AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೃಂಗೇರಿಯಲ್ಲಿ ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!

ಶೃಂಗೇರಿಯಲ್ಲಿ ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:Feb 27, 2026 | 6:07 PM

Share

ವರನ ಮೇಲೆ ರೇಪ್ ಕೇಸ್ ಇದ್ದು, ಆತ ಕುಡುಕ ಎಂದು ಮದುವೆ ಮಂಟಪದ ವರೆಗೆ ಬಂದ ವಧು ವಿವಾಹ ನಿರಾಕರಿಸಿ ತೆರಳಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ. ಈಡಿಗರ ಸಮುದಾಯ ಭವನದಲ್ಲಿ ಭಾರೀ ಹೈಡ್ರಾಮಾ ನಡೆದಿದ್ದು, ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕ್ಕಮಗಳೂರು, ಫೆಬ್ರವರಿ 27: ಚೌಟ್ರಿವರೆಗೂ ಬಂದ ಮದುಮಗಳೊಬ್ಬಳು ತನಗೆ ಈ ವಿವಾಹ ಬೇಡ ಎಂದು ಹಿಂದಿರುಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ. ವರನ ಮೇಲೆ ರೇಪ್ ಕೇಸ್ ಇದ್ದು, ಆತ ಕುಡುಕನಾಗಿರುವ ಕಾರಣ ತನಗೆ ಈ ವಿವಾಹ ಇಷ್ಟವಿಲ್ಲ ಎಂದು ವಧು ವಾಪಸ್​​ ಆಗಿದ್ದಾಳೆ. ಶೃಂಗೇರಿಯ ಈಡಿಗರ ಸಮುದಾಯ ಭವನದಲ್ಲಿ ಶೃಂಗೇರಿಯ ಯುವಕನ​​ ಜೊತೆ ಬಾಳೆಹೊನ್ನೂರಿನ ಯುವತಿ ವಿವಾಹ ಇಂದು ನಿಶ್ಚಯಗೊಂಡಿತ್ತು. ಎಷ್ಟೇ ಮನವೊಲಿಸಲು ಯತ್ನಿಸಿದ್ರೂ ಮದುವೆಗೆ ಯುವತಿ ಒಪ್ಪಿಲ್ಲ ಎನ್ನಲಾಗಿದೆ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 27, 2026 06:06 PM
Follow Us