AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರೇಲಿಯಾ ಟೆಸ್ಟ್ ತಂಡ ಪ್ರಕಟ: 13 ವರ್ಷಗಳ ದಾಖಲೆಗೆ ಬ್ರೇಕ್!

ನ್ಯೂಝಿಲೆಂಡ್ ವಿರುದ್ಧದ ಪ್ರತಿಷ್ಠಿತ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ 13 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಪ್ರಕಟಣೆಯೊಂದಿಗೆ ಕಳೆದ 13 ವರ್ಷಗಳಿಂದ ನಡೆದುಕೊಂಡು ಬಂದಿದ್ದ ಅಪರೂಪದ ಸಂಪ್ರದಾಯವೊಂದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಬ್ರೇಕ್ ಹಾಕಿದೆ. ತಂಡದಲ್ಲಿ ನಡೆದ ಆ ಮೇಜರ್ ಸರ್ಜರಿ ಏನು ಎಂಬುದರ ಸಂಪೂರ್ಣ ವಿವರ ಈ ಕೆಳಗಿನಂತಿದೆ...

ಆಸ್ಟ್ರೇಲಿಯಾ ಟೆಸ್ಟ್ ತಂಡ ಪ್ರಕಟ: 13 ವರ್ಷಗಳ ದಾಖಲೆಗೆ ಬ್ರೇಕ್!
Austalia Image Credit source: GettyImages
ಝಾಹಿರ್ ಯೂಸುಫ್
|

Updated on:Nov 28, 2026 | 11:04 AM

Share

ನ್ಯೂಝಿಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ 13 ಸದಸ್ಯರ ತಂಡವನ್ನು ಪ್ರಕಟಿಸಿದೆ. ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಹಾಗೂ ಮಾರ್ನಸ್ ಲಾಬುಶೇನ್ ಅವರನ್ನು ಕೈಬಿಟ್ಟು ಅಚ್ಚರಿ ಮೂಡಿಸಿರುವ ಕಾಂಗರೂ ಪಡೆ, ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿರುವ ಇಬ್ಬರು ಹೊಸ ಮುಖಗಳಿಗೆ ಇದೇ ಮೊದಲ ಬಾರಿಗೆ ಟೆಸ್ಟ್ ತಂಡದ ಬಾಗಿಲು ತೆರೆದಿದೆ.

ತಂಡದಲ್ಲಿ ಹೊಸಬರು:

  • ಜ್ಯಾಕ್ ಕ್ಲೇಟನ್ (ಬ್ಯಾಟರ್): ಕ್ವೀನ್ಸ್‌ಲ್ಯಾಂಡ್‌ನ ಈ ಎಡಗೈ ಬ್ಯಾಟರ್ ಪ್ರಸಕ್ತ ಶೆಫೀಲ್ಡ್ ಶೀಲ್ಡ್ ಋತುವಿನಲ್ಲಿ 74.83ರ ಭರ್ಜರಿ ಸರಾಸರಿಯಲ್ಲಿ ರನ್ ಕಲೆಹಾಕುವ ಮೂಲಕ ಆಯ್ಕೆಗಾರರ ಗಮನ ಸೆಳೆದು ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
  • ಕೋರಿ ರೊಚ್ಚಿಸಿಯೋಲಿ (ಆಫ್ ಸ್ಪಿನ್ನರ್): ವೆಸ್ಟ್​ ಆಸ್ಟ್ರೇಲಿಯಾದ ಈ ಸ್ಪಿನ್ನರ್ 2021ರಿಂದ ದೇಶೀಯ ಕ್ರಿಕೆಟ್‌ನಲ್ಲಿ 170 ವಿಕೆಟ್‌ಗಳನ್ನು ಕಬಳಿಸಿದ್ದು, ಅನುಭವಿ ನಾಥನ್ ಲಿಯಾನ್ ಬದಲಿಗೆ ತಂಡದಲ್ಲಿ ಚೊಚ್ಚಲ ಅವಕಾಶ ಪಡೆದಿದ್ದಾರೆ.

13 ವರ್ಷಗಳ ದಾಖಲೆಗೆ ಬ್ರೇಕ್!

2011ರಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಕಳೆದ 13 ವರ್ಷಗಳಿಂದ ಆಸ್ಟ್ರೇಲಿಯಾ ತಂಡದ ಅವಿಭಾಜ್ಯ ಅಂಗವಾಗಿದ್ದ ಅನುಭವಿ ಆಫ್ ಸ್ಪಿನ್ನರ್ ನಾಥನ್ ಲಿಯಾನ್, ಇದೇ ಮೊದಲ ಬಾರಿಗೆ ತವರಿನ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.

2013ರಿಂದ 2023ರವರೆಗೆ ಯಾವುದೇ ಪಂದ್ಯವನ್ನು ತಪ್ಪಿಸಿಕೊಳ್ಳದೆ ಸತತ 100 ಟೆಸ್ಟ್ ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ನಾಥನ್ ಲಿಯಾನ್ ಪಾತ್ರರಾಗಿದ್ದರು.

ಆದರೆ ಸೌತ್ ಆಫ್ರಿಕಾ ವಿರುದ್ಧದ ಇತ್ತೀಚಿನ ಸರಣಿಯಲ್ಲಿ 43.66ರ ಸರಾಸರಿಯಲ್ಲಿ ಕೇವಲ 6 ವಿಕೆಟ್ ಪಡೆದು ಕಳಪೆ ಪ್ರದರ್ಶನ ನೀಡಿದ್ದ ಲಿಯಾನ್‌ಗೆ ಆಯ್ಕೆಗಾರರು ವಿಶ್ರಾಂತಿ ನೀಡಿದ್ದಾರೆ. ಈ ಮೂಲಕ ದಶಕಕ್ಕೂ ಹೆಚ್ಚು ಕಾಲ ಕಾಂಗರೂ ಪಡೆಯ ಸ್ಪಿನ್ ವಿಭಾಗದ ಬೆನ್ನೆಲುಬಾಗಿದ್ದ ಲಿಯಾನ್ ಅವರ ದಾಖಲೆಯ ಓಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ಅವರ ಸ್ಥಾನಕ್ಕೆ ದೇಶೀಯ ಕ್ರಿಕೆಟ್‌ನಲ್ಲಿ 170 ವಿಕೆಟ್ ಕಬಳಿಸಿ ಮಿಂಚಿರುವ ಯುವ ಸ್ಪಿನ್ನರ್ ಕೋರಿ ರೊಚ್ಚಿಸಿಯೋಲಿ ಅವರಿಗೆ ಚೊಚ್ಚಲ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನ್ ಫೈನಲ್​ಗೆ: ಟೀಮ್ ಇಂಡಿಯಾ ಅಭಿಮಾನಿಗಳಿಗೆ ನಿರಾಸೆ!

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಜ್ಯಾಕ್ ಕ್ಲೇಟನ್, ಕ್ಯಾಮರೋನ್ ಗ್ರೀನ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮೈಕೆಲ್ ನೆಸರ್, ಮ್ಯಾಟ್ ರೆನ್‌ಶಾ, ಕೋರಿ ರೊಚ್ಚಿಸಿಯೋಲಿ, ಸ್ಟೀವ್ ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್.

ಆಸ್ಟ್ರೇಲಿಯಾ vs ನ್ಯೂಝಿಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಸ್ಥಳ ಸಮಯ
1ನೇ ಟೆಸ್ಟ್ ಡಿಸೆಂಬರ್ 9–13, 2026 ಪರ್ತ್ ಬೆಳಿಗ್ಗೆ 7:50 IST
2ನೇ ಟೆಸ್ಟ್ ಡಿಸೆಂಬರ್ 17–21, 2026 ಅಡಿಲೇಡ್ ಬೆಳಿಗ್ಗೆ 6:00 IST
3ನೇ ಟೆಸ್ಟ್ ಡಿಸೆಂಬರ್ 26–30, 2026 ಮೆಲ್ಬೋರ್ನ್ ಬೆಳಿಗ್ಗೆ 5:00 IST
4ನೇ ಟೆಸ್ಟ್ ಜನವರಿ 4–8, 2027 ಸಿಡ್ನಿ ಬೆಳಿಗ್ಗೆ 5:00 IST

Published On - 11:02 am, Sat, 28 November 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More