AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರದೋಷ್ ಅರ್ಧ ಸಾಕ್ಷಿ ನುಡಿದಿದ್ದಾನೆ’: ವಿಚಾರಣೆ ಬಳಿಕ ದರ್ಶನ್ ಪರ ಲಾಯರ್ ಹೇಳಿಕೆ

‘ಪ್ರದೋಷ್ ಅರ್ಧ ಸಾಕ್ಷಿ ನುಡಿದಿದ್ದಾನೆ’: ವಿಚಾರಣೆ ಬಳಿಕ ದರ್ಶನ್ ಪರ ಲಾಯರ್ ಹೇಳಿಕೆ

ಮದನ್​ ಕುಮಾರ್​
|

Updated on: Sep 28, 2026 | 8:04 PM

Share

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚುರುಕುಗೊಂಡಿದೆ. ಮಾಫಿಸಾಕ್ಷಿಯಾಗಿ ಪ್ರದೋಷ್ ಅವರ ಹೇಳಿಕೆಯನ್ನು ದಾಖಲು ಮಾಡಲಾಗುತ್ತಿದೆ. ಇಂದು (ಸೆಪ್ಟೆಂಬರ್ 28) ನಡೆದ ವಿಚಾರಣೆ ಬಗ್ಗೆ ದರ್ಶನ್ ಪರ ವಕೀಲರಾದ ಹಷ್ಮತ್ ಪಾಷಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚುರುಕುಗೊಂಡಿದೆ. ಮಾಫಿಸಾಕ್ಷಿಯಾಗಿ ಪ್ರದೋಷ್ ರಾವ್ ಅವರ ಹೇಳಿಕೆಯನ್ನು ದಾಖಲು ಮಾಡಲಾಗುತ್ತಿದೆ. ಇಂದು (ಸೆಪ್ಟೆಂಬರ್ 28) ನಡೆದ ವಿಚಾರಣೆ ಬಗ್ಗೆ ದರ್ಶನ್ ಪರ ವಕೀಲರಾದ ಹಷ್ಮತ್ ಪಾಷಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾವು ಸುಪ್ರೀಂ ಕೋರ್ಟ್​ನಲ್ಲಿ ಎಸ್​ಎಲ್​ಪಿ ಹಾಕಿದ್ದೇವೆ. ಅದರ ಆದೇಶ ಬರುವ ತನಕ ಅವಕಾಶ ಕೊಡಿ ಅಂತ ಕೆಳನ್ಯಾಯಾಲಯದಲ್ಲಿ ಮನವಿ ಮಾಡಿದ್ವಿ. ಆದರೆ ಅವರು ಒಪ್ಪಿಲ್ಲ. ಇಂದು ಪ್ರದೋಷ್​ನ ಮುಖ್ಯ ವಿಚಾರಣೆ ಆರಂಭ ಆಗಿದೆ. ಅವನು ಸಾಕ್ಷಿ ಹೇಳಿದ್ದಾನೆ. ಈಗ ಅರ್ಧ ಸಾಕ್ಷಿ ಆಗಿದೆ. ನಾಳೆ ಮುಂದುವರಿದ ಸಾಕ್ಷಿ ನುಡಿಯುತ್ತಾನೆ. ಸುಪ್ರೀಂ ಕೋರ್ಟ್​​ನಲ್ಲಿ ನಮ್ಮ ಪರವಾಗಿ ಆದೇಶ ಬಂದರೆ ಅದು ಪರಿಣಾಮ ಬೀರುತ್ತದೆ’ ಎಂದು ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಹೇಳಿದ್ದಾರೆ. ಖಂಡಿತವಾಗಿ ತಾವು ದರ್ಶನ್ ಅವರಿಗೆ ಗೆಲುವು ಕೊಡಿಸುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More