ದುಲೀಪ್ ಟ್ರೋಫಿ ಟೂರ್ನಿಗೆ 6 ತಂಡಗಳು ಪ್ರಕಟ
Duleep Trophy 2026: ದುಲೀಪ್ ಟ್ರೋಫಿ ಎಂಬುದು ದೇಶೀಯ ವಲಯ ಟೆಸ್ಟ್ ಟೂರ್ನಿ. 1961-62 ರಲ್ಲಿ ಶುರುವಾದ ಈ ಟೂರ್ನಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ 6 ತಂಡಗಳು, ಅಂದರೆ ಕೇಂದ್ರ ವಲಯ, ದಕ್ಷಿಣ ವಲಯ, ಪೂರ್ವ ವಲಯ, ಪಶ್ಚಿಮ ವಲಯ, ಉತ್ತರ ವಲಯ ಮತ್ತು ಈಶಾನ್ಯ ವಲಯ ತಂಡಗಳು ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

ರಾಷ್ಟ್ರೀಯ ರೆಡ್-ಬಾಲ್ ಕ್ರಿಕೆಟ್ ಸೀಸನ್ ಆರಂಭವನ್ನು ಸೂಚಿಸುವ ಪ್ರಸಿದ್ಧ ‘ದುಲೀಪ್ ಟ್ರೋಫಿ‘ ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. ಆರು ವಲಯ ತಂಡಗಳ ನಡುವಣ ಈ ರೋಚಕ ಕದನಕ್ಕಾಗಿ ಎಲ್ಲಾ ತಂಡಗಳನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಆರೂ ವಲಯ ತಂಡಗಳಲ್ಲಿ ಸ್ಥಾನ ಪಡೆದಿರುವ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ…
ವೆಸ್ಟ್ ಝೋನ್ (ಪಶ್ಚಿಮ ವಲಯ): ರುತುರಾಜ್ ಗಾಯಕ್ವಾಡ್ (ನಾಯಕ), ಶಮ್ಸ್ ಮುಲಾನಿ, ಪೃಥ್ವಿ ಶಾ, ಸರ್ಫರಾಝ್ ಖಾನ್, ಮುಶೀರ್ ಖಾನ್, ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಹರ್ವಿಕ್ ದೇಸಾಯಿ, ಉರ್ವಿಲ್ ಪಟೇಲ್, ಶಿವಾಲಿಕ್ ಶರ್ಮಾ, ಸಿದ್ಧಾರ್ಥ್ ದೇಸಾಯಿ, ಅತಿತ್ ಶೇಠ್, ಮುಕೇಶ್ ಚೌಧರಿ, ಜೇಮೀತ್ ಪಟೇಲ್.
ಸೆಂಟ್ರಲ್ ಝೋನ್ (ಕೇಂದ್ರ ವಲಯ): ರಜತ್ ಪಟಿದಾರ್ (ನಾಯಕ), ರಿಂಕು ಸಿಂಗ್, ಆರ್ಯನ್ ಜುಯಲ್, ಕುನಾಲ್ ಸಿಂಗ್ ರಾಥೋಡ್, ಸರಂಶ್ ಜೈನ್, ಅಮನ್ ಮೊಖಾಡೆ, ಕುನಾಲ್ ಚಂದೇಲಾ, ಜೀಶನ್ ಅನ್ಸಾರಿ, ಆರ್ಯನ್ ಪಾಂಡೆ, ಅರ್ಷದ್ ಖಾನ್, ಆಯುಷ್ ಪಾಂಡೆ, ಯಶ್ ರಾಥೋಡ್, ಹರ್ಷ್ ದುಬೆ, ಯಶ್ ಠಾಕೂರ್, ನಾಚಿಕೇತ್ ಭೂತೆ.
ಈಸ್ಟ್ ಝೋನ್ (ಪೂರ್ವ ವಲಯ): ಇಶಾನ್ ಕಿಶನ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಮನ್ಯು ಈಶ್ವರನ್, ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಶಹಬಾಝ್ ಅಹ್ಮದ್, ಕುಮಾರ್ ಕುಶಾಗ್ರ, ಸುದೀಪ್ ಕುಮಾರ್ ಘರಾಮಿ, ಸೂರಜ್ ಸಿಂಧು ಜೈಸ್ವಾಲ್, ಶಿಖರ್ ಮೋಹನ್, ಅನುಕೂಲ್ ರಾಯ್, ವಿರಾಟ್ ಸಿಂಗ್, ಸುಭ್ರಾಂಶು ಸೇನಾಪತಿ, ಡೆನಿಶ್ ದಾಸ್, ಅಭಿಜಿತ್ ಸರ್ಕಾರ್.
ಸೌತ್ ಝೋನ್ (ದಕ್ಷಿಣ ವಲಯ): ತಿಲಕ್ ವರ್ಮಾ (ನಾಯಕ), ರಿಕ್ಕಿ ಭುಯಿ, ಅಭಿನವ್ ತೇಜ್ರಾನಾ, ಶೇಖ್ ರಶೀದ್, ಕೆ. ಹಿಮತೇಜ, ಸ್ಮರಣ್ ರವಿಚಂದ್ರನ್, ಎನ್. ಜಗದೀಶನ್, ಕರುಣ್ ನಾಯರ್, ಟಿ. ತ್ಯಾಗರಾಜನ್, ಶ್ರೇಯಸ್ ಗೋಪಾಲ್, ಸಾಯಿ ತೇಜ, ಟಿ. ವಿಜಯ್, ವಿದ್ವತ್ ಕಾವೇರಪ್ಪ, ಅಮನ್ ಖಾನ್.
ನಾರ್ತ್ ಝೋನ್ (ಉತ್ತರ ವಲಯ): ಕನ್ಹಯ್ಯಾ ವಾಧವನ್ (ನಾಯಕ), ಆಯುಷ್ ಬದೋನಿ (ಉಪನಾಯಕ), ಸನತ್ ಸಾಂಗ್ವಾನ್, ಕಮ್ರಾನ್ ಇಕ್ಬಾಲ್, ಯಶ್ ಧುಲ್, ಆಯುಷ್ ದೋಸೇಜಾ, ಅಬ್ದುಲ್ ಸಮದ್, ನಿಶಾಂತ್ ಸಿಂಧು, ಅರ್ಜುನ್ ಶರ್ಮಾ, ಅಬಿದ್ ಮುಷ್ತಾಕ್, ಅರ್ಷದೀಪ್ ಸಿಂಗ್, ಸುನಿಲ್ ಕುಮಾರ್, ಅನ್ಶುಲ್ ಕಂಬೋಜ್, ಯುಧ್ವೀರ್ ಸಿಂಗ್, ನಿಖಿಲ್ ಕಶ್ಯಪ್.
ಈಶಾನ್ಯ ವಲಯ (ನಾರ್ತ್ ಈಸ್ಟ್ ಝೋನ್): ಜೊನಾಥನ್ ರೊಂಗ್‌ಸೆನ್ (ನಾಯಕ), ಬಿಶ್ವರ್ಜಿತ್ ಸಿಂಗ್ ಕೊಂಥೌಜಮ್ (ಉಪನಾಯಕ), ಟೆಚಿ ನೇರಿ, ಪ್ರಿಯೋಜಿತ್, ರೊನಾಲ್ಡ್ ಮೈಟೆಯಿ, ಜೋತಿನ್ ಸಿಂಗ್ ಫೀರೋಯಿಜಮ್, ಸುಭಾಯಂಗ್‌ಡೊ ಕಿಶನ್, ಆಕಾಶ್ ಕುಮಾರ್ ಚೌಧರಿ, ಜೋಸೆಫ್ ಲಾಲ್‌ಥಾನ್‌ಖುಮಾ, ಲಾಲ್ರೆಂಪೌಯಾ, ಇಮ್ಲಿವಾಟಿ ಲೆಮ್ಟೂರ್, ವಿನೋ ಜಿ ಝಿಮೋಮಿ, ರಾಬಿನ್ ಲಿಂಬೂ, ಆಶಿಶ್ ಥಾಪಾ.
ಯಾವ ರಾಜ್ಯ ಯಾವ ವಲಯದಲ್ಲಿ?
ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ 6 ಪ್ರಮುಖ ಭೌಗೋಳಿಕ ವಲಯಗಳ ಅಡಿಯಲ್ಲಿ ಬರುವ ರಾಜ್ಯಗಳು ಹಾಗೂ ಕ್ರಿಕೆಟ್ ಸಂಸ್ಥೆಗಳ ಸಂಪೂರ್ಣ ವಿವರ ಇಲ್ಲಿದೆ.
- ಸೌತ್ ಝೋನ್ (ದಕ್ಷಿಣ ವಲಯ): ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಹೈದರಾಬಾದ್, ಗೋವಾ ಮತ್ತು ಪಾಂಡಿಚೇರಿ
- ವೆಸ್ಟ್ ಝೋನ್ (ಪಶ್ಚಿಮ ವಲಯ): ಮುಂಬೈ, ಮಹಾರಾಷ್ಟ್ರ, ಗುಜರಾತ್, ಸೌರಾಷ್ಟ್ರ ಮತ್ತು ಬರೋಡಾ.
- ಈಸ್ಟ್ ಝೋನ್ (ಪೂರ್ವ ವಲಯ): ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಬಿಹಾರ, ಅಸ್ಸಾಂ ಮತ್ತು ತ್ರಿಪುರ.
- ಸೆಂಟ್ರಲ್ ಝೋನ್ (ಕೇಂದ್ರ ವಲಯ): ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಉತ್ತರಾಖಂಡ, ವಿದರ್ಭ ಹಾಗೂ ರೈಲ್ವೇಸ್ ತಂಡ.
- ನಾರ್ತ್ ಝೋನ್ (ಉತ್ತರ ವಲಯ): ದೆಹಲಿ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಚಂಡೀಗಢ ಹಾಗೂ ಸರ್ವಿಸಸ್ ತಂಡ.
- ನಾರ್ತ್ ಈಸ್ಟ್ ಝೋನ್ (ಈಶಾನ್ಯ ವಲಯ): ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.
ಈ ಆರು ವಲಯಗಳ ತಂಡಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸಲಿದ್ದಾರೆ. ಅಂದರೆ, ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಯಾ ವಲಯದ ಆಟಗಾರರನ್ನೇ ಈ ಬಾರಿಯ ದುಲೀಪ್ ಟ್ರೋಫಿಗೆ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಟೀಮ್ ಇಂಡಿಯಾಗೆ ‘ಕಿಂಗ್ ಆಫ್ ಗಾಲೆ’ಯ ಬಗ್ಗೆ ಎಚ್ಚರಿಕೆ!
ದುಲೀಪ್ ಟ್ರೋಫಿ ಯಾವಾಗ ಶುರು?
ದುಲೀಪ್ ಟ್ರೋಫಿ 2026ರ ಟೂರ್ನಿಯು ಆಗಸ್ಟ್ 23, 2026 ರಿಂದ ಆರಂಭವಾಗಲಿದೆ. ಈ ಟೂರ್ನಿಯ ಎಲ್ಲಾ ಪಂದ್ಯಗಳು ಬೆಂಗಳೂರಿನ BCCI ಸೆಂಟರ್ ಆಫ್ ಎಕ್ಸಲೆನ್ಸ್ (COE) ಮೈದಾನದಲ್ಲಿ ನಡೆಯಲಿವೆ.




