Darshan Thoogudeepa
ನಟ ದರ್ಶನ್ ಅವರ ಪೂರ್ಣ ಹೆಸರು ದರ್ಶನ್ ತೂಗುದೀಪ. ಇವರು ಕನ್ನಡ ಚಿತ್ರರಂಗದ ಜನಪ್ರಿಯ ನಟ. 1977ರ ಫೆಬ್ರವರಿ 16ರಂದು ಕರ್ನಾಟಕದ ಮೈಸೂರಿನಲ್ಲಿ ಜನಿಸಿದ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ದರ್ಶನ್ ಅವರ ಚೊಚ್ಚಲ ಸಿನಿಮಾ ‘ಮೆಜೆಸ್ಟಿಕ್’ 2001ರಲ್ಲಿ ಬಿಡುಗಡೆಯಾಗಿತು. ಆ ಮೂಲಕ ಹೀರೋ ಆಗಿ ಅವರು ವೃತ್ತಿಜೀವನ ಆರಂಭಿಸಿದರು. ತಮ್ಮ ಅಭಿನಯದಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆದ ದರ್ಶನ್ ಅವರು ವಿಶೇಷವಾಗಿ ಆ್ಯಕ್ಷನ್ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರ ಕೆಲವು ಗಮನಾರ್ಹ ಚಲನಚಿತ್ರಗಳಲ್ಲಿ ‘ಕರಿಯ’, ‘ನಮ್ಮ ಪ್ರೀತಿಯ ರಾಮು’, ‘ಸಂಗೊಳ್ಳಿ ರಾಯಣ್ಣ’, ‘ಕಲಾಸಿಪಾಳ್ಯ’, ‘ಅಯ್ಯ’, ‘ನವಗ್ರಹ’, ‘ಯಜಮಾನ’, ‘ರಾಬರ್ಟ್’, ‘ಕಾಟೇರ’ ಮುಂತಾದ ಸಿನಿಮಾಗಳಿವೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅವರು ಸಿನಿಮಾ ಮಾತ್ರವಲ್ಲದೇ ಪರೋಪಕಾರಿ, ಸಮಾಜಮುಖಿ ಚಟುವಟಿಕೆಗಳಿಂದಲೂ ಫೇಮಸ್ ಆಗಿದ್ದಾರೆ. ದರ್ಶನ್ ಅವರದ್ದು ಕಲಾವಿದರ ಕುಟುಂಬ. ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಕನ್ನಡ ಚಿತ್ರರಂಗದಲ್ಲಿ ಖ್ಯಾತ ಖಳನಟ ಆಗಿದ್ದರು. ಅವರ ಸಹೋದರ ದಿನಕರ್ ತೂಗುದೀಪ ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಂಡಿದ್ದಾರೆ.