‘ಕದ್ದು ತಿಂತಾರೆ, ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಹೊರಬಂದಿರುವ ನಟ ಅವಿನಾಶ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ತಮ್ಮ ಮೂರು ವಾರಗಳ ಜರ್ನಿಯನ್ನು ಅವರು ಮೆಲುಕು ಹಾಕಿದ್ದಾರೆ. ‘ನಾನು ರಿಹರ್ಸಲ್ ಮಾಡಿಕೊಂಡು ಬಿಗ್ ಬಾಸ್ ಶೋಗೆ ಹೋಗಿಲ್ಲ. ರಿಹರ್ಸಲ್ ಮಾಡುವುದು ನಾಟಕಕ್ಕೆ’ ಎಂದು ಅವರು ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಹೊರಬಂದಿರುವ ನಟ ಅವಿನಾಶ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ತಮ್ಮ ಮೂರು ವಾರಗಳ ಜರ್ನಿಯನ್ನು ಅವರು ಮೆಲುಕು ಹಾಕಿದ್ದಾರೆ. ‘ನಾನು ರಿಹರ್ಸಲ್ ಮಾಡಿಕೊಂಡು ಬಿಗ್ ಬಾಸ್ ಶೋಗೆ ಹೋಗಿಲ್ಲ. ರಿಹರ್ಸಲ್ ಮಾಡುವುದು ನಾಟಕಕ್ಕೆ. ರಿಯಲ್ ಆಗಿ ಇರೋಕೆ ಅಲ್ಲ. ನನ್ನ ಸ್ವಭಾವವನ್ನು ಬದಲಾಯಿಸೋಕೆ ಆಗಲ್ಲ. ಅಲ್ಲಿ ಸ್ಪರ್ಧಿಗಳು ನಿಯಮ ಪಾಲಿಸಲ್ಲ. ತೀರಾ ಅಸಹ್ಯವಾಗಿ ಮಾತನಾಡುತ್ತಾರೆ. ಯಾರಿಗೂ ಗೌರವ ಕೊಡಲ್ಲ. ಕದ್ದು ತಿನ್ನುತ್ತಾರೆ. ಅಂಥವರ ಮಧ್ಯೆ ಜೀವನ ಹೇಗೆ ಮಾಡೋದು? ಅಲ್ಲಿ ಇರುವ ಯಾರನ್ನೂ ನಾನು ಪರಿಗಣಿಸಿಲ್ಲ. ಯಾರೂ ನನಗೆ ಇಷ್ಟ ಆಗಿಲ್ಲ. ನನಗೆ ಬಿಗ್ ಬಾಸ್ ವೇದಿಕೆ ಬಗ್ಗೆ ಗೌರವ ಇದೆ. ಆ ಮನೆಗೆ ನಾನು ಖಾಲಿಯಾಗಿ ಹೋಗಿದ್ದೆ. ಖಾಲಿಯಾಗಿ ವಾಪಸ್ ಬಂದಿದ್ದೇನೆ’ ಎಂದು ಅವಿನಾಶ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

