AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಸಂಪ್ರದಾಯದಂತೆ ಮದುವೆಯಾದ ರಶ್ಮಿಕಾ-ವಿಜಯ್ ದೇವರಕೊಂಡ

Rashmika Mandanna and Vijay Deverakonda: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದ ಉದಯಪುರದ ಐಶಾರಾಮಿ ರೆಸಾರ್ಟ್​​ನಲ್ಲಿ ಈ ಜೋಡಿ ಇಂದು (ಫೆಬ್ರವರಿ 26) ಬೆಳಿಗ್ಗೆ ಶುಭ ಮುಹೂರ್ತದಲ್ಲಿ ತೆಲುಗು ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಎರಡೂ ಕುಟುಂಬದ ಸದಸ್ಯರು, ಹಿರಿಯರು ಮತ್ತು ಆಪ್ತೇಷ್ಟರ ಸಮ್ಮುಖದಲ್ಲಿ ವಿಜಯ್ ದೇವರಕೊಂಡ, ರಶ್ಮಿಕಾ ಅವರಿಗೆ ತಾಳಿ ಕಟ್ಟುವ ಮೂಲಕ ಇಬ್ಬರೂ ಸತಿ-ಪತಿಗಳಾಗಿದ್ದಾರೆ.

ತೆಲುಗು ಸಂಪ್ರದಾಯದಂತೆ ಮದುವೆಯಾದ ರಶ್ಮಿಕಾ-ವಿಜಯ್ ದೇವರಕೊಂಡ
Vijay Rash Wedding
ಮಂಜುನಾಥ ಸಿ.
|

Updated on: Feb 26, 2026 | 12:32 PM

Share

ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದ ಉದಯಪುರದ ಐಶಾರಾಮಿ ರೆಸಾರ್ಟ್​​ನಲ್ಲಿ ಈ ಜೋಡಿ ಇಂದು (ಫೆಬ್ರವರಿ 26) ಬೆಳಿಗ್ಗೆ ಶುಭ ಮುಹೂರ್ತದಲ್ಲಿ ತೆಲುಗು ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಎರಡೂ ಕುಟುಂಬದ ಸದಸ್ಯರು, ಹಿರಿಯರು ಮತ್ತು ಆಪ್ತೇಷ್ಟರ ಸಮ್ಮುಖದಲ್ಲಿ ವಿಜಯ್ ದೇವರಕೊಂಡ, ರಶ್ಮಿಕಾ ಅವರಿಗೆ ತಾಳಿ ಕಟ್ಟುವ ಮೂಲಕ ಇಬ್ಬರೂ ಸತಿ-ಪತಿಗಳಾಗಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರುಗಳು ಕಳೆದ ಕೆಲ ವರ್ಷಗಳಿಂದಳೂ ಪರಸ್ಪರ ಪ್ರೀತಿಸುತ್ತಿದ್ದಿದ್ದು ಗುಟ್ಟೇನೂ ಆಗಿರಲಿಲ್ಲ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಇದೀಗ ತಮ್ಮ ಪ್ರೀತಿಯನ್ನು ದಾಂಪತ್ಯವನ್ನಾಗಿ ಬದಲಾಯಿಸಿಕೊಂಡಿದ್ದಾರೆ.

ಉದಯಪುರದಲ್ಲಿ ಕಳೆದ ಕೆಲ ದಿನಗಳಿಂದಲೂ ಮದುವೆ ಕಾರ್ಯಗಳು ನಡೆಯುತ್ತಲೇ ಇದ್ದವು. ನಿನ್ನೆ ಹಳದಿ ಮತ್ತು ಸಂಗೀತ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎರಡು ದಿನಗಳ ಹಿಂದೆ ತೆಲಂಗಾಣದಿಂದ ಪುರೋಹಿತರ ತಂಡವೊಂದು ಇವರ ಮದುವೆ ಕಾರ್ಯಕ್ರಮಕ್ಕೆಂದು ಉದಯಪುರಕ್ಕೆ ಬಂದಿತ್ತು. ಪುರೋಹಿತರುಗಳು ತೆಲುಗು ಸಂಪ್ರದಾಯದಂತೆ ಈ ಜೋಡಿಯ ಮದುವೆ ಮಾಡಿಸಿದ್ದಾರೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಗೆ ತೆರಳಿದ ಆಶಿಕಾ ರಂಗನಾಥ್

ಇದೇ ದಿನ ಸಂಜೆ ವೇಳೆಗೆ ಕೊಡವ ಸಂಪ್ರದಾಯದಂತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಮತ್ತೊಮ್ಮೆ ನಡೆಯಲಿದೆ. ಇಬ್ಬರೂ ಸಹ ಭಿನ್ನ ಭಿನ್ನ ಸಂಪ್ರದಾಯಕ್ಕೆ ಸೇರಿದ ಕುಟುಂಬದವರಾಗಿರುವ ಕಾರಣ ಎರಡೂ ಕುಟುಂಬಗಳ ಸಂಪ್ರದಾಯ, ಆಚರಣೆಗೆ ಚ್ಯುತಿ ಬಾರದಂತೆ ಎರಡು ಭಿನ್ನ ರೀತಿಯಲ್ಲಿ ಈ ಜೋಡಿಯ ವಿವಾಹ ನಡೆಯುತ್ತಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ಸತಿ-ಪತಿಗಳಾಗಿದ್ದಾರೆ. ಇಬ್ಬರೂ ಮದುವೆ ನಡೆದಿದೆಯಾದರೂ ಮದುವೆಯ ಅಧಿಕೃತ ಫೋಟೊವನ್ನು ಇನ್ನೂ ಈ ಜೋಡಿ ಹಂಚಿಕೊಂಡಿಲ್ಲ.

ರಶ್ಮಿಕಾ ಮತ್ತು ವಿಜಯ್ ಅವರು ಮದುವೆಗೆ ಕೇವಲ ಆಪ್ತೇಷ್ಟರಿಗಷ್ಟೆ ಆಹ್ವಾನ ನೀಡಿದ್ದು, ಮಾರ್ಚ್ 04 ರಂದು ಬಲು ಅದ್ಧೂರಿಯಾಗಿ ಆರತಕ್ಷತೆ ಹಮ್ಮಿಕೊಂಡಿದ್ದು, ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಎಲ್ಲ ಚಿತ್ರರಂಗದ ಗಣ್ಯರು, ಆಂಧ್ರ, ತೆಲಂಗಾಣ ರಾಜ್ಯಗಳ ರಾಜಕೀಯ ಮುಖಂಡರುಗಳು ಹಾಗೂ ಕೆಲವು ಕೇಂದ್ರ ಸಚಿವರು, ಸಂಸದರು ಸಹ ಭಾಗಿ ಆಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಬೆಳಗಾವಿಯಲ್ಲಿ ಕಳೆಗಟ್ಟಿದ ಕನ್ನಡ ಹಬ್ಬ
ಬೆಳಗಾವಿಯಲ್ಲಿ ಕಳೆಗಟ್ಟಿದ ಕನ್ನಡ ಹಬ್ಬ
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು