AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2027: ಮೆಂಟರ್ ಧೋನಿಯ ಮಾಸ್ಟರ್ ಪ್ಲ್ಯಾನ್ ರೆಡಿ!

ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕ ಎಂ.ಎಸ್. ಧೋನಿ ಆಟಗಾರನಾಗಿ ನಿವೃತ್ತಿ ಘೋಷಿಸಿದಾಗ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಧೋನಿ ಅವರನ್ನು 'ಮೆಂಟರ್' ಆಗಿ ನೇಮಿಸುವ ಮೂಲಕ ಯೆಲ್ಲೊ ಪಡೆಗೆ ಮತ್ತೆ ಆನೆಬಲ ತಂದುಕೊಟ್ಟಿದೆ. ಕಳೆದ ಮೂರು ಸೀಸನ್‌ಗಳಲ್ಲಿ ಸತತ ವೈಫಲ್ಯ ಅನುಭವಿಸಿ ಮಂಕಾಗಿರುವ ಸಿಎಸ್‌ಕೆ ತಂಡವನ್ನು ಮತ್ತೆ ಚಾಂಪಿಯನ್ ಪಟ್ಟಕ್ಕೇರಿಸಲು 'ಮೆಂಟರ್ ಮಹೀ' ಈಗಾಗಲೇ ಪ್ಲ್ಯಾನ್ ರೆಡಿ ಮಾಡಿಕೊಂಡಿದ್ದಾರೆ.

IPL 2027: ಮೆಂಟರ್ ಧೋನಿಯ ಮಾಸ್ಟರ್ ಪ್ಲ್ಯಾನ್ ರೆಡಿ!
Ms Dhoni Image Credit source: x.com
ಝಾಹಿರ್ ಯೂಸುಫ್
|

Updated on: Nov 21, 2026 | 11:11 AM

Share

ಚೆನ್ನೈ ಸೂಪರ್ ಕಿಂಗ್ಸ್ (CSK) ಪಾಳಯದಲ್ಲಿ ಈಗ ಹೊಸ ಸಂಚಲನ ಶುರುವಾಗಿದೆ. ನವೆಂಬರ್ 17, 2026 ರಂದು ಆಟಗಾರನಾಗಿ ಐಪಿಎಲ್‌ಗೆ ವಿದಾಯ ಹೇಳಿದ ಮಹೇಂದ್ರ ಸಿಂಗ್ ಧೋನಿ, ಇದೀಗ ಐಪಿಎಲ್ 2027 ರ ಸೀಸನ್‌ಗೆ ತಂಡದ ಮೆಂಟರ್ (ಮಾರ್ಗದರ್ಶಕ) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ಮೂರು ಸೀಸನ್‌ಗಳಲ್ಲಿ ಪ್ಲೇ-ಆಫ್ ಕೂಡ ತಲುಪದೆ ಸತತ ವೈಫಲ್ಯ ಅನುಭವಿಸಿರುವ ಸಿಎಸ್‌ಕೆ ತಂಡವನ್ನು ಮತ್ತೆ ಗೆಲುವಿನ ಹಳಿಗೆ ತರಲು ‘ಕ್ಯಾಪ್ಟನ್ ಕೂಲ್’ ಈಗಾಗಲೇ ತಮ್ಮ ‘ಮಾಸ್ಟರ್ ಪ್ಲ್ಯಾನ್’ ಸಿದ್ಧಪಡಿಸಿದ್ದಾರೆ.

ಮೈದಾನದ ಒಳಗಿದ್ದಾಗ ತಮ್ಮ ಚಾಣಾಕ್ಷತನದಿಂದ ಪಂದ್ಯದ ದಿಕ್ಕನ್ನೇ ಬದಲಿಸುತ್ತಿದ್ದ ಧೋನಿ, ಈಗ ಡಗೌಟ್‌ನಲ್ಲಿ ಕುಳಿತು ಯೆಲ್ಲೊ ಪಡೆಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಮೆಂಟರ್ ಧೋನಿಯ ಆ ಮಾಸ್ಟರ್ ಪ್ಲ್ಯಾನ್ ಏನು? ಇಲ್ಲಿದೆ ಸಂಪೂರ್ಣ ವಿವರ.

ಮಿನಿ ಹರಾಜಿನಲ್ಲಿ ‘ಪರ್ಫೆಕ್ಟ್’ ತಂತ್ರ:

ಕಳೆದ ಮೂರು ವರ್ಷಗಳ ಸೋಲಿಗೆ ತಂಡದ ಸಮತೋಲನ ತಪ್ಪಿರುವುದೇ ಮುಖ್ಯ ಕಾರಣ ಎಂಬುದನ್ನು ಧೋನಿ ನಿಖರವಾಗಿ ಗುರುತಿಸಿದ್ದಾರೆ. ಮುಂಬರುವ ಐಪಿಎಲ್ 2027 ರ ಮಿನಿ ಹರಾಜಿನಲ್ಲಿ ಝಹೀರ್ ಖಾನ್ ಮತ್ತು ತಂಡದ ಆಡಳಿತ ಮಂಡಳಿಯೊಂದಿಗೆ ಸೇರಿ ಧೋನಿ ಹೊಸ ತಂತ್ರ ಹೆಣೆಯುತ್ತಿದ್ದಾರೆ. ದೊಡ್ಡ ಹೆಸರುಗಳ ಹಿಂದೆ ಬೀಳುವ ಬದಲು, ಚೆನ್ನೈನ ಚೆಪಾಕ್ ಪಿಚ್‌ಗೆ ಹೊಂದಿಕೊಳ್ಳುವ ಮತ್ತು ತಂಡದ ದೌರ್ಬಲ್ಯಗಳನ್ನು ನೀಗಿಸುವ ನಿಜವಾದ ಮ್ಯಾಚ್-ವಿನ್ನರ್‌ಗಳನ್ನು ಖರೀದಿಸುವುದು ಅವರ ಮೊದಲ ಗುರಿಯಾಗಿದೆ.

‘ಅಸ್ಥಿರತೆ’ಗೆ ಬ್ರೇಕ್:

ಇತ್ತೀಚಿನ ಸೀಸನ್‌ಗಳಲ್ಲಿ ಪ್ಲೇಯಿಂಗ್ ಇಲೆವೆನ್​​ನಲ್ಲಿ ಪದೇ ಪದೇ ಬದಲಾವಣೆಗಳಾಗುತ್ತಿದ್ದ ಬಗ್ಗೆ ಧೋನಿ ತೀವ್ರ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ಸಿಎಸ್‌ಕೆ ತಂಡದ ಯಶಸ್ಸಿನ ಗುಟ್ಟೇ ಸ್ಥಿರತೆ. ಹೀಗಾಗಿ, ಮೆಂಟರ್ ಆಗಿ ಧೋನಿ ಅವರು ತಂಡಕ್ಕೆ ದೀರ್ಘಕಾಲದ ಸ್ಥಿರತೆ ನೀಡಬಲ್ಲ ಸಮರ್ಥ ನಾಯಕನ ಆಯ್ಕೆಯಲ್ಲೂ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಯುವ ಆಟಗಾರರ ‘ಗ್ರೂಮಿಂಗ್’:

2028 ರ ಮೆಗಾ ಹರಾಜಿಗೂ ಮುನ್ನ ಸಿಎಸ್‌ಕೆ ತಂಡದಲ್ಲಿ ಭವಿಷ್ಯದ ಬಲಿಷ್ಠ ಪೀಳಿಗೆಯನ್ನು ಕಟ್ಟುವುದು ಧೋನಿಯ ದೂರದೃಷ್ಟಿಯ ಯೋಜನೆ. ಒತ್ತಡದ ಸನ್ನಿವೇಶಗಳಲ್ಲಿ ತಾಳ್ಮೆಯಿಂದ ಪಂದ್ಯವನ್ನು ಫಿನಿಶ್ ಮಾಡುವುದು ಹೇಗೆ ಎಂಬುದನ್ನು ಯುವ ಆಟಗಾರರಿಗೆ ಕಲಿಸಲು ಧೋನಿ ವಿಶೇಷ ತರಬೇತಿ ಶಿಬಿರಗಳಲ್ಲಿ ಭಾಗವಹಿಸಲಿದ್ದಾರೆ.

ಡಗೌಟ್‌ನಿಂದಲೇ ‘ಮೈಂಡ್ ಗೇಮ್’:

ಧೋನಿ ವಿಕೆಟ್ ಹಿಂದೆ ನಿಲ್ಲದಿದ್ದರೂ, ಬೌಂಡರಿ ಗೆರೆಯ ಆಚೆಯಿಂದಲೇ ಎದುರಾಳಿ ತಂಡದ ತಂತ್ರಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಪಂದ್ಯದ ಪ್ರತಿ ಹಂತದಲ್ಲೂ ನಾಯಕನಿಗೆ ಸಂದೇಶ ರವಾನಿಸುವುದು, ಬೌಲಿಂಗ್ ಬದಲಾವಣೆ ಮತ್ತು ಫೀಲ್ಡಿಂಗ್ ನಿಯೋಜನೆಯಲ್ಲಿ ಮಾರ್ಗದರ್ಶನ ನೀಡುವ ಮೂಲಕ ಮೈದಾನದ ಹೊರಗಿನಿಂದಲೇ ಪಂದ್ಯವನ್ನು ನಿಯಂತ್ರಿಸಲಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಸಾಧ್ಯವಾಗದೇ ಇರುವುದನ್ನು ಸಾಧಿಸಿ ತೋರಿಸಿದ ಗಿಲ್!

ಒಟ್ಟಿನಲ್ಲಿ, ಎಂ.ಎಸ್. ಧೋನಿ ಅವರು ಬ್ಯಾಟ್ ಮತ್ತು ಗ್ಲೌಸ್ ಕಳಚಿಟ್ಟಿರಬಹುದು, ಆದರೆ ಚೆನ್ನೈ ಸೂಪರ್ ಕಿಂಗ್ಸ್‌ ಮೇಲಿನ ಅವರ ಪ್ರೀತಿ ಮತ್ತು ಗೆಲ್ಲುವ ಛಲ ಕಿಂಚಿತ್ತೂ ಕಡಿಮೆಯಾಗಿಲ್ಲ. ‘ಕ್ಯಾಪ್ಟನ್ ಕೂಲ್’ ಆಗಿ ಐದು ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದ ಮಹೀ, ಈಗ ‘ಮೆಂಟರ್ ಮಹೀ’ ಆಗಿ ತಮ್ಮ ಚಾಣಾಕ್ಷ ಮಾಸ್ಟರ್ ಪ್ಲ್ಯಾನ್ ಮೂಲಕ ಯೆಲ್ಲೊ ಪಡೆಗೆ ಮತ್ತೆ ಗತವೈಭವ ತಂದುಕೊಡಲು ಸಜ್ಜಾಗಿದ್ದಾರೆ. ಅದರಂತೆ 2027 ರ ಐಪಿಎಲ್‌ನಲ್ಲಿ ಸಿಎಸ್‌ಕೆ ಮತ್ತೆ ಚಾಂಪಿಯನ್ ಪಟ್ಟಕ್ಕೇರಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್