್ರಿ ಅನಸೂಯಾ ಭಾವುಕ

ಯುವ ಜನತೆಗೆ ಸಿಎಂ ಡಿ.ಕೆ.ಶಿವಕುಮಾರ್ ಬಂಪರ್ ಕೊಡುಗೆ

ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ

ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ

82 ಸಾವಿರ ಜನರ ಮಧ್ಯೆ ಕುಳಿತು ಫಿಫಾ ವರ್ಲ್ಡ್​​​ಕಪ್ ಫೈನಲ್ ವೀಕ್ಷಿಸಿದ ಮೋಹನ

ರೇವಣ್ಣ ಮನೆ ಬಳಿ ಮಳೆಯ ಮಧ್ಯೆಯೂ ಚೆನ್ನಮ್ಮ ಅಂತಿಮ ದರ್ಶನಕ್ಕೆ ಬಂದ ಜನ!

ಇಂದು ಮಧ್ಯಾಹ್ನ ಚೆನ್ನಮ್ಮ ಅಂತ್ಯಕ್ರಿಯೆ: ಪ್ರಮುಖ ಬಿಜೆಪಿ ನಾಯಕರು ಭಾಗಿ