AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುದ್ಧ ಭೀತಿ: ಇದು ಅಲ್ಲಾಹ್​ನ ಕೋಪ ಎಂದ ಕಿರುತೆರೆ ನಟ

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಭೀತಿ ಹೆಚ್ಚಿದೆ. ಈ ಮಧ್ಯೆ ನಟ ಅಜಾಜ್ ಖಾನ್, ಇದು ಮುಸ್ಲಿಮರ ಮೇಲಿನ ಅಲ್ಲಾಹನ ಕೋಪ ಎಂದು ಹೇಳಿದ್ದಾರೆ. ರಂಜಾನ್ ತಿಂಗಳಲ್ಲಿ ನಡೆದ ಈ ದಾಳಿಗಳು ಅರಬ್ ಜನರ ಮೌನ ಮುರಿಯಲು ಇರಾನ್ ಕಾರಣವೆಂದಿದ್ದಾರೆ. ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಈ ಸಂಘರ್ಷ ವಿಶ್ವವ್ಯಾಪಿ ಆತಂಕ ಸೃಷ್ಟಿಸಿದೆ.

ಯುದ್ಧ ಭೀತಿ: ಇದು ಅಲ್ಲಾಹ್​ನ ಕೋಪ ಎಂದ ಕಿರುತೆರೆ ನಟ
ಅಜಾಜ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Mar 02, 2026 | 7:57 AM

Share

ಸದ್ಯ ಯುದ್ಧ ಭೀತಿ ಶುರುವಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ (Iran) ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ದಾಳಿಗೆ ಇರಾನ್ ಪ್ರತಿ ದಾಳಿ ನಡೆಸುತ್ತಿದೆ. ಈ ದಾಳಿಗಳಲ್ಲಿ ಇರಾನ್‌ನ ಧಾರ್ಮಿಕ, ರಾಜಕೀಯ ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲಾಗಿತ್ತು. ಇಸ್ರೇಲ್, ಕತಾರ್, ಕುವೈತ್, ಬಹ್ರೇನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ವಿರುದ್ಧವೂ ಇರಾನ್ ಪ್ರತೀಕಾರ ತೀರಿಸಿಕೊಂಡಿತು. ಈ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವು ಪ್ರಪಂಚದಾದ್ಯಂತ ಜನರಲ್ಲಿ ಉದ್ವಿಗ್ನತೆಯ ವಾತಾವರಣವನ್ನು ಸೃಷ್ಟಿಸಿದೆ. ಈಗ ಪ್ರಸಿದ್ಧ ಟಿವಿ ನಟ ಅಜಾಜ್ ಖಾನ್ ಈ ಸಂಘರ್ಷಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದು ಮುಸ್ಲಿಮರ ಮೇಲಿನ ಅಲ್ಲಾಹನ ಕೋಪ ಎಂದು ಅವರು ಹೇಳಿದರು.

‘ಪ್ರಪಂಚದಾದ್ಯಂತ ಏನಾಗುತ್ತಿದೆ ಎಂದು ನೀವು ನೋಡುತ್ತೀರಿ. ರಮಝಾನ್ ತಿಂಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಎಂಬ ಇಬ್ಬರು ಖಳನಾಯಕರು ಯಾವುದೇ ಆಲೋಚನೆಯಿಲ್ಲದೆ ಇರಾನ್ ಮೇಲೆ ಬಾಂಬ್ ದಾಳಿ ಮಾಡಿವಎ. ಇರಾನ್ ಕೋಪಗೊಂಡು, ಅರಬ್ ಜನರ ಮೇಲೆ ಬಾಂಬ್ ದಾಳಿ ಮಾಡಿತು. ಇರಾನ್‌ನ ಕೋಪ ಸರಿ ಎಂದು ನಾನು ಭಾವಿಸುತ್ತೇನೆ. ಮುಸ್ಲಿಮರಿಗೆ ಅನ್ಯಾಯವಾಗುತ್ತಿದ್ದರೂ, ಅರಬ್ ಜನರು ಮೌನವಾಗಿದ್ದಾರೆ. ಆದ್ದರಿಂದ, ಅವರನ್ನು ನಿದ್ರೆಯಿಂದ ಎಬ್ಬಿಸುವುದು ಅಗತ್ಯವಾಗಿತ್ತು. ಧನ್ಯವಾದಗಳು ಇರಾನ್.. ನೀವು ಅವರನ್ನು ಎಬ್ಬಿಸಿದ್ದೀರಿ’ ಎಂದು ಅವರು ಹೇಳಿದ್ದಾರೆ.

View this post on Instagram

A post shared by Ajaz Khan (@imajazkhan)

‘ಅಲ್ಲಾಹನು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಅದಕ್ಕಾಗಿಯೇ ಪ್ರಪಂಚದಾದ್ಯಂತ ಮುಸ್ಲಿಮರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಪವಿತ್ರ ರಂಜಾನ್ ತಿಂಗಳಲ್ಲಿ ಎಲ್ಲಾ ಮುಸ್ಲಿಂ ರಾಷ್ಟ್ರಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಮುಸ್ಲಿಮರ ಮೇಲಿನ ಅಲ್ಲಾಹನ ಕೋಪ. ಪ್ರಾರ್ಥಿಸಿ, ಪರಸ್ಪರ ಬೆಂಬಲಿಸಿ, ಒಳ್ಳೆಯ ಕಾರ್ಯಗಳನ್ನು ಮಾಡಿ, ದಾನ ನೀಡಿ, ಬಡವರಿಗೆ ಸಹಾಯ ಮಾಡಿ, ಹಣವು ಸಮಾಧಿಗೆ ಹೋಗುವುದಿಲ್ಲ’ ಅಜಾಜ್ ಹೇಳಿದ್ದಾರೆ.

ಇದನ್ನೂ ಓದಿ: ಇರಾನ್​, ಇಸ್ರೇಲ್ ಯುದ್ಧ: ಮಧ್ಯಪ್ರಾಚ್ಯದಲ್ಲಿ ಸಿಲುಕಿದ ಕನ್ನಡಿಗರ ನೆರವಿಗೆ ನಿಂತ ರಾಜ್ಯ ಸರ್ಕಾರ

ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ಕೈಬಿಡುವಂತೆ ಒತ್ತಾಯಿಸಲು ಅಮೆರಿಕ ಮತ್ತು ಇಸ್ರೇಲ್‌ನಿಂದ ನಿರಂತರ ಒತ್ತಡವಿತ್ತು. ಆದರೆ, ಇರಾನ್ ಇದಕ್ಕೆ ಒಪ್ಪುತ್ತಿಲ್ಲ. ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮವನ್ನು ಸಹ ತಡೆಯಬೇಕೆಂಬ ಅಮೆರಿಕ ಬೇಡಿಕೆ ಇಟ್ಟಿದ್ದು, ಇದಕ್ಕೆ ಇರಾನ್ ಒಪ್ಪಿಲ್ಲ. ಇದರ ಕುರಿತು ಒಮಾನ್‌ನಲ್ಲಿ ಮಾತುಕತೆಗಳು ನಡೆಯುತ್ತಿದ್ದವು. ಅವು ಮುಕ್ತಾಯಗೊಳ್ಳುವ ಮೊದಲು, ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು ಪ್ರಾರಂಭಿಸಿದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:56 am, Mon, 2 March 26

Follow Us
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?