AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Auction 2026: ಸಿಎಸ್​ಕೆ 14.2 ಕೋಟಿ ರೂ. ನೀಡಿ ಖರೀದಿಸಿದ ಪ್ರಶಾಂತ್ ವೀರ್ ಯಾರು?

Prashant Veer Auction Price: ಉತ್ತರ ಪ್ರದೇಶದ ಆಲ್ ರೌಂಡರ್ ಪ್ರಶಾಂತ್ ವೀರ್ ಐಪಿಎಲ್ ಇತಿಹಾಸದಲ್ಲಿ ದುಬಾರಿ ಅನ್​ಕ್ಯಾಪ್ಡ್ ಆಟಗಾರನಾಗಿ ದಾಖಲೆ ಸೃಷ್ಟಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಇವರನ್ನು 14.2 ಕೋಟಿಗೆ ಖರೀದಿಸಿತು. ಎಡಗೈ ಸ್ಪಿನ್ನರ್ ಹಾಗೂ ಬ್ಯಾಟ್ಸ್‌ಮನ್ ಆಗಿರುವ ಪ್ರಶಾಂತ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ರವೀಂದ್ರ ಜಡೇಜಾ ಬದಲಿಗೆ ಅವರನ್ನು ಸಿಎಸ್‌ಕೆ ಖರೀದಿಸಿದ್ದು, ಅವರ ಪ್ರದರ್ಶನವನ್ನು ಕಾದು ನೋಡಬೇಕಾಗಿದೆ.

ಪೃಥ್ವಿಶಂಕರ
|

Updated on:Dec 16, 2025 | 6:12 PM

Share
ಉತ್ತರ ಪ್ರದೇಶದ ಆಲ್ ರೌಂಡರ್ ಪ್ರಶಾಂತ್ ವೀರ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತಕ್ಕೆ ಹರಾಜಾದ ಅನ್​ಕ್ಯಾಪ್ಡ್ ಆಟಗಾರ ಎಂಬ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಎಡಗೈ ಸ್ಪಿನ್ನರ್ ಹಾಗೂ ಬ್ಯಾಟ್ಸ್‌ಮನ್ ಆಗಿರುವ ಪ್ರಶಾಂತ್ ಅವರನ್ನು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 14.2 ಕೋಟಿಗೆ ಖರೀದಿಸಿತು.

1 / 5
ಮೂಲ ಬೆಲೆ 30 ಲಕ್ಷ ರೂಗಳೊಂದಿಗೆ ಹರಾಜಿಗೆ ಪ್ರವೇಶಿಸಿದ ಪ್ರಶಾಂತ್ ಖರೀದಿಗಾಗಿ ಹೈದರಾಬಾದ್ ಮತ್ತು ಸಿಎಸ್​ಕೆ ನಡುವೆ ಪೈಪೋಟಿ ನಡೆಯಿತು. ಹೀಗಾಗಿ ಬಿಡ್ 10 ಕೋಟಿಯನ್ನು ದಾಟಿ ಮುಂದೆ ಸಾಗಿತು. ಅಂತಿಮವಾಗಿ ಸನ್​ರೈಸರ್ಸ್​ ಹೈದರಾಬಾದ್‌ 14 ಕೋಟಿಗೆ ತನ್ನ ಬಿಡ್ ನಿಲ್ಲಿಸಿದರೆ, ಸಿಎಸ್​ಕೆ 14.20 ಕೋಟಿ ನೀಡಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು.

2 / 5
ಉತ್ತರ ಪ್ರದೇಶದ ಅಮೇಥಿಯವರಾಗಿರುವ ಪ್ರಶಾಂತ್ ವೀರ್ ಇದುವರೆಗೆ ಎರಡು ಪ್ರಥಮ ದರ್ಜೆ ಪಂದ್ಯಗಳು ಮತ್ತು ಒಂಬತ್ತು ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 12 ವಿಕೆಟ್‌ಗಳ ಜೊತೆಗೆ ಟಿ20 ಕ್ರಿಕೆಟ್‌ನಲ್ಲಿ 170 ರ ಸ್ಟ್ರೈಕ್ ರೇಟ್​ನಲ್ಲಿ 112 ರನ್‌ಗಳನ್ನು ಗಳಿಸಿದ್ದಾರೆ.

3 / 5
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತರ ಪ್ರದೇಶ ಪರ ಉತ್ತಮ ಪ್ರದರ್ಶನ ನೀಡಿರುವ ಪ್ರಶಾಂತ್ ವೀರ್ 37 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 112 ರನ್ ಬಾರಿಸಿದ್ದಾರೆ. ಹಾಗೆಯೇ ಪ್ರತಿ ಓವರ್‌ಗೆ ಕೇವಲ 6.7 ರನ್‌ಗಳ ಎಕಾನಮಿ ದರದಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಶಾಂತ್ ವೀರ್ ಅತ್ಯುತ್ತಮ ಫೀಲ್ಡರ್ ಆಗಿದ್ದು, ರವೀಂದ್ರ ಜಡೇಜಾ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ಖರೀದಿಸಿದೆ.

4 / 5
ವಾಸ್ತವವಾಗಿ ಸಂದರ್ಶನವೊಂದರಲ್ಲಿ ಪ್ರಶಾಂತ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕೇವಲ ಒಂದು ಸೀಸನ್ ಆಡಬೇಕೆಂದು ಬಯಸಿದ್ದಾಗಿ ಹೇಳಿದ್ದರು. ಅದರಂತೆ ಈಗ ಅವರನ್ನು ಸಿಎಸ್​ಕೆ ಫ್ರಾಂಚೈಸಿ ದುಬಾರಿ ಬೆಲೆ ನೀಡಿ ಖರೀದಿಸಿದೆ. ಇದೀಗ ಪ್ರಶಾಂತ್ ತನ್ನ ನೆಚ್ಚಿನ ತಂಡದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಕಾದು ನೋಡಬೇಕಾಗಿದೆ.

5 / 5

Published On - 6:11 pm, Tue, 16 December 25