AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹನುಮಾನ್ 2’ vs ‘ಜೈ ಹನುಮಾನ್‘: ಏನಿದು ವಿವಾದ?

‘ಜೈ ಹನುಮಾನ್’ ಸಿನಿಮಾದ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದ್ದು, ಸಿನಿಮಾ ಅನ್ನು ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ಆದರೆ ಇದೀಗ ಈ ಹಿಂದೆ ‘ಹನು-ಮ್ಯಾನ್’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಣ ಸಂಸ್ಥೆ, ಹೊಸ ನಾಯಕ ಮತ್ತು ನಿರ್ದೇಶಕನ ಜೊತೆಗೂಡಿ ‘ಹನುಮಾನ್ 2’ ಸಿನಿಮಾ ಅನ್ನು ಘೋಷಿಸಿದೆ.

‘ಹನುಮಾನ್ 2’ vs ‘ಜೈ ಹನುಮಾನ್‘: ಏನಿದು ವಿವಾದ?
Hanuman 2
ಮಂಜುನಾಥ ಸಿ.
|

Updated on:Nov 21, 2026 | 5:39 PM

Share

ಮುಖ್ಯಾಂಶಗಳು

  • ‘ಹನುಮಾನ್’ ಸಿನಿಮಾ ವಿವಾದದಲ್ಲಿ
  • ‘ಹನುಮಾನ್ 2’ ಸಿನಿಮಾ ಘೋಷಿಸಿದ ನಿರ್ಮಾಣ ಸಂಸ್ಥೆ
  • ‘ಜೈ ಹನುಮಾನ್’ ಸಿನಿಮಾ ಚಿತ್ರೀಕರಣ ಚಾಲ್ತಿಯಲ್ಲಿ

ರಿಷಬ್ ಶೆಟ್ಟಿ ‘ಜೈ ಹನುಮಾನ್’ ಸಿನಿಮಾನಲ್ಲಿ ನಟಿಸುತ್ತಿದ್ದು, ಇದು ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದ್ದು, ಸಿನಿಮಾ ಅನ್ನು ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ಆದರೆ ಇದೀಗ ಈ ಹಿಂದೆ ‘ಹನು-ಮ್ಯಾನ್’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಣ ಸಂಸ್ಥೆ, ಹೊಸ ನಾಯಕ ಮತ್ತು ನಿರ್ದೇಶಕನ ಜೊತೆಗೂಡಿ ‘ಹನುಮಾನ್ 2’ ಸಿನಿಮಾ ಅನ್ನು ಘೋಷಿಸಿದೆ.

‘ಹನುಮಾನ್’ ಸಿನಿಮಾ ನಿರ್ದೇಶಿಸಿದ್ದ ಪ್ರಶಾಂತ್ ವರ್ಮಾ ಮತ್ತು ಆ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಪ್ರೈಂ ಶೋ ಎಂಟರ್ಟೈನ್​​ಮೆಂಟ್ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ. ಪ್ರಶಾಂತ್ ವರ್ಮಾ, ಪ್ರತ್ಯೇಕವಾಗಿ ಮೈತ್ರಿ ಮೂವಿ ಮೇಕರ್ಸ್ ಜೊತೆ ಕೈ ಜೋಡಿಸಿ ರಿಷಬ್ ಶೆಟ್ಟಿ ಅವರನ್ನು ನಾಯಕನನ್ನಾಗಿಸಿ ‘ಜೈ ಹನುಮಾನ್’ ಘೋಷಿಸಿ ಚಿತ್ರೀಕರಣ ನಡೆಸುತ್ತಿದ್ದಾರೆ. ಆದರೆ ಇದೀಗ ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ‘ಹನುಮಾನ್ 2’ ಸಿನಿಮಾ ಘೋಷಿಸಿದ್ದು, ಈ ಸಿನಿಮಾನಲ್ಲಿ ಪಂಜ ವೈಷ್ಣವ್ ತೇಜ್ ನಾಯಕನಾಗಿ ನಟನೆ ಮಾಡಲಿದ್ದಾರೆ. ಸಿನಿಮಾದ ಪೋಸ್ಟರ್ ಅನ್ನು ಸಹ ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ. ಸಿನಿಮಾ ಅನ್ನು ವಿಐ ಆನಂದ್ ನಿರ್ದೇಶನ ಮಾಡಲಿದ್ದಾರೆ.

ಈಗ ಘೋಷಿಸಿರು ‘ಹನುಮಾನ್ 2’ ಸಿನಿಮಾ ಮೊದಲ ಭಾಗದ ಮುಂದುವರೆದ ಭಾಗ ಎನ್ನಲಾಗುತ್ತಿದೆ. ಆದರೆ ಬೇರೊಬ್ಬ ನಿರ್ದೇಶಕರು ಕತೆಯನ್ನು ಮುಂದುವರೆಸಲಿದ್ದಾರೆ. ಆದರೆ ಇದು ಸಾಕಷ್ಟು ಗೊಂದಲಗಳಿಗೆ ಸಹ ಕಾರಣವಾಗಿವೆ. ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್​​ನ ನಿರ್ಮಾಪಕ ನಿರಂಜನ್ ರೆಡ್ಡಿ ಮತ್ತು ನಾಯಕ ತೇಜ್ ಸಜ್ಜಾ, ನಿರ್ದೇಶಕ ಪ್ರಶಾಂತ್ ವರ್ಮಾ ನಡುವಿನ ಭಿನ್ನಾಭಿಪ್ರಾಯದಿಂದ ಇದೀಗ ನಿರಂಜನ್ ರೆಡ್ಡಿ ಅವರು ಹೊಸ ತಂಡದ ಜೊತೆಗೆ ಕೈ ಜೋಡಿಸಿದ್ದಾರೆ. ಆದರೆ ಸಿನಿಮಾದ ಬೌದ್ಧಿಕ ಆಸ್ತಿ (ಐಪಿ) ಪ್ರಶಾಂತ್ ವರ್ಮಾ ಬಳಿಯೇ ಇದೆ, ಆದರೂ ಸಹ ನಿರ್ಮಾಣ ಸಂಸ್ಥೆಯು ಅದೇ ಕತೆ ಆಧರಿಸಿದ ಸಿನಿಮಾ ಘೋಷಿಸಿರುವುದು ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ನಡುವೆ ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ

ಈ ಹಿಂದೆ ನಡೆದಿದ್ದ ವಿವಾದದಲ್ಲಿ ನಿರ್ಮಾಪಕ ನಿರಂಜನ್ ರೆಡ್ಡಿ ನ್ಯಾಯಾಲಯದ ಮೆಟ್ಟಿಲೇರಿ, ಬೇರೊಂದು ಚಿತ್ರ ಮಾಡಲು ತಾವು ಪ್ರಶಾಂತ್ ವರ್ಮ ಅವರಿಗೆ ಮುಂಗಡ ಹಣ ನೀಡಿದ್ದೇವೆ, ಹಾಗಾಗಿ ಅವರು ಮೈತ್ರಿಯೊಂದಿಗೆ ಕೆಲಸ ಮಾಡುವಂತಿಲ್ಲ ಎಂದು ಅವರು ವಾದಿಸಿದರು. ಆದರೆ ಪ್ರಶಾಂತ್ ಅವರ ವಾದವೇನೆಂದರೆ, ಆ ಹಣ ವಾಸ್ತವದಲ್ಲಿ ತಮಗೆ ಬರಬೇಕಾದ ‘ಹನುಮಾನ್’ ಬಾಕಿಯ ಒಂದು ಸಣ್ಣ ಭಾಗ ಮಾತ್ರ, ಮತ್ತು ಅದಕ್ಕೂ ಬೇರೆ ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು. ಆದರೆ ಮೈತ್ರಿ ಮೂವಿ ಮೇಕರ್ಸ್ ಮುಂದೆ ಬಂದು ಪ್ರಶಾಂತ್ ವರ್ಮಾ ಪರವಾಗಿ 23 ಕೋಟಿ ರೂಪಾಯಿ ಹಣವನ್ನು ಪ್ರೈಂ ಶೋ ಎಂಟರ್ಟೈನ್​​ಮೆಂಟ್ ಸಂಸ್ಥೆಗೆ ನೀಡಿದ್ದರು.

ಆ ಘಟನೆ ಬಳಿಕ ಪ್ರೈಂ ಶೋ, ‘ಹನುಮಾನ್’ ಸಿನಿಮಾದ ಕತೆ ಅಥವಾ ಹೆಸರನ್ನು ಬಳಸುವಂತಿಲ್ಲ ಎಂದೇ ಹೇಳಲಾಗಿತ್ತು. ಆದರೆ ಈಗ ನಿರ್ಮಾಣ ಸಂಸ್ಥೆಯು ‘ಹನುಮಾನ್ 2’ ಸಿನಿಮಾ ಅನ್ನು ಘೋಷಣೆ ಮಾಡಿರುವುದು ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:37 pm, Sat, 21 November 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸರ್ಕಾರಿ ಜಮೀನು ಸಿಬ್ಬಂದಿ ಹೆಸರಿಗೆ ವರ್ಗಾವಣೆ; ಅಧಿಕಾರಿಗಳು ಸಸ್ಪೆಂಡ್
ಸರ್ಕಾರಿ ಜಮೀನು ಸಿಬ್ಬಂದಿ ಹೆಸರಿಗೆ ವರ್ಗಾವಣೆ; ಅಧಿಕಾರಿಗಳು ಸಸ್ಪೆಂಡ್
ಠಾಣೆಗಳಲ್ಲಿ ಇನ್ಮುಂದೆ ನೋ ಸೆಟ್ಲ್‌ಮೆಂಟ್: ನೂತನ ಚೀಫ್ ಕಮಿಷನರ್ ಹಿತೇಂದ್ರ
ಠಾಣೆಗಳಲ್ಲಿ ಇನ್ಮುಂದೆ ನೋ ಸೆಟ್ಲ್‌ಮೆಂಟ್: ನೂತನ ಚೀಫ್ ಕಮಿಷನರ್ ಹಿತೇಂದ್ರ
"ಸನ್ಯಾಸಿ, ಸಿಎಂ ಎಲ್ಲವೂ ಹೊರಗಷ್ಟೇ, ಅಮ್ಮನ ಮುಂದೆ ಕೇವಲ ಮಗ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?