ಬೆಂಗಳೂರು ವಿಮಾನ ನಿಲ್ದಾಣಕ್ಕೂ ತಟ್ಟಿದ ಇರಾನ್-ಇಸ್ರೇಲ್ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು, ಪ್ರಯಾಣಿಕರ ಪರದಾಟ
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ಸಂಘರ್ಷ ತೀವ್ರಗೊಂಡಿದ್ದು, ಇದರ ಪರಿಣಾಮ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್ ಮೇಲೂ ತಟ್ಟಿದೆ. ಇಲ್ಲಿ ವಿಮಾನಗಳ ಹಾರಾಟ ರದ್ದಾಗಿದೆ. ಅರಬ್ ರಾಷ್ಟ್ರಗಳಿಗೆ ತೆರಳಬೇಕಿದ್ದ ಆರು ಹಾಗೂ ಆಗಮಿಸಬೇಕಿದ್ದ ಒಂಬತ್ತು ಸೇರಿದಂತೆ ಒಟ್ಟು 15 ವಿಮಾನಗಳು ಭಾನುವಾರ ರದ್ದಾಗಿದ್ದು, 1533 ಪ್ರಯಾಣಿಕರು ಅತಂತ್ರರಾಗಿದ್ದಾರೆ. ಏರ್‌ಪೋರ್ಟ್‌ನಲ್ಲಿ ಹೆಲ್ಪ್ ಡೆಸ್ಕ್ ತೆರೆದು ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು, ಮಾರ್ಚ್ 2: ಇಸ್ರೇಲ್-ಇರಾನ್ ಸಂಘರ್ಷವು ವಿಶ್ವದಾದ್ಯಂತ ತಲ್ಲಣ ಮೂಡಿಸಿದೆ. ಈ ಯುದ್ಧದ ಪರಿಣಾಮವಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ಅರಬ್ ರಾಷ್ಟ್ರಗಳಾದ ದುಬೈ, ದೋಹಾ, ಅಬುದಾಬಿ, ಜಿದ್ದಾ, ದಮಾಮ್‌ಗೆ ತೆರಳಬೇಕಿದ್ದ ಆರು ವಿಮಾನಗಳು ಹಾಗೂ ಅಲ್ಲಿಂದ ಆಗಮಿಸಬೇಕಿದ್ದ ಒಂಬತ್ತು ವಿಮಾನಗಳು ಸೇರಿದಂತೆ ಒಟ್ಟು 15 ವಿಮಾನಗಳು ರದ್ದಾಗಿವೆ.
ವಿಮಾನಗಳ ರದ್ದತಿಯಿಂದಾಗಿ 1533ಕ್ಕೂ ಹೆಚ್ಚು ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿ ಅತಂತ್ರರಾಗಿದ್ದಾರೆ. ಏರ್‌ಪೋರ್ಟ್ ಸಿಬ್ಬಂದಿ ಪ್ರಯಾಣಿಕರ ಪರದಾಟವನ್ನು ಅರಿತು, ಅವರಿಗೆ ತಿಂಡಿ-ಬಿಸ್ಕತ್‌ಗಳ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ, ಪ್ರಯಾಣಿಕರಿಗೆ ಮಾಹಿತಿ ನೀಡಲು ಮತ್ತು ನೆರವಾಗಲು ಹೆಲ್ಪ್ ಡೆಸ್ಕ್‌ಗಳನ್ನು ಸ್ಥಾಪಿಸಲಾಗಿದೆ. ವಿಮಾನ ಟಿಕೆಟ್ ರದ್ದುಪಡಿಸಲು ಮತ್ತು ಮನೆಗಳಿಗೆ ಮರಳಲು ಹಲವು ಪ್ರಯಾಣಿಕರು ಮುಂದಾಗಿದ್ದಾರೆ. ಈ ಸಂಘರ್ಷವು ಅಂತರರಾಷ್ಟ್ರೀಯ ವಿಮಾನಯಾನದ ಮೇಲೆ ದೊಡ್ಡ ಪರಿಣಾಮ ಬೀರಿದೆ.
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್ಗೆ ಅದ್ದೂರಿ ಸ್ವಾಗ
