AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲಿ ಐಷರಾಮಿ ಫ್ಲಾಟ್‌ ಖರೀದಿಸಿದ ಶಿವಂ ದುಬೆ..! ಬೆಲೆ ಎಷ್ಟು ಕೋಟಿ ಗೊತ್ತಾ?

Shivam Dube Mumbai flat: ಟಿ20 ವಿಶ್ವಕಪ್ ಗೆಲುವಿನ ನಂತರ ಟೀಂ ಇಂಡಿಯಾ ಸ್ಟಾರ್ ಶಿವಂ ದುಬೆ ಸದ್ದು ಮಾಡಿದ್ದಾರೆ. ಮುಂಬೈನಲ್ಲಿ ₹27.50 ಕೋಟಿ ಮೌಲ್ಯದ ಎರಡು ಐಷಾರಾಮಿ ಫ್ಲಾಟ್‌ಗಳನ್ನು ಖರೀದಿಸಿ ಅವರು ಸುದ್ದಿಯಲ್ಲಿದ್ದಾರೆ. ಬಿಸಿಸಿಐ ಒಪ್ಪಂದ, T20 ಪಂದ್ಯಗಳ ಶುಲ್ಕ ಮತ್ತು ಐಪಿಎಲ್ ಮೂಲಕ ದುಬೆಯ ಆದಾಯದ ಮೂಲಗಳನ್ನು ಲೇಖನವು ವಿವರಿಸುತ್ತದೆ. ವಿಶ್ವಕಪ್‌ನಲ್ಲಿ ಅವರ ಅದ್ಭುತ ಪ್ರದರ್ಶನವನ್ನು ಸಹ ಇಲ್ಲಿ ಚರ್ಚಿಸಲಾಗಿದೆ.

ಮುಂಬೈನಲ್ಲಿ ಐಷರಾಮಿ ಫ್ಲಾಟ್‌ ಖರೀದಿಸಿದ ಶಿವಂ ದುಬೆ..! ಬೆಲೆ ಎಷ್ಟು ಕೋಟಿ ಗೊತ್ತಾ?
Shivam Dube
ಪೃಥ್ವಿಶಂಕರ
|

Updated on: Mar 13, 2026 | 8:11 PM

Share

2026 ರ ಟಿ20 ವಿಶ್ವಕಪ್‌ ( T20 World Cup) ಗೆದ್ದು ರೈಲಿನ ಪ್ರಯಾಣ ಬೆಳೆಸಿ ತವರಿಗೆ ಮರಳಿದ್ದ ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಶಿವಂ ದುಬೆ (Shivam Dube) ತಮ್ಮ ಸರಳತೆಯಿಂದ ಸಖತ್ ಸದ್ದು ಮಾಡಿದ್ದರು. ಇದೀಗ ದುಬೆ ತಮ್ಮ ದುಬಾರಿ ಮನೆಯ ಬೆಲೆಯ ಮೂಲಕ ಸೋಶಿಯಲ್ ಮೀಡಿಯಾವನ್ನು ಹುಬ್ಬೇರುವಂತೆ ಮಾಡಿದ್ದಾರೆ. ಇಡೀ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪರ ಗಮನಾರ್ಹ ಪ್ರದರ್ಶನ ನೀಡಿದ ಆಟಗಾರರ ಪೈಕಿ ಶಿವಂ ದುಬೆ ಕೂಡ ಒಬ್ಬರು. ತಂಡಕ್ಕೆ ಅಗತ್ಯವಿದ್ದ ಸಮಯದಲ್ಲಿ ಸಮಯೋಜಿತ ಪ್ರದರ್ಶನ ನೀಡಿದ ದುಬೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಈ ಪಂದ್ಯಾವಳಿಯಲ್ಲಿ ದುಬೆ ನೀಡಿದ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು.

ದುಬೆ ಖರೀದಿಸಿರುವ ಫ್ಲಾಟ್‌ನ ಬೆಲೆ ಎಷ್ಟು?

ಮೇಲೆ ಹೇಳಿದಂತೆ ಭಾರತದ ಸತತ ಎರಡು ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಡಗೈ ಬ್ಯಾಟ್ಸ್‌ಮನ್ ಶಿವಂ ದುಬೆ ಕಳೆದ ವರ್ಷ ಮುಂಬೈನಲ್ಲಿ ಕೋಟ್ಯಂತರ ಮೌಲ್ಯದ ಫ್ಲಾಟ್‌ಗಳನ್ನು ಖರೀದಿ ಮಾಡಿದ್ದಾರೆ. ಜೂನ್ 2025 ರಲ್ಲಿ ಮುಂಬೈನ ಜನಪ್ರಿಯ ಓಶಿವಾಡಾ ಪ್ರದೇಶದಲ್ಲಿ ವಸತಿ ಯೋಜನೆಯಲ್ಲಿ ಎರಡು ಫ್ಲಾಟ್‌ಗಳನ್ನು ದುಬೆ ಖರೀದಿಸಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಇದರ ಒಟ್ಟು ಮೌಲ್ಯ ₹27.50 ಕೋಟಿ ಎಂತಲೂ ವರದಿಯಲ್ಲಿ ತಿಳಿಸಲಾಗಿದೆ. ಎರಡೂ ಫ್ಲಾಟ್‌ಗಳು ಡಿಎಲ್‌ಎಚ್ ಎನ್‌ಕ್ಲೇವ್‌ನಲ್ಲಿದ್ದು, ಈ ಫ್ಲಾಟ್‌ಗಳನ್ನು ದುಬೆ, ದೇವ್ ಲ್ಯಾಂಡ್ ಮತ್ತು ಹೌಸಿಂಗ್ ಲಿಮಿಟೆಡ್‌ನಿಂದ ಖರೀದಿಸಿದ್ದಾರೆ.

ರಿಜಿಸ್ಟ್ರಿ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿರುವಂತೆ, ದುಬೆ ಖರೀದಿಸಿರುವ ಈ ಎರಡೂ ಫ್ಲಾಟ್‌ಗಳು ಒಂದೇ ಕಟ್ಟಡದಲ್ಲಿವೆ. ಒಂದು 17 ನೇ ಮಹಡಿಯಲ್ಲಿದ್ದರೆ, ಇನ್ನೊಂದು 18 ನೇ ಮಹಡಿಯಲ್ಲಿದ್ದು, ಒಟ್ಟು ವಿಸ್ತೀರ್ಣ ಸುಮಾರು 9,600 ಚದರ ಅಡಿ ಎಂದು ವರದಿಯಾಗಿದೆ. ಈ ಫ್ಲಾಟ್‌ಗಳನ್ನು ಖರೀದಿಸಲು ಶಿವಂ ದುಬೆ ₹1.65 ಕೋಟಿ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದ್ದಾರೆ . ಹಾಗೆಯೇ ದುಬೆ ಈ ಸೊಸೈಟಿಯಲ್ಲಿ ಮೂರು ಪಾರ್ಕಿಂಗ್ ಸ್ಲಾಟ್‌ಗಳನ್ನು ಸಹ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಶಿವಂ ದುಬೆಯ ಆದಾಯದ ಮೂಲ

ಪ್ರಸ್ತುತ ಭಾರತ ಟಿ20 ತಂಡದಲ್ಲಿ ಮಾತ್ರ ಆಡುತ್ತಿರುವ ದುಬೆ, ಆಡುವ ಪ್ರತಿ ಟಿ20 ಪಂದ್ಯಕ್ಕೆ ಬಿಸಿಸಿಐನಿಂದ 3 ಲಕ್ಷ ರೂ. ವೇತನ ಪಡೆಯುತ್ತಾರೆ. ಹಾಗೆಯೇ ಬಿಸಿಸಿಐ ಕೇಂದ್ರ ಒಪ್ಪಂದದ ಸಿ ದರ್ಜೆಯಲ್ಲಿ ಸ್ಥಾನ ಪಡೆದಿರುವ ದುಬೆ ವಾರ್ಷಿಕವಾಗಿ 1 ಕೋಟಿ ರೂ. ವೇತನ ಪಡೆಯುತ್ತಾರೆ. ಹಾಗೆಯೇ ಪ್ರಸ್ತುತ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ದುಬೆಯನ್ನು 2025 ರ ಮೆಗಾ ಹರಾಜಿಗೂ ಮೊದಲು 12 ಕೋಟಿ ರೂ. ಗೆ ತಂಡದಲ್ಲೇ ಉಳಿಸಿಕೊಳ್ಳಲಾಗಿದೆ.

IND vs AUS: ಶಿವಂ ದುಬೆ ತೋಳ್ಬಲಕ್ಕೆ ಕ್ರೀಡಾಂಗಣದಿಂದ ಕಣ್ಮರೆಯಾದ ಚೆಂಡು; ವಿಡಿಯೋ

ಟಿ20 ವಿಶ್ವಕಪ್‌ನಲ್ಲಿ ದುಬೆ ಪ್ರದರ್ಶನ

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ 25 ಎಸೆತಗಳಲ್ಲಿ 43 ರನ್ ಮತ್ತು ಫೈನಲ್‌ನಲ್ಲಿ ಕೇವಲ 8 ಎಸೆತಗಳಲ್ಲಿ 26 ರನ್ ಗಳಿಸುವ ಮೂಲಕ, ಶಿವಂ ದುಬೆ ಟೀಂ ಇಂಡಿಯಾದ ಸತತ ಎರಡನೇ ಪ್ರಶಸ್ತಿಗೆ ಮಹತ್ವದ ಕೊಡುಗೆ ನೀಡಿದರು.ಶಿವಂ ದುಬೆ 2019 ರಲ್ಲಿ ಪಾದಾರ್ಪಣೆ ಮಾಡಿದರೂ, ಕಳೆದ ಮೂರು ವರ್ಷಗಳಿಂದ ಟೀಂ ಇಂಡಿಯಾ ಪರ ಟಿ20 ಸ್ವರೂಪದಲ್ಲಿ ಖಾಯಂ ಆಗಿ ಆಡುತ್ತಿದ್ದಾರೆ. ಈ ಸಮಯದಲ್ಲಿ, ಅವರು ಐಪಿಎಲ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ