AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​ಡಿಕೆ ವಿರುದ್ಧ ಸಚಿವ ಹೆಚ್​​.ಸಿ. ಬಾಲಕೃಷ್ಣ ವಾಗ್ದಾಳಿ

‘ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ’: ಹೆಚ್​​ಡಿಕೆ ವಿರುದ್ಧ ಸಚಿವ ಹೆಚ್​​.ಸಿ. ಬಾಲಕೃಷ್ಣ ವಾಗ್ದಾಳಿ

ಪ್ರಶಾಂತ್​ ಬಿ.
| Edited By: |

Updated on: Nov 19, 2026 | 12:17 PM

Share

ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭಸ್ಮಾಸುರನಿಗೆ ಹೋಲಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬರೀ ಕಥೆ ಹೇಳಿಕೊಂಡ ಓಡಾಡಿದ್ರೆ ಏನೂ ಆಗಲ್ಲ. ಹೆಚ್​ಡಿಕೆಯವರು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ರಾಜ್ಯದಲ್ಲಿ ಎಲ್ಲೂ ಕೂಡ ಒಂದು ಕೈಗಾರಿಕೆ ಮಾಡಲಿಲ್ಲ. ಎಲ್ಲರಿಗೂ ಚಾಕೊಲೇಟ್ ಕೊಡುತ್ತಾ ಹೋಗುತ್ತಿದ್ದಾರೆ ಎಂದವರು ಕಿಡಿ ಕಾರಿದ್ದಾರೆ.

ರಾಮನಗರ, ನವೆಂಬರ್​​ 19: ನಮ್ಮ ಹಳೇ ಬಾಸ್​ ಕುಮಾರಸ್ವಾಮಿ ಭಸ್ಮಾಸುರ ಇದ್ದ ಹಾಗೆ, ಅವರು ಎಲ್ಲಿ ಹೋಗುತ್ತಾರೆ ಅಲ್ಲಿ ಅವರ ತಲೆಯ ಮೇಲೆ ಕೈ ಇಡ್ತಾರೆ ಎಂದು ಪೌರಾಡಳಿತ ಸಚಿವ ಹೆಚ್​​.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ಮುಂದೆ ಎನ್​​ಡಿಎ ಸರ್ಕಾರ ಬರಲಿದೆ ಎಂಬ ಹೆಚ್​ಡಿಕೆ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ನಾವು ನಮ್ಮ ಸರ್ಕಾರದ ಬರಲಿದೆ ಎಂದು ಹೇಳುತ್ತೇವೆ. ಏನೇ ಆಗಿದ್ದರೂ ಅಂತಿಮವಾಗಿ ಜನರು ತೀರ್ಪು ಕೊಡುತ್ತಾರೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ವಿರೋಧಿಗಳು ನಮ್ಮ ಸರ್ಕಾರದ ಕೆಲಸಗಳನ್ನು ಹೊಗಳುವುದಿಲ್ಲ. ಕುಮಾರಸ್ವಾಮಿ ಅವರಿಗೆ ಕೇಂದ್ರದಿಂದ ನಮಗೆ ಸಾಮಾಜಿಕ ನ್ಯಾಯ ಕೊಡಿಸಲು ಹೇಳಿ. ಕೈಗಾರಿಕೆ ಮಾಡಿದ್ರೆ ಮಾಗಡಿಯಲ್ಲಿ 150 ಎಕರೆ ಜಾಗ ಕೊಡುತ್ತೇವೆ. ಕೈಗಾರಿಕೆ ಸ್ಥಾಪನೆ ಮಾಡಿ ಉದ್ಯೋಗ ಕೊಡುತ್ತಾರಾ ಕೇಳಿ. ಬರೀ ಕಥೆ ಹೇಳಿಕೊಂಡ ಓಡಾಡಿದ್ರೆ ಏನೂ ಆಗಲ್ಲ. ಹೆಚ್​ಡಿಕೆಯವರು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ರಾಜ್ಯದಲ್ಲಿ ಎಲ್ಲೂ ಕೂಡ ಒಂದು ಕೈಗಾರಿಕೆ ಮಾಡಲಿಲ್ಲ. ಎಲ್ಲರಿಗೂ ಚಾಕೊಲೇಟ್ ಕೊಡುತ್ತಾ ಹೋಗುತ್ತಿದ್ದಾರೆ ಎಂದು ಹೆಚ್​​.ಸಿ.ಬಾಲಕೃಷ್ಣ ಕಿಡಿಕಾರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಶಾಂತ್​ ಬಿ.
ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More