Chennai Super Kings
Chennai Super Kings
IPL 2026: ಸತತ 14 ವರ್ಷಗಳ ಐಪಿಎಲ್ ಪ್ರಯಾಣಕ್ಕೆ ಅಂತ್ಯ ಹಾಡಿದ ಆರ್‌ಸಿಬಿ ಮಾಜಿ ನಾಯಕ
Faf du Plessis IPL Auction 2026: ಫಾಫ್ ಡು ಪ್ಲೆಸಿಸ್ 2026ರ ಐಪಿಎಲ್ ಮಿನಿ ಹರಾಜಿನಿಂದ ಹಿಂದೆ ಸರಿದಿದ್ದಾರೆ. 14 ವರ್ಷಗಳ ಯಶಸ್ವಿ ಐಪಿಎಲ್ ಪಯಣದ ನಂತರ, ಹೊಸ ಸವಾಲನ್ನು ಎದುರಿಸಲು ಪಿಎಸ್ಎಲ್ನಲ್ಲಿ ಆಡಲು ನಿರ್ಧರಿಸಿದ್ದಾರೆ ಎಂದು ಅವರು ನವೆಂಬರ್ 29 ರಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಸಿಎಸ್‌ಕೆ, ಆರ್‌ಸಿಬಿ ಮತ್ತು ಡೆಲ್ಲಿ ಪರ ಆಡಿದ್ದ ಫಾಫ್ ಭಾರತ ಮತ್ತು ಐಪಿಎಲ್ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಹೇಳಿದ್ದಾರೆ.
- pruthvi Shankar
- Updated on: Nov 29, 2025
- 8:31 pm
VIDEO: ಕಟೌಟ್, ಬಿಜಿಎಂ… ಸಿನಿಮಾ ಸ್ಟೈಲ್ನಲ್ಲಿ ಸಂಜು ಸ್ಯಾಮ್ಸನ್ ಆಗಮನ
IPL 2026 Sanju Samson: ಜೈಲರ್ ಮೂವಿ ಬಿಜಿಎಂ, ಕಟೌಟ್ನೊಂದಿಗೆ ರಾರಾಜಿಸಿರುವ ಈ ವಿಡಿಯೋ ತುಣುಕಿನಲ್ಲಿ ಸಂಜು ಸ್ಯಾಮ್ಸನ್ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಸಹ ಬಳಸಲಾಗಿದೆ. ಇದೀಗ ಸಂಜು ಸ್ಯಾಮ್ಸನ್ ಅವರ ಸಿಎಸ್‌ಕೆ ಎಂಟ್ರಿಯ ವಿಡಿಯೋದೊಂದಿಗೆ ಐಪಿಎಲ್ 2026 ರಲ್ಲೂ ಅವರು 11 ನಂಬರ್ನ ಜೆರ್ಸಿ ಧರಿಸಿ ಕಣಕ್ಕಿಳಿಯುವುದು ಖಚಿತವಾಗಿದೆ.
- Zahir Yusuf
- Updated on: Nov 19, 2025
- 11:32 am
IPL 2026: CSK ತಂಡದಿಂದ ಮೂವರು ವಿದೇಶಿ ಆಟಗಾರರು ಔಟ್
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ನಾಲ್ವರು ವಿದೇಶಿ ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಇಲ್ಲಿ ಸ್ಯಾಮ್ ಕರನ್ ಅವರನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಜೊತೆ ಸ್ವಾಪ್ ಡೀಲ್ ಮಾಡಿಕೊಂಡರೆ, ಇನ್ನುಳಿದ ಮೂವರನ್ನು ತಂಡದಿಂದ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.
- Zahir Yusuf
- Updated on: Nov 15, 2025
- 1:11 pm
IPL 2026: ಶತಕೋಟಿಗೂ ಅಧಿಕ ಸಂಪಾದನೆಯೊಂದಿಗೆ ಸಿಎಸ್‌ಕೆ ತೊರೆದ ರವೀಂದ್ರ ಜಡೇಜಾ
Ravindra Jadeja IPL Trade: ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆದು ರಾಜಸ್ಥಾನ್ ರಾಯಲ್ಸ್ ಸೇರುವ ಸಾಧ್ಯತೆಯಿದೆ. ಟ್ರೇಡಿಂಗ್ ಮೂಲಕ ಈ ವರ್ಗಾವಣೆ ಖಚಿತವಾಗಿದ್ದು, ಅವರ 12 ವರ್ಷಗಳ CSK ಪ್ರಯಾಣ ಅಂತ್ಯವಾಗಲಿದೆ. ಜಡೇಜಾ CSKಗೆ ಮೂರು ಪ್ರಶಸ್ತಿ ಗೆಲ್ಲಲು ನೆರವಾಗಿದ್ದು, ಈ ಅವಧಿಯಲ್ಲಿ 123.4 ಕೋಟಿ ರೂ. ಸಂಪಾದಿಸಿದ್ದಾರೆ. ಮುಂದಿನ ಐಪಿಎಲ್ ಸೀಸನ್‌ನಲ್ಲಿ ಹೊಸ ತಂಡದಲ್ಲಿ ಜಡೇಜಾ ಆಡುವುದನ್ನು ಕಾಣಬಹುದು.
- pruthvi Shankar
- Updated on: Nov 13, 2025
- 4:43 pm
IPL 2026: ನಾನು ತಂಡಕ್ಕೆ ಬರಬೇಕೆಂದರೆ..; ರಾಜಸ್ಥಾನ್ಗೆ ಬಿಸಿ ತುಪ್ಪವಾದ ರವೀಂದ್ರ ಜಡೇಜಾ ಷರತ್ತು
Ravindra Jadeja's Condition: ಐಪಿಎಲ್ 2026 ಮಿನಿ ಹರಾಜುಗೂ ಮುನ್ನ, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಸಂಜು ಸ್ಯಾಮ್ಸನ್ ಹಾಗೂ ರವೀಂದ್ರ ಜಡೇಜಾ ವಿನಿಮಯ ವರದಿಯಾಗಿದೆ. ರಾಜಸ್ಥಾನ್ ಸೇರಲು ಜಡೇಜಾ ನಾಯಕತ್ವದ ಷರತ್ತು ವಿಧಿಸಿದ್ದು, ಫ್ರಾಂಚೈಸಿ ಒಪ್ಪಿಕೊಂಡಿದೆ ಎನ್ನಲಾಗಿದೆ. ಇದರಿಂದ ಸಂಜು ನಿರ್ಗಮನದಿಂದ ಹೊಸ ನಾಯಕನ ಅವಶ್ಯಕತೆ ಇದ್ದು, ಜಡೇಜಾ ಅವರ ಅನುಭವಕ್ಕೆ RR ಮಣೆ ಹಾಕಿದೆ. ಆದರೆ, ಈ ಒಪ್ಪಂದ ಯುವ ಆಟಗಾರರ ಮೇಲೆ ಪರಿಣಾಮ ಬೀರಲಿದೆ.
- pruthvi Shankar
- Updated on: Nov 12, 2025
- 4:56 pm
IPL 2026: ರವೀಂದ್ರ ಜಡೇಜಾ, ಕರನ್, ಸಂಜು ಸ್ಯಾಮ್ಸನ್ ಟ್ರೇಡಿಂಗ್ಗೆ ದೊಡ್ಡ ತೊಡಕು..!
IPL 2026: ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ವಿದೇಶಿ ಆಟಗಾರರಾಗಿ ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಫಝಲ್ಹಕ್ ಫಾರೂಖಿ, ಜೋಫ್ರಾ ಆರ್ಚರ್, ಕ್ವೇನಾ ಮಫಾಕ, ಮಹೀಶ್ ತೀಕ್ಷಣ, ನಾಂಡ್ರೆ ಬರ್ಗರ್ ಇದ್ದಾರೆ. ಅಂದರೆ ಆರ್ಆರ್ ತಂಡದಲ್ಲಿ ವಿದೇಶಿ ಆಟಗಾರರ ಕೋಟ ಸಂಪೂರ್ಣ ಭರ್ತಿಯಾಗಿದೆ. ಇದುವೇ ಈಗ ಟ್ರೇಡಿಂಗ್ ಪ್ರಕ್ರಿಯೆಗೆ ಸಮಸ್ಯೆಯಾಗಿ ಪರಿಣಮಿಸಿದೆ.
- Zahir Yusuf
- Updated on: Nov 12, 2025
- 8:25 am
IPL 2026: CSK ತಂಡದಲ್ಲಿ ರವೀಂದ್ರ ಜಡೇಜಾ ಯುಗಾಂತ್ಯ..!
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 2026 ರಲ್ಲಿ ರವೀಂದ್ರ ಜಡೇಜಾ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದ ಸಂಜು ಸ್ಯಾಮ್ಸನ್ ಸಿಎಸ್‌ಕೆ ಪರ ಬ್ಯಾಟ್ ಬೀಸಲಿದ್ದಾರೆ. ಇದರ ಜೊತೆಗೆ ಸಿಎಸ್‌ಕೆ ತಂಡದ ಸ್ಯಾಮ್ ಕರನ್ ಕೂಡ ಆರ್ಆರ್ ತಂಡದ ಪಾಲಾಗಲಿದ್ದಾರೆ.
- Zahir Yusuf
- Updated on: Nov 11, 2025
- 8:24 am
IPL 2026: ಸಿಎಸ್‌ಕೆ ತಂಡದಿಂದ ಈ ಮೂವರನ್ನು ಹೊರಹಾಕಬೇಕು ಎಂದ ಸುರೇಶ್ ರೈನಾ
CSK IPL 2026 Auction: ಐಪಿಎಲ್ 2026 ಮಿನಿ ಹರಾಜಿಗೆ ಮುನ್ನ, ಸುರೇಶ್ ರೈನಾ CSKಗೆ ಪ್ರಮುಖ ಸಲಹೆ ನೀಡಿದ್ದಾರೆ. ಧೋನಿ, ಜಡೇಜಾ, ರುತುರಾಜ್, ನೂರ್ ಅಹ್ಮದ್ ಅವರನ್ನು ಉಳಿಸಿಕೊಳ್ಳಲು ರೈನಾ ಸೂಚಿಸಿದ್ದಾರೆ. ಡೆವೊನ್ ಕಾನ್ವೇ, ವಿಜಯ್ ಶಂಕರ್, ದೀಪಕ್ ಹೂಡಾ ಅವರನ್ನು ಬಿಡುಗಡೆ ಮಾಡಿ, ಸ್ಥಳೀಯ ಆಟಗಾರರನ್ನು ಸೇರಿಸಿಕೊಳ್ಳಲು ಸಲಹೆ ನೀಡಿದ್ದಾರೆ.
- pruthvi Shankar
- Updated on: Nov 10, 2025
- 6:59 pm
ಗುಜರಾತ್ ತಂಡದ ಸ್ಟಾರ್ ಆಲ್ರೌಂಡರ್ಗೆ ಗಾಳ ಹಾಕಿದ ಸಿಎಸ್‌ಕೆ; ಒಪ್ಪಂದಕ್ಕೆ ಒಲ್ಲೆ ಎಂದ ಟೈಟಾನ್ಸ್
IPL 2026: 2025ರ ಐಪಿಎಲ್ ವೈಫಲ್ಯದ ನಂತರ, 2026ರ ಮೆಗಾ ಹರಾಜಿಗೂ ಮುನ್ನ ಸಿಎಸ್‌ಕೆ ಬಲಿಷ್ಠ ತಂಡ ಕಟ್ಟಲು ಪ್ರಯತ್ನಿಸುತ್ತಿದೆ. ರಾಜಸ್ಥಾನ್ನ ಸಂಜು ಸ್ಯಾಮ್ಸನ್ ಮತ್ತು ಗುಜರಾತ್ ಟೈಟಾನ್ಸ್ನ ವಾಷಿಂಗ್ಟನ್ ಸುಂದರ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಸಿಎಸ್‌ಕೆ ಆಸಕ್ತಿ ವಹಿಸಿದೆ. ಸ್ಯಾಮ್ಸನ್ಗಾಗಿ ಜಡೇಜಾ, ಸ್ಯಾಮ್ ಕರನ್ ಬಿಟ್ಟುಕೊಡಲು ಸಿದ್ಧವಿದ್ದರೂ, ಸುಂದರ್ ಟ್ರೇಡ್ ಪ್ರಸ್ತಾಪವನ್ನು ಗುಜರಾತ್ ತಿರಸ್ಕರಿಸಿದೆ. ಧೋನಿ ನಿವೃತ್ತಿಗೂ ಮುನ್ನ ತಂಡವನ್ನು ಬಲಪಡಿಸುವುದು ಸಿಎಸ್‌ಕೆ ಗುರಿ.
- pruthvi Shankar
- Updated on: Nov 10, 2025
- 6:03 pm
IPL 2026: ಇಬ್ಬರನ್ನು ನೀಡಿ ಸಂಜು ಸ್ಯಾಮ್ಸನ್ನ ಪಡೆಯಲಿರುವ CSK
IPL 2026 Sanju Samson: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಅವರನ್ನು ಟ್ರೇಡ್ ಮಾಡಲು ಮುಂದಾಗಿದೆ. ಅದು ಸಹ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮನ್ಸ್ಗಾಗಿ. ಅಂದರೆ ಜಡೇಜಾ ಅವರನ್ನು ಆರ್ಆರ್ ತಂಡಕ್ಕೆ ನೀಡಿ ಸ್ಯಾಮ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಿಎಸ್‌ಕೆ ಮುಂದಾಗಿದೆ.
- Zahir Yusuf
- Updated on: Nov 10, 2025
- 8:24 am