AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAK vs SL: ಪಾಕಿಸ್ತಾನ ಸೆಮಿಫೈನಲ್​ಗೇರಬೇಕೆಂದರೆ ಶ್ರೀಲಂಕಾ ವಿರುದ್ಧ ಎಷ್ಟು ಅಂತರದಲ್ಲಿ ಗೆಲ್ಲಬೇಕು?

Pakistan's T20 WC Semis Dream: ಇಂಗ್ಲೆಂಡ್ ವಿರುದ್ಧದ ನ್ಯೂಜಿಲೆಂಡ್ ಸೋಲು ಪಾಕಿಸ್ತಾನದ ಟಿ20 ವಿಶ್ವಕಪ್ ಸೆಮಿಫೈನಲ್ ಕನಸುಗಳಿಗೆ ಜೀವ ತುಂಬಿದೆ. ಇಂಗ್ಲೆಂಡ್ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ್ದು, ಈಗ ಪಾಕಿಸ್ತಾನಕ್ಕೆ ಶ್ರೀಲಂಕಾ ವಿರುದ್ಧ ಕೊನೆಯ ಸೂಪರ್ 8 ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯ. ಸೆಮಿಫೈನಲ್ ಪ್ರವೇಶಿಸಲು, ಪಾಕಿಸ್ತಾನ ನ್ಯೂಜಿಲೆಂಡ್‌ನ ಉತ್ತಮ ನೆಟ್ ರನ್ ರೇಟ್ ಅನ್ನು ಮೀರಿಸಬೇಕಿದೆ, ಇದು ದೊಡ್ಡ ಸವಾಲಾಗಿದೆ.

PAK vs SL: ಪಾಕಿಸ್ತಾನ ಸೆಮಿಫೈನಲ್​ಗೇರಬೇಕೆಂದರೆ ಶ್ರೀಲಂಕಾ ವಿರುದ್ಧ ಎಷ್ಟು ಅಂತರದಲ್ಲಿ ಗೆಲ್ಲಬೇಕು?
Pak Team
ಪೃಥ್ವಿಶಂಕರ
|

Updated on:Feb 27, 2026 | 11:07 PM

Share

ಟಿ20 ವಿಶ್ವಕಪ್‌ನ (T20 World Cup) ಸೂಪರ್ 8 ಸುತ್ತಿನ ಗ್ರೂಪ್ 2 ರಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಫಲಿತಾಂಶವು ಕಮರಿ ಹೋಗಿದ್ದ ಪಾಕಿಸ್ತಾನದ ಕನಸಿಗೆ ಜೀವ ತುಂಬಿದೆ. ಕೊನೆಯವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ನ್ಯೂಜಿಲೆಂಡ್, ತಾನು ಮಾಡಿದ ತಪ್ಪುಗಳಿಂದ ಸೋಲಿನ ಬೆಲೆ ತೆತ್ತಬೇಕಾಯಿತು. ಇತ್ತ ಕೊನೆಯ ಓವರ್​ನಲ್ಲಿ ಪಂದ್ಯ ಗೆದ್ದು ಅಜೇಯ ತಂಡವಾಗಿ ಇಂಗ್ಲೆಂಡ್‌ ಸೆಮಿಫೈನಲ್‌ ಪ್ರವೇಶಿಸಿತು. ಇಂಗ್ಲೆಂಡ್‌ ತಂಡದ ಈ ಗೆಲುವಿನಿಂದ ಪಾಕಿಸ್ತಾನದ ಸೆಮಿಫೈನಲ್ ಕನಸು ಜೀವಂತವಾಗಿದೆ. ಆದಾಗ್ಯೂ ಪಾಕಿಸ್ತಾನಕ್ಕೆ ಸೆಮಿಫೈನಲ್‌ ತಲುಪುವುದು ಅಷ್ಟು ಸುಲಭವಾಗಿಲ್ಲ. ಇದಕ್ಕಾಗಿ ಪಾಕಿಸ್ತಾನ, ಶ್ರೀಲಂಕಾವನ್ನು (Sri Lanka vs Pakistan) ಅವರ ತವರು ನೆಲದಲ್ಲಿ ಮಣಿಸಬೇಕಾಗಿದೆ. ಕೇವಲ ಸೋಲಿಸಿದರೆ ಮಾತ್ರ ಸಾಕಾಗದು ಬದಲಿಗೆ ಪಾಕಿಸ್ತಾನ ಗೆಲ್ಲುವುದರ ಜೊತೆಗೆ ಅದರ ನೆಟ್ ರನ್​ರೇಟ್ ಅನ್ನು ನ್ಯೂಜಿಲೆಂಡ್​ಗಿಂತ ಉತ್ತಮಗೊಳಿಸಬೇಕಿದೆ.

ವಾಸ್ತವವಾಗಿ ಪ್ರೇಮದಾಸ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿತ್ತು. ಇಂಗ್ಲೆಂಡ್ ಗೆಲ್ಲಲು ಕೊನೆಯ 18 ಎಸೆತಗಳಲ್ಲಿ 43 ರನ್‌ಗಳ ಅಗತ್ಯವಿತ್ತು. ಆದರೆ 18 ನೇ ಓವರ್ ನ್ಯೂಜಿಲೆಂಡ್‌ ಪಾಲಿಗೆ ದುಬಾರಿಯಾಯಿತು. ಗ್ಲೆನ್ ಪಿಲಿಪ್ಸ್ ಬೌಲ್ ಮಾಡಿದ ಈ ಓವರ್‌ನಲ್ಲಿ 22 ರನ್‌ಗಳು ಬಂದವು. ಇದರ ಪರಿಣಾಮವಾಗಿ ಇಂಗ್ಲೆಂಡ್ 4 ವಿಕೆಟ್‌ಗಳು ಮತ್ತು ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.

ಕಿವೀಸ್​ಗೆ ಈಗಲೂ ಇದೇ ಅವಕಾಶ

ಸೂಪರ್ 8 ಸುತ್ತಿನಲ್ಲಿ ಇಂಗ್ಲೆಂಡ್ ಆಡಿರುವ 3 ಪಂದ್ಯಗಳಲ್ಲಿ 3 ರಲ್ಲಿ ಗೆದ್ದು 6 ಅಂಕಗಳೊಂದಿಗೆ ಸೆಮಿಫೈನಲ್ ತಲುಪಿದೆ. ಮತ್ತೊಂದೆಡೆ, ಶ್ರೀಲಂಕಾ 2 ಪಂದ್ಯಗಳಲ್ಲಿ ಸೋತು ಸೆಮಿಫೈನಲ್‌ ರೇಸ್​ನಿಂದ ಹೊರಬಿದ್ದಿದೆ. ಈಗ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಗುಂಪು 2 ರಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಹೊಂದಿವೆ. ಆದಾಗ್ಯೂ ನ್ಯೂಜಿಲೆಂಡ್ ಸೂಪರ್ 8 ಸುತ್ತಿನ ಎಲ್ಲಾ ಮೂರು ಪಂದ್ಯಗಳನ್ನು ಆಡಿದ್ದು, ಆಡಿರುವ 3 ಪಂದ್ಯಗಳಲ್ಲಿ ಒಂದನ್ನು ಗೆದ್ದಿದ್ದು, ಒಂದು ಪಂದ್ಯವನ್ನು ಸೋತಿದೆ. ಉಳಿದಂತೆ 1 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ನ್ಯೂಜಿಲೆಂಡ್ 3 ಅಂಕಗಳು ಮತ್ತು +1.390 ನೆಟ್​ ರನ್​ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ENG vs NZ: ಗೆಲ್ಲುವ ಪಂದ್ಯ ಕೈಚೆಲ್ಲಿದ ನ್ಯೂಜಿಲೆಂಡ್; ಪಾಕ್ ಸೆಮೀಸ್ ಆಸೆ ಜೀವಂತ

ಸೆಮೀಸ್​ಗೇರಲು ಪಾಕ್ ಏನು ಮಾಡಬೇಕು?

ಇತ್ತ ಇಂಗ್ಲೆಂಡ್‌ ಗೆಲುವಿನಿಂದ ಸೆಮಿಫೈನಲ್​ಗೇರುವ ಅವಕಾಶ ಪಡೆದುಕೊಂಡಿರುವ ಪಾಕಿಸ್ತಾನ ತನ್ನ ಕೊನೆಯ ಸೂಪರ್ 8 ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸುತ್ತಿದೆ. ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ, ಅದರ ಬಳಿಯೂ 3 ಅಂಕಗಳು ಇರಲಿವೆ. ಪ್ರಸ್ತುತ ಪಾಕಿಸ್ತಾನ 2 ಪಂದ್ಯಗಳನ್ನಾಡಿದ್ದು, ಅದರಲ್ಲಿ ಒಂದನ್ನು ಸೋತಿದ್ದು, ಉಳಿದ ಒಂದು ಪಂದ್ಯ ಡ್ರಾ ಆಗಿದೆ. ಆದ್ದರಿಂದ 1 ಪಾಯಿಂಟ್ ಜೊತೆಗೆ -0.461 ನೆಟ್ ರನ್​ರೇಟ್ ಹೊಂದಿದೆ. ಪಾಕಿಸ್ತಾನ ಈಗ ಗೆಲುವಿನ ಜೊತೆಗೆ ನೆಟ್ ರನ್ ರೇಟ್​ ಅನ್ನು ಸಹ ಸುಧಾರಿಸಬೇಕಾಗಿದೆ. ಹೀಗಾಗಿ ಪಾಕಿಸ್ತಾನ ನೆಟ್ ರನ್ ರೇಟ್​ ಸುಧಾರಿಸಬೇಕೆಂದರೆ ಮೊದಲು ಬ್ಯಾಟಿಂಗ್ ಮಾಡಿದರೆ ಪಂದ್ಯವನ್ನು 65 ರನ್‌ಗಳಿಂದ ಗೆಲ್ಲಬೇಕಾಗುತ್ತದೆ. ಒಂದು ವೇಳೆ ಮೊದಲು ಬೌಲಿಂಗ್ ಮಾಡಿದರೆ 13.2 ಓವರ್‌ಗಳಲ್ಲಿ ಲಂಕಾ ನೀಡುವ ಗುರಿಯನ್ನು ಬೆನ್ನಟ್ಟಬೇಕಾಗುತ್ತದೆ. ಈ ಎರಡನ್ನೂ ಮಾಡುವಲ್ಲಿ ಪಾಕ್ ಎಡವಿದರೆ, ನ್ಯೂಜಿಲೆಂಡ್ ಉತ್ತಮ ನೆಟ್ ರನ್​ರೇಟ್ ಆಧಾರದ ಮೇಲೆ ಸೆಮಿಫೈನಲ್​ಗೇರಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:06 pm, Fri, 27 February 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು?
ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು?
ಸಾರ್ವಜನಿಕರೇ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡುವಾಗ ಹುಷಾರ್!
ಸಾರ್ವಜನಿಕರೇ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡುವಾಗ ಹುಷಾರ್!
ಲವ್ ವಿಚಾರಕ್ಕೆ 17ರ ಮಗಳನ್ನೇ ಕೊಂದ ಅಪ್ಪ: ತಂದೆಯ ಅಸಲಿ ಮುಖ ಬಯಲು
ಲವ್ ವಿಚಾರಕ್ಕೆ 17ರ ಮಗಳನ್ನೇ ಕೊಂದ ಅಪ್ಪ: ತಂದೆಯ ಅಸಲಿ ಮುಖ ಬಯಲು
ಶತಕದ ಪಂದ್ಯದಲ್ಲಿ ಒಂದೇ ರನ್​ಗೆ ಸುಸ್ತಾದ ಶ್ರೇಯಸ್ ಅಯ್ಯರ್
ಶತಕದ ಪಂದ್ಯದಲ್ಲಿ ಒಂದೇ ರನ್​ಗೆ ಸುಸ್ತಾದ ಶ್ರೇಯಸ್ ಅಯ್ಯರ್
ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ: ಲಂಗರು ಹಾಕಿದ ನೂರಾರು ಬೋಟ್​​​​
ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ: ಲಂಗರು ಹಾಕಿದ ನೂರಾರು ಬೋಟ್​​​​
ನಿಯಂತ್ರಣ ತಪ್ಪಿ ಏಕಾಏಕಿ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು
ನಿಯಂತ್ರಣ ತಪ್ಪಿ ಏಕಾಏಕಿ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು
ಜಿಟಿ ದೇವೇಗೌಡಗೆ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು​ ಸಮಾವೇಶ
ಜಿಟಿ ದೇವೇಗೌಡಗೆ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು​ ಸಮಾವೇಶ
ಕಲಬುರಗಿಯಲ್ಲಿ ಮಾಜಿ ಸೈನಿಕನ ಬರ್ಬರ ಹತ್ಯೆ: ಆಗಿದ್ದೇನು?
ಕಲಬುರಗಿಯಲ್ಲಿ ಮಾಜಿ ಸೈನಿಕನ ಬರ್ಬರ ಹತ್ಯೆ: ಆಗಿದ್ದೇನು?
ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ!
ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ!
ಶನಿ ಅಮಾವಾಸ್ಯೆ, ವೀಕೆಂಡ್ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ
ಶನಿ ಅಮಾವಾಸ್ಯೆ, ವೀಕೆಂಡ್ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ