AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗರಬತ್ತಿ ಪ್ಯಾಕಿಂಗ್ ಮಾಡಿ ಲಕ್ಷ ಗಳಿಸಿ ಎಂದು ನಂಬಿಸಿ ಕೋಟಿ ಕೋಟಿ ಲೂಟಿ: ನಕಲಿ ಕಂಪನಿ ನಂಬಿ ಹಣ ಕಳೆದುಕೊಂಡ ನಿರುದ್ಯೋಗಿಗಳು

ಅಗರಬತ್ತಿ ಪ್ಯಾಕಿಂಗ್ ಮಾಡಿ ಲಕ್ಷ ಗಳಿಸಿ ಎಂದು ನಂಬಿಸಿ ಕೋಟಿ ಕೋಟಿ ಲೂಟಿ: ನಕಲಿ ಕಂಪನಿ ನಂಬಿ ಹಣ ಕಳೆದುಕೊಂಡ ನಿರುದ್ಯೋಗಿಗಳು

ವಿಕಾಸ್​ ಬಿಎಂ
| Edited By: |

Updated on: Sep 21, 2026 | 3:15 PM

Share

ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವರ್ಕ್ ಫ್ರಂ ಹೋಮ್ ಪ್ಯಾಕಿಂಗ್ ಕೆಲಸದ ಹೆಸರಿನಲ್ಲಿ ಭಾರಿ ವಂಚನೆ ಬೆಳಕಿಗೆ ಬಂದಿದೆ. ಅಗರಬತ್ತಿ ಮತ್ತು ಪೇಪರ್ ಪ್ಲೇಟ್ ಪ್ಯಾಕಿಂಗ್ ಉದ್ಯೋಗಕ್ಕೆಂದು 1 ಲಕ್ಷ ರೂ. ಡೆಪಾಸಿಟ್ ಪಡೆದು, ಪ್ರತಿ ತಿಂಗಳು 27 ಸಾವಿರ ರೂ. ಸಂಬಳದ ಆಮಿಷವೊಡ್ಡಿ ನೂರಾರು ಜನರಿಗೆ ಮೋಸ ಮಾಡಲಾಗಿದೆ. ಕಾಳಿಕಾಂಬ ಎಂಟರ್ಪ್ರೈಸಸ್ ಹೆಸರಿನಲ್ಲಿ ಭೂಮಿಶೆಟ್ಟಿ, ಕಿರಣ್ ಕುಮಾರ್ ಮತ್ತು ಆರತಿ ಎಂಬುವವರು ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ.

ಬೆಂಗಳೂರು, ಸೆ.21: ಬೆಂಗಳೂರು ಹಾಗೂ ಅದರ ಹೊರವಲಯದಲ್ಲಿ ‘ಮನೆ ಕೆಲಸದಿಂದಲೇ ಗಳಿಕೆ’ ಹೆಸರಿನಲ್ಲಿ ನಡೆಯುತ್ತಿರುವ ಭಾರಿ ವಂಚನೆಯೊಂದು ಬೆಳಕಿಗೆ ಬಂದಿದೆ. ಅಗರಬತ್ತಿ ಮತ್ತು ಪೇಪರ್ ಪ್ಲೇಟ್ ಪ್ಯಾಕಿಂಗ್ ಕೆಲಸಗಳನ್ನು ನೀಡುವುದಾಗಿ ಹೇಳಿ, ನೂರಾರು ಜನರಿಂದ ಹಣ ಠೇವಣಿ ಪಡೆದು ವಂಚನೆ ಮಾಡಲಾಗಿದೆ. ವಂಚಕರು, ಹೆಚ್ಚು ಹಣ ಠೇವಣಿ ಇಟ್ಟರೆ, ಹೆಚ್ಚು ಸಂಬಳ ಸಿಗುತ್ತದೆ ಎಂದು ಆಮಿಷವೊಡ್ಡಿದ್ದಾರೆ. ಅದರಂತೆ, 1 ಲಕ್ಷ ರೂಪಾಯಿ ಠೇವಣಿ ಇಟ್ಟವರಿಗೆ ಪ್ರತಿ ತಿಂಗಳು 27 ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ರೀತಿ ನಂಬಿಸಿ ನೂರಾರು ನಿರುದ್ಯೋಗಿ ಯುವಕ-ಯುವತಿಯರಿಂದ ಹಾಗೂ ಮನೆಯಿಂದಲೇ ಕೆಲಸ ಮಾಡಲು ಇಚ್ಛಿಸುವವರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಿದ್ದಾರೆ. ಕಾಳಿಕಾಂಬ ಎಂಟರ್ಪ್ರೈಸಸ್ ಎಂಬ ಕಂಪನಿಯನ್ನು ಸ್ಥಾಪಿಸಿ ಈ ವಂಚನೆಯ ಜಾಲವನ್ನು ನಡೆಸಲಾಗುತ್ತಿತ್ತು. ಭೂಮಿಶೆಟ್ಟಿ, ಕಿರಣ್ ಕುಮಾರ್ ಮತ್ತು ಆರತಿ ಎಂಬುವವರು ಈ ವಂಚನೆಯ ಪ್ರಮುಖ ಆರೋಪಿಗಳಾಗಿದ್ದಾರೆ. ಇವರು ಕೆಲಸಕ್ಕೆ ಹಲವರನ್ನು ನೇಮಿಸಿಕೊಂಡು ಹಣ ವಸೂಲಿ ಮಾಡಿ ವಂಚನೆ ನಡೆಸಿದ್ದಾರೆ. ಈ ಬಗ್ಗೆ ದೊಡ್ಡಬಳ್ಳಾಪುರ ಮತ್ತು ಚಿಕ್ಕಜಾಲ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಸಾರ್ವಜನಿಕರು ಇಂತಹ ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಲು ಪೊಲೀಸರು ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us