ವಿಕಾಸ್ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.
ಬೆಂಗಳೂರು: ಸಂಪಿಗೆಹಳ್ಳಿ ಸೈಟ್‌ನಲ್ಲಿ ಮಹಿಳೆಯ ಶವ ಪತ್ತೆ ಕೇಸ್; ಪೊಲೀಸರು ಪ್ರಕರಣ ಭೇದಿಸಿದ್ದೇ ಒಂದು ರೋಚಕ ಕಥೆ!
ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ಖಾಲಿ ಸೈಟ್ ಕ್ಲೀನ್ ಮಾಡುವಾಗ ಸಿಕ್ಕ ಕೊಳೆತ ಮಹಿಳೆಯ ಶವದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಶವದ ಬಳಿ ಸಿಕ್ಕ ಗಣೇಶ ಪೆಂಡೆಂಟ್ ನೀಡಿದ ಸುಳಿವಿನಿಂದ ಮೃತ ಮಹಿಳೆ ಒಡಿಶಾ ಮೂಲದ ಅನುಸೂಯ ಎಂದು ಪತ್ತೆಯಾಗಿದ್ದು, ಆಕೆಯ ಸಿಮ್ ಬಳಸಿ ನಾಟಕವಾಡುತ್ತಿದ್ದ ಪತಿ ಸಾಗರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
- Vikas bm
- Updated on: Sep 26, 2026
- 11:54 am
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಐಎಎಸ್ ಅಧಿಕಾರಿ ಕರಿಗೌಡ ವಿರುದ್ಧ ಇಡಿಗೆ ದೂರು
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮದ ಆರೋಪ ಕೇಳಿಬಂದಿದೆ. ಐಎಎಸ್ ಅಧಿಕಾರಿ ಕರಿಗೌಡ ಸೇರಿದಂತೆ ಘನತ್ಯಾಜ್ಯ ನಿರ್ವಹಣಾ ಕಂಪನಿಯ ಅಧಿಕಾರಿಗಳ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ (ED) ದೂರು ನೀಡಲಾಗಿದೆ. ತ್ಯಾಜ್ಯ ವರ್ಗಾವಣೆ ಕೇಂದ್ರಗಳ ಟೆಂಡರ್‌ನಲ್ಲಿ ನಿಯಮ ಉಲ್ಲಂಘನೆ, ಭದ್ರತಾ ಠೇವಣಿಯಲ್ಲಿ ವಿನಾಯಿತಿ ನೀಡಿದ ಆರೋಪಗಳು ಕೇಳಿಬಂದಿವೆ. ಅಕ್ರಮದ ಬಗ್ಗೆ ಈಗಾಗಲೇ ಸಿಎಂ ಡಿಕೆಶಿ ತನಿಖೆಗೆ ಆದೇಶಿಸಿದ್ದಾರೆ ಎಂಬುದಿಲ್ಲಿ ಗಮನಾರ್ಹ.
- Vikas bm
- Updated on: Sep 24, 2026
- 1:06 pm
ಮಳೆಗೆ ಗಿರಿನಗರದಲ್ಲಿ ಕಾಂಪೌಂಡ್ ಗೋಡೆ ಕುಸಿತ: ಅದೃಷ್ಟವಶಾತ್ ತಪ್ಪಿದ ದೊಡ್ಡ ದುರಂತ
ಬೆಂಗಳೂರಿನ ಗಿರಿನಗರದಲ್ಲಿ ಭಾರೀ ಮಳೆಯಿಂದಾಗಿ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಘಟನೆಯಲ್ಲಿ ಗಂಗಮ್ಮ ಎಂಬುವವರ ಮನೆ ಜಖಂಗೊಂಡಿದ್ದು, ಪಕ್ಕದ ಮನೆಯಲ್ಲಿದ್ದ ಮಗುವಿಗೆ ಸಣ್ಣ ಗಾಯಗಳಾಗಿವೆ. ಸ್ಥಳೀಯರು ಈ ಹಿಂದೆ ಗೋಡೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ಅನಂತ್ ಪಟೇಲ್ ಎಂಬುವವರು ಅಕ್ರಮವಾಗಿ ನಿರ್ಮಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
- Vikas bm
- Updated on: Sep 24, 2026
- 9:13 am
ಕೆಪಿಎಸ್ಸಿ ಕೇಸ್ನ ಎಸ್ಐಟಿಯಲ್ಲಿದ್ದ ಐಪಿಎಸ್ ಅಧಿಕಾರಿ ಕುಶಲ್ ಚೌಕ್ಸಿ ದಿಢೀರ್ ವರ್ಗಾವಣೆ
ಐಪಿಎಸ್ ಅಧಿಕಾರಿ ಕುಶಲ್ ಚೌಕ್ಸಿ ಅವರನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿ ಆಗಿದ್ದ ಅವರು, ಕೆಪಿಎಸ್ಸಿ ಪ್ರಕರಣದ ವಿಶೇಷ ತನಿಖಾ ದಳದ ಸದಸ್ಯರಾಗಿದ್ದರು. ರಂಜಿತ್ ಕುಮಾರ್ ವರ್ಗಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.
- Vikas bm
- Updated on: Sep 23, 2026
- 10:59 pm
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 42 ಲಕ್ಷಕ್ಕೂ ಅಧಿಕ ಕೇಸ್ಗಳ ಇತ್ಯರ್ಥ: 2,384 ಕೋಟಿ ರೂ ಪರಿಹಾರ
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕರ್ನಾಟಕದ ಹೈಕೋರ್ಟ್ ಪೀಠಗಳು ಮತ್ತು ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳು ಸೇರಿ 4.2 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಿವೆ. ಆ ಮೂಲಕ ಒಟ್ಟು 2,384 ಕೋಟಿ ರೂ ಪರಿಹಾರ ವಿತರಿಸಲಾಗಿದೆ. ಡಿಸೆಂಬರ್ 12ರಂದು ವರ್ಷದ ಕೊನೆಯ ಲೋಕ ಅದಾಲತ್ ನಡೆಯಲಿದೆ.
- Vikas bm
- Updated on: Sep 23, 2026
- 8:00 pm
ಅಗರಬತ್ತಿ ಪ್ಯಾಕಿಂಗ್ ಮಾಡಿ ಲಕ್ಷ ಗಳಿಸಿ ಎಂದು ನಂಬಿಸಿ ಕೋಟಿ ಕೋಟಿ ಲೂಟಿ: ನಕಲಿ ಕಂಪನಿ ನಂಬಿ ಹಣ ಕಳೆದುಕೊಂಡ ನಿರುದ್ಯೋಗಿಗಳು
ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವರ್ಕ್ ಫ್ರಂ ಹೋಮ್ ಪ್ಯಾಕಿಂಗ್ ಕೆಲಸದ ಹೆಸರಿನಲ್ಲಿ ಭಾರಿ ವಂಚನೆ ಬೆಳಕಿಗೆ ಬಂದಿದೆ. ಅಗರಬತ್ತಿ ಮತ್ತು ಪೇಪರ್ ಪ್ಲೇಟ್ ಪ್ಯಾಕಿಂಗ್ ಉದ್ಯೋಗಕ್ಕೆಂದು 1 ಲಕ್ಷ ರೂ. ಡೆಪಾಸಿಟ್ ಪಡೆದು, ಪ್ರತಿ ತಿಂಗಳು 27 ಸಾವಿರ ರೂ. ಸಂಬಳದ ಆಮಿಷವೊಡ್ಡಿ ನೂರಾರು ಜನರಿಗೆ ಮೋಸ ಮಾಡಲಾಗಿದೆ. ಕಾಳಿಕಾಂಬ ಎಂಟರ್ಪ್ರೈಸಸ್ ಹೆಸರಿನಲ್ಲಿ ಭೂಮಿಶೆಟ್ಟಿ, ಕಿರಣ್ ಕುಮಾರ್ ಮತ್ತು ಆರತಿ ಎಂಬುವವರು ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ.
- Vikas bm
- Updated on: Sep 21, 2026
- 3:15 pm
ಇಡೀ ದೇಶಕ್ಕೆ ವ್ಯಾಪಿಸಿದ ಬೆಂಗಳೂರಿನ ನಕಲಿ ಔಷಧಿ ದಂಧೆ: ಎಸ್‌ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು
ಬೆಂಗಳೂರಿನಲ್ಲಿ ಬೃಹತ್ ನಕಲಿ ಮತ್ತು ಅವಧಿ ಮುಗಿದ ಔಷಧಿಗಳ ಜಾಲವನ್ನು ವಿಶೇಷ ತನಿಖಾ ದಳ (SIT) ಮತ್ತು ಆರೋಗ್ಯ ಇಲಾಖೆ ಪತ್ತೆಹಚ್ಚಿದ್ದು, ಈ ನಕಲಿ ಔಷಧಿ ದಂಧೆ ಇಡೀ ದೇಶಕ್ಕೆ ವ್ಯಾಪಿಸಿರುವುದು ಎಸ್‌ಐಟಿ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಇನ್ನು ಇದರ ಕಿಂಗ್ ಪಿನ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಸಾಧ್ಯತೆಗಳಿವೆ. ಹಾಗಾದ್ರೆ, ಬೆಂಗಳೂರಿನಿಂದ ಬೇರೆ ಬೇರೆ ರಾಜ್ಯಗಳಿಗೆ ವ್ಯಾಪಿಸಿದ್ಹೇಗೆ ಎನ್ನುವ ಡಿಟೇಲ್ಸ್ ಇಲ್ಲಿದೆ.
- Vikas bm
- Updated on: Sep 20, 2026
- 8:37 am
ಕೆಪಿಎಸ್ಸಿ ಹಗರಣ: ಸಿಐಡಿ ಆಯ್ತು ಈಗ ಇಡಿ ಇಕ್ಕಳದಲ್ಲಿ ಸಿಲುಕಿದ ಐಎಎಸ್ ಅಧಿಕಾರಿ
ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಒಂದೆಡೆ ಶಾಂತ ಹೊಸಮನಿ ವಿಚಾರಣೆ ನಡೆಸಿ,ಮನೆಗಳ ಮೇಲೆ ಸಿಐಡಿ ಸರ್ಚ್ ನಡೆಸಿದ್ರೆ.ಮತ್ತೊಂದೆಡೆ ಇದೇ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿ ಕನ್ನಾಳೆಯನ್ನ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.ಅಷ್ಟಕ್ಕೂ ಸಿಐಡಿ ಸರ್ಚ್ ವೇಳೆ ಏನೆಲ್ಲಾ ಪತ್ತೆಯಾಗಿದೆ? ಇಡಿ ಅಧಿಕಾರಿಗಳು ಜ್ಞಾನೇಂದ್ರ ಕುಮಾರ್‌ರನ್ನು ಯಾಕೆ ಬಂಧಿಸಿದ್ದಾರೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
- Vikas bm
- Updated on: Sep 20, 2026
- 8:06 am
ಜೈಲಲ್ಲೂ ಬಿಂದಾಸ್ ಆಗಿದ್ದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಶಾಕ್, ಮಾಜಿ ಎಂಪಿ ಪೊಲೀಸ್ ಕಸ್ಟಡಿಗೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೂ ಕಲರ್ಫುಲ್ ಬಟ್ಟೆ ತೊಟ್ಟು, ಅಕ್ರಮವಾಗಿ ಮೊಬೈಲ್ ಬಳಸುತ್ತಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಇದೀಗ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ಎರಡ್ಮೂರು ಪ್ರಕರಣಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣಗೆ ಇದೀಗ ಜೈಲಿನಲ್ಲಿ ಮೊಬೈಲ್ ಬಳಕೆ ಪ್ರಕಣ ಸಂಕಷ್ಟ ತಂದಿಟ್ಟಿದೆ.
- Vikas bm
- Updated on: Sep 8, 2026
- 3:39 pm
ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ: ತಪ್ಪಿದ ಅನಾಹುತ
ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ಬೆಂಕಿ ಅನಾಹುತ ಸಂಭವಿಸಿದೆ. ನಿಲ್ದಾಣದ ಪ್ಲಾಟ್‌ಫಾರ್ಮ್ 1ರ ಬಳಿ ನಿಂತಿದ್ದ ಹಳೆಯ ಖಾಲಿ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಬೋಗಿ ಭಾಗಶಃ ಸುಟ್ಟುಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತವಾಗಲೀ, ಯಾವುದೇ ಪ್ರಾಣಹಾನಿಯಾಗಲೀ ಸಂಭವಿಸಿಲ್ಲ.
- Vikas bm
- Updated on: Sep 7, 2026
- 7:07 am
ಬೆಂಗಳೂರು: ಜಾಗಿಂಗ್ ಮಾಡುತ್ತಿದ್ದ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡಿ ಸಿಕ್ಕಿಬಿದ್ದ ಯುವಕ
ಅಗರ ಕೆರೆ ಆವರಣದಲ್ಲಿ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಗೊಲ್ಡನ್ ಕುಮಾರ್ ಬಂಧನ. ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರ ಗಮನಕ್ಕೆ ಬಂದ ಘಟನೆ ಸಾರ್ವಜನಿಕರ ಗಮನಕ್ಕೆ ತರಲಾಯಿತು. ಮಹಿಳೆಯರ ಖಾಸಗಿತನ ಮತ್ತು ಸುರಕ್ಷತೆಗೆ ಧಕ್ಕೆ ತಂದ ಈ ಕೃತ್ಯದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಮೂಡಿದೆ.
- Vikas bm
- Updated on: Sep 3, 2026
- 12:16 pm
ಕೆಪಿಎಸ್ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣ: ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಕೆಪಿಎಸ್ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿಚಾರಣೆ ಮುಂದುವರಿದಿದೆ. ಪರೀಕ್ಷಾ ಪ್ರಕ್ರಿಯೆಗಳ ಉಸ್ತುವಾರಿಯಾಗಿದ್ದ ಜ್ಞಾನೇಂದ್ರ, ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಸ್ಟ್ರಾಂಗ್ ರೂಮ್ ಲೋಪದ ಆರೋಪ ಎದುರಿಸುತ್ತಿದ್ದಾರೆ. ಸಿಐಡಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಕಾರಣ ಅವರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಗಳು ಡಿಲೀಟ್ ಆಗಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.
- Vikas bm
- Updated on: Aug 30, 2026
- 1:30 pm