ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.
ದೇವನಹಳ್ಳಿ: ಹೆದ್ದಾರಿಯಲ್ಲಿ ಭೀಕರ ಅಪಘಾತ; ಲಾಂಗ್ ಡ್ರೈವ್ ಹೊರಟ್ಟಿದ್ದ ಮೂವರು ಸ್ನೇಹಿತರು ಬಲಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಗಲಕೋಟೆ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಬೈಕ್ನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರು ದುರ್ಮರಣಕ್ಕೀಡಾಗಿದ್ದಾರೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿದ್ದು, ಸದ್ಯ ದೇವನಹಳ್ಳಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
- Naveen Kumar
- Updated on: Jan 17, 2026
- 6:45 pm
ಜಾಗತಿಕ ಸಾಧನೆ ಮಾಡಿದ ಬೆಂಗಳೂರು ಏರ್ಪೋರ್ಟ್; ಕೆಐಎಬಿಯಿಂದ ದಾಖಲೆಯ 5.2 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಾಟ!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸರಕು ಸಾಗಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸರಕು ಸಾಗಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ.ಕೃಷಿ, ಔಷಧ, ಆಟೋ ಬಿಡಿಭಾಗಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ರಫ್ತಾಗುತ್ತಿದೆ. ಭಾರತದ ಅತಿದೊಡ್ಡ ದೇಶೀಯ ಸರಕು ಟರ್ಮಿನಲ್ ಆಗಿರುವ ಕೆಐಎಬಿ, ಬೆಂಗಳೂರಿನ ಜಾಗತಿಕ ಮಹತ್ವ ಹೆಚ್ಚಿಸಿದೆ. ಹೀಗೆ ಕಳೆದ ವರ್ಷ 5.2 ಲಕ್ಷ ಮೆಟ್ರಿಕ್ ಟನ್ಗೂ ಹೆಚ್ಚು ಸರಕು ಸಾಗಾಟ ಮಾಡುವ ಮೂಲಕ ಗಮನ ಸೆಳೆದಿದೆ.
- Naveen Kumar
- Updated on: Jan 16, 2026
- 12:32 pm
ಏರ್ಪೋಟ್ ರಸ್ತೆಯಲ್ಲಿ ಬಲಿಗಾಗಿ ಕಾಯುತ್ತಿದೆ ಟೋಲ್ ಬೂತ್: ಯಾವುದೇ ಕ್ಷಣದಲ್ಲಾದರೂ ಕುಸಿಯುವ ಭೀತಿ
ದೇವನಹಳ್ಳಿ ಬಳಿ NH 44 ರ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿರುವ ಶಿಥಿಲಗೊಂಡ ಟೋಲ್ ಬೂತ್ ಅತ್ಯಂತ ಅಪಾಯಕಾರಿಯಾಗಿದೆ. ಹಿಂದಿನ ಅಪಘಾತ ಮತ್ತು ದೂರುಗಳ ಹೊರತಾಗಿಯೂ, ಅಧಿಕಾರಿಗಳು ಇದನ್ನು ತೆರವುಗೊಳಿಸಲು ನಿರ್ಲಕ್ಷಿಸಿದ್ದಾರೆ. ಗೋಡೆಗಳು ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿಯಿದೆ. ಮೂರು ವರ್ಷಗಳ ಹಿಂದೆ ಟೋಲ್ ಸಂಗ್ರಹ ನಿಲ್ಲಿಸಿದ್ದರೂ, ಈ ಜೀವಕ್ಕೆ ಅಪಾಯ ತರುವ ರಚನೆ ಸವಾರರಿಗೆ ದೊಡ್ಡ ಆತಂಕ ಮೂಡಿಸಿದೆ. ಕೂಡಲೇ ತೆರವುಗೊಳಿಸಬೇಕಿದೆ.
- Naveen Kumar
- Updated on: Jan 15, 2026
- 12:34 pm
ಡಾನ್ ರೀತಿ ಗನ್ ಹಿಡಿದು ಆವಾಜ್ ಹಾಕಿದ್ದ ರೌಡಿಶೀಟರ್ ತಂದಿದ್ದು ನಕಲಿ ಬಂದೂಕು!
ಬೆಂಗಳೂರಿನ ಹೊಸಕೋಟೆಯಲ್ಲಿ ರೌಡಿಶೀಟರ್ ವಾಹಿದ್ ಖಾನ್ ಎಂಬಾತ ನಕಲಿ ಗನ್ ಬಳಸಿ ಕ್ಯಾಷಿಯರ್ಗೆ ಬೆದರಿಸಿ ಉಚಿತ ಮದ್ಯ ಪಡೆಯಲು ಯತ್ನಿಸಿದ್ದಾನೆ. ತನ್ನ ಸಹಚರನೊಂದಿಗೆ ತೆರಳಿದ್ದ ಆರೋಪಿ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಈತನ ಸಹಚರನ ಬಂಧನವಾಗಿದ್ದು, ಪ್ರಮುಖ ಆರೋಪಿ ವಾಹಿದ್ ಖಾನ್ ಬಂಧನಕ್ಕೆ ನಂದಗುಡಿ ಪೊಲೀಸರು ಬಲೆ ಬೀಸಿದ್ದಾರೆ.
- Naveen Kumar
- Updated on: Jan 13, 2026
- 3:59 pm
ದಾಯಾದಿಗಳ ಜಗಳ: ಅಣ್ಣನ ಮನೆಗೆ ಬೆಂಕಿಯಿಟ್ಟ ತಮ್ಮ; ತಾನೂ ಸುಟ್ಟುಕೊಂಡು ಆಸ್ಪತ್ರೆ ಸೇರಿದ
ತಮ್ಮನಿಂದ ಅಣ್ಣನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೋವಿಂದಪುರದಲ್ಲಿ ನಡೆದಿದೆ. ದುರಾದೃಷ್ಟವೆಂದು ಅದೇ ಬೆಂಕಿಯ ಕೆನ್ನಾಲಿಗೆ ಸಿಲುಕಿ ತಮ್ಮ ಕೂಡ ಶೇ 25% ಭಾಗ ಸುಟ್ಟ ಗಾಯಗಳಿಂದ ನರಳಾಡುವಂತಾಗಿದೆ. ಹೊಸಕೋಟೆ ತಾಲೂಕಿನ ತಿರಮಲಶೆಟ್ಟಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
- Naveen Kumar
- Updated on: Jan 8, 2026
- 9:21 pm
ಚೀಟಿ ವ್ಯವಹಾರದಲ್ಲಿ ಕೈ ಸುಟ್ಟುಕೊಂಡವ ಮಾಡಬಾರದ್ದು ಮಾಡಲು ಹೋಗಿ ಮೈಯನ್ನೂ ಸುಟ್ಟುಕೊಂಡ!
ಹಣಕಾಸಿನ ವಿವಾದದಿಂದಸಹೋದರನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿ, ತಮ್ಮನೇ ಮೈ ಸುಟ್ಟುಕೊಂಡ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಬೆಂಕಿ ಹಚ್ಚುವ ವೇಳೆ ಕೈನಲ್ಲಿ ಪೆಟ್ರೋಲ್ ಡಬ್ಬ ಇದ್ದ ಕಾರಣ ಏಕಾಏಕಿ ಹೊತ್ತಿಕೊಂಡ ಬೆಂಕಿ ಈತನನ್ನೇ ಸುಟ್ಟಿದೆ. ಕಾಪಾಡಿ ಕಾಪಾಡಿ ಅಂತ ವ್ಯಕ್ತಿ ಕಿರುಚಾಡಿದ್ದು, ಕೂಡಲೇ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ್ದಾರೆ.
- Naveen Kumar
- Updated on: Jan 7, 2026
- 8:17 am
ಬೆಂಗಳೂರು ಏರ್ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್ರೇಜ್: ಸಿನಿಮೀಯ ರೀತಿಯಲ್ಲಿ ಕಾರು ಚೇಸ್ ಮಾಡಿ ಬೈಕ್ ಸವಾರನ ಕಿರಿಕ್
ಬೆಂಗಳೂರು ವಿಮಾನ ನಿಲ್ದಾಣದ ಸೆಕ್ಯೂರಿಟಿ ಚೆಕಿಂಗ್ ಪಾಯಿಂಟ್ ಬಳಿ ಬೈಕ್ ಸವಾರನೊಬ್ಬ ಸಿನಿಮೀಯ ರೀತಿಯಲ್ಲಿ ಕ್ಯಾಬ್ ಅನ್ನು ಚೇಸ್ ಮಾಡಿ ಅಡ್ಡಗಟ್ಟಿ ಕಿರಿಕ್ ನಡೆಸಿದ್ದಾನೆ. ನಂತರ ಭದ್ರತಾ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆಯ ವಿಡಿಯೋ ಮತ್ತೊಂದು ಕ್ಯಾಬ್ ಚಾಲಕನ ಮೊಬೈಲ್ನಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ.
- Naveen Kumar
- Updated on: Jan 5, 2026
- 7:49 am
ನಿಧಿ ಆಸೆಗೆ ಪೋಷಕರಿಂದಲೇ ಮಗು ಬಲಿಗೆ ಯತ್ನ? 8 ತಿಂಗಳ ಕಂದಮ್ಮನ ರಕ್ಷಣೆ
ನಿಧಿ ಆಸೆಗೆ 8 ತಿಂಗಳ ಮಗುವನ್ನು ಬಲಿ ನೀಡಲು ಪೋಷಕರು ಯತ್ನಿಸಿರುವ ಆರೋಪ ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ಕೇಳಿಬಂದಿದೆ. ಮನೆಯಲ್ಲಿ ಪೂಜೆ ನಡೆಯುವಾಗ ಮಕ್ಕಳ ರಕ್ಷಣಾ ಘಟಕ ದಾಳಿ ಮಾಡಿ ಮಗುವನ್ನು ರಕ್ಷಿಸಿದೆ. ಮಗುವನ್ನು ದಂಪತಿ ಕಾನೂನು ಬಾಹಿರವಾಗಿ ದತ್ತು ಪಡೆದಿದೆ ಎನ್ನಲಾಗಿದ್ದು, ಘಟನೆ ಬಗ್ಗೆ ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿಯಿಂದ ತನಿಖೆ ನಡೆಯುತ್ತಿದೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Naveen Kumar
- Updated on: Jan 4, 2026
- 8:06 am
ದೇವನಹಳ್ಳಿ: ವೇಗವಾಗಿ ಬಂದು ಟೋಲ್ ಬೂತ್ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
ಶುಕ್ರವಾರ ಮುಂಜಾನೆ ಸ್ಲೀಪರ್ ಕೋಚ್ ಬಸ್ ದೇವನಹಳ್ಳಿ ಟೋಲ್ ಬೂತ್ಗೆ ಡಿಕ್ಕಯಾಗಿ, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ದೇವನಹಳ್ಳಿ ಟೋಲ್ ಪ್ಲಾಜಾ ಬಳಿ ನಡೆದ ಈ ಅಪಘಾತದ ಸಂಪೂರ್ಣ ಚಿತ್ರಣ ಇದೀಗ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಸಿಟಿವಿ ವಿಡಿಯೋ ಇಲ್ಲಿದೆ.
- Naveen Kumar
- Updated on: Jan 2, 2026
- 9:54 am
ಮದ್ಯದ ಅಮಲಲ್ಲಿ ಫುಟ್ಪಾತ್ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್ ಮಿಸ್
ಬೆಂಗಳೂರಿನ ಸಹಕಾರ ನಗರದಲ್ಲಿರುವ ಮಾಲ್ ಆಫ್ ಏಷ್ಯಾದ ಗೇಟ್ ನಂ.3ರಲ್ಲಿ ನಿನ್ನೆ ರಾತ್ರಿ ಕಾರೊಂದು ಫುಟ್ಪಾತ್ಗೆ ನುಗ್ಗಿದ ಪರಿಣಾಮ 7 ಮಂದಿ ಗಾಯಗೊಂಡಿದ್ದಾರೆ. ಚಾಲಕ ಮದ್ಯದ ನಶೆಯಲ್ಲಿದ್ದ ಎನ್ನಲಾಗಿದ್ದು, ಅಪಘಾತ ವೇಳೆ ಬಾಲಕಿಯೋರ್ವಳು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾಳೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
- Naveen Kumar
- Updated on: Jan 1, 2026
- 6:07 pm
ದೊಡ್ಡಬಳ್ಳಾಪುರ: ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್ಹೌಸ್ ಮೇಲೆ ದಾಳಿ
ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಹಳ್ಳಿಯಲ್ಲಿ ಅನುಮತಿಯಿಲ್ಲದೆ ನಡೆಯುತ್ತಿದ್ದ ಹೊಸ ವರ್ಷಾಚರಣೆಯ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸುಮಾರು 40-50 ಯುವಕರು ಭಾಗಿಯಾಗಿದ್ದ ಈ ಪಾರ್ಟಿ ಬಗ್ಗೆ ಶಬ್ದ ಮಾಲಿನ್ಯದ ದೂರು ಬಂದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಫಾರ್ಮ್ಹೌಸ್ ಮಾಲೀಕರು ಮತ್ತು ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
- Naveen Kumar
- Updated on: Jan 1, 2026
- 7:16 am
ನ್ಯೂಇಯರ್ ಪಾರ್ಟಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ವೇಳೆ ಪೊಲೀಸ್ ಕೈಗೆ ಸಿಕ್ಕಿಬಿದ್ದ ನೈಜಿರಿಯಾ ಮೂಲದ ವ್ಯಕ್ತಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ನೈಜಿರಿಯಾ ಮೂಲದ ವ್ಯಕ್ತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವಿಶೇಷ ಕಾರ್ಯಾಚರಣೆಯಲ್ಲಿ 21 ಗ್ರಾಂ ಕೊಕೇನ್ ಹಾಗೂ 30 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ ಕೂಡ ಡ್ರಗ್ಸ್ ಮಾರಾಟದಲ್ಲಿ ಭಾಗಿಯಾಗಿದ್ದ ಆರೋಪಿ, ಏರ್ಪೋರ್ಟ್ ಬಳಿ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನಲ್ಲಿ ನಡೆಯುವ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ತಡೆಯಲು ತನಿಖೆ ಮುಂದುವರಿದಿದೆ.
- Naveen Kumar
- Updated on: Dec 31, 2025
- 10:08 pm