BCCI
BCCI: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಭಾರತೀಯ ಕ್ರಿಕೆಟ್ನ ಆಡಳಿತ ಕೇಂದ್ರ. 1928 ರಲ್ಲಿ ರಚಿಸಲಾದ ಈ ಸಂಸ್ಥೆಯು ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯ ಮೊದಲ ಅಧ್ಯಕ್ಷ ಆರ್ಇ ಗ್ರಾಂಟ್ ಗೋವನ್. ಮಂಡಳಿಯ ಪ್ರಸ್ತುತ ಅಧ್ಯಕ್ಷರಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ರೋಜರ್ ಬಿನ್ನಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪೂರ್ಣ ಮತ್ತು ಸಹವರ್ತಿ ಸದಸ್ಯ ಸಂಸ್ಥೆಗಳನ್ನು ಒಳಗೊಂಡಿದ್ದು, ಇದಲರಲ್ಲಿ ಬಹುಪಾಲು ಸದಸ್ಯರು ರಾಜ್ಯ ಕ್ರಿಕೆಟ್ ಸಂಸ್ಥೆಗಳಾಗಿವೆ. ಅದರಂತೆ ಇದೀಗ ಬಿಸಿಸಿಐ ಅಧೀನದಲ್ಲಿ 41 ಕ್ರಿಕೆಟ್ ಸಂಸ್ಥೆಗಳಿವೆ. ಇನ್ನು ರಾಷ್ಟ್ರೀಯ ಸರಣಿಗಳೊಂದಿಗೆ ಬಿಸಿಸಿಐ ಆಯೋಜಿಸುವ ಪ್ರಮುಖ ದೇಶೀಯ ಟೂರ್ನಿಗಳೆಂದರೆ ರಣಜಿ ಟ್ರೋಫಿ, ವಿಜಯ್ ಹಝಾರೆ ಟ್ರೋಫಿ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಐಪಿಎಲ್