ಈ ವರ್ಷ ತಾಯಿಯಾದ ನಟಿಯರು, ಸಮಂತಾ ಮತ್ತು ಇನ್ಯಾರ್ಯಾರು?
ನಟಿ ಸಮಂತಾ ನಿನ್ನೆಯಷ್ಟೆ ತಾಯಿ ಆಗಿದ್ದಾರೆ. ರಾಜ್ ನಿಧಿಮೋರು ಜೊತೆಗೆ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಸಮಂತಾ ಮದುವೆ ಆಗಿದ್ದರು. ಇದೆ ವರ್ಷದ ಆರಂಭದಲ್ಲಿ ಅವರು ತಾವು ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದರು. ನಿನ್ನೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ‘ದೇವ್’ ಎಂದು ಹೆಸರಿಟ್ಟಿದ್ದಾರೆ. ಸಮಂತಾ ಮಾತ್ರವೇ ಅಲ್ಲದೆ, ಈ ವರ್ಷ ಈ ವರೆಗೆ ಹಲವು ನಟಿಯರು ತಾಯಿ ಆಗಿದ್ದಾರೆ. ಪಟ್ಟಿ ಇಲ್ಲಿದೆ...
Updated on: Nov 21, 2026 | 11:40 AM

Celebrity Moms

ನಟಿ ದೀಪಿಕಾ ಪಡುಕೋಣೆಯ ಎರಡನೇ ಪುತ್ರಿ ದೇವಿ ಇದೇ ವರ್ಷ ಜನ್ಮಿಸಿದ್ದಾರೆ. ಸೆಪ್ಟೆಂಬರ್ 19ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅವರ ಮೊದಲನೇ ಮಗುವಿಗೆ ದುವಾ ಎಂದು ಹೆಸರಿಟ್ಟರೆ, ಎರಡನೇ ಮಗುವಿಗೆ ದೇವಿ ಎಂದು ಹೆಸರಿಟ್ಟಿದ್ದಾರೆ.

ನಟಿ ಸಮಂತಾ ಋತ್ ಪ್ರಭು ಈ ವರ್ಷ ತಾಯಿ ಆಗಿದ್ದಾರೆ. ಮೊದಲ ಮದುವೆ ಮುರಿದು ಬಿದ್ದ ಬಳಿಕ ಕಳೆದ ವರ್ಷ ರಾಜ್ ನಿಧಿಮೋರು ಜೊತೆ ವಿವಾಹವಾದರು. ನಿನ್ನೆ ಸಮಂತಾ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಖ್ಯಾತ ನಟ ಅನಿಲ್ ಕಪೂರ್ ಪುತ್ರಿ ಮತ್ತು ನಟಿ ಸೋನಂ ಕಪೂರ್ ಸಹ ಈ ವರ್ಷ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. 2022 ರಲ್ಲಿ ಮೊದಲ ಮಗ ಜನಿಸಿದ್ದ, ಬಳಿಕ ಈಗ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಅವರಿಗೆ ಎರಡನೇ ಪುತ್ರ ಜನಿಸಿದ್ದಾನೆ.

ತೆಲುಗು, ಬೆಂಗಾಲಿ, ಹಿಂದಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟನೆ ಮಾಡಿರುವ ನಟಿ ಪೂಜಾ ಬ್ಯಾನರ್ಜಿ ಇದೇ ವರ್ಷ ತಾಯಿ ಆಗಿದ್ದಾರೆ. ಇದೇ ವರ್ಷ ಆಗಸ್ಟ್ನಲ್ಲಿ ಎರಡನೇ ಮಗುವಿಗೆ ಪೂಜಾ ಜನ್ಮ ನೀಡಿದ್ದಾರೆ.

ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಇದೇ ವರ್ಷ ತಂದೆ ಆಗಿದ್ದಾರೆ. ಅವರ ಪತ್ನಿ, ವೈದ್ಯೆ ಧನ್ಯತಾ ಅವರು ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ‘ಎರೆಯ’ ಎಂದು ಹೆಸರಿಡಲಾಗಿದೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



