Indian Cricket Team
ಭಾರತದಲ್ಲಿ ಕ್ರಿಕೆಟ್ ಒಂದು ಅತ್ಯಂತ ಜನಪ್ರಿಯ ಕ್ರೀಡೆ. ಹೀಗಾಗಿಯೇ ಭಾರತವನ್ನು ಕ್ರಿಕೆಟ್ ಧರ್ಮ ರಾಷ್ಟ್ರ ಎಂದು ಕರೆಯಲಾಗುತ್ತದೆ. ಭಾರತ ಕ್ರಿಕೆಟ್ ಅನ್ನು ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ ವಿವಿಎಸ್ ಲಕ್ಷ್ಮಣ್ರಂತಹ ದಿಗ್ಗಜರಿಂದ ಹಿಡಿದು, ಪ್ರಸ್ತುತ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ ಸ್ಟಾರ್ ಕ್ರಿಕೆಟಿಗರು ಅಕ್ಷರಶಃ ಆಳಿದ್ದಾರೆ. ಇದುವರೆಗೆ ಟೀಂ ಇಂಡಿಯಾ ಮೂರು ವಿಶ್ವಕಪ್ಗಳನ್ನು ಗೆದ್ದಿದ್ದು, ಕಪಿಲ್ ದೇವ್ ನಾಯಕತ್ವದಲ್ಲಿ 1983 ರಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಆ ಬಳಿಕ 2007 ರಲ್ಲಿ ಎಂ ಎಸ್ ಧೋನಿ ನಾಯಕತ್ವದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ, ಅವರ ನಾಯಕತ್ವದಲ್ಲೇ 2011 ರಲ್ಲಿ ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ಗೆ ಮುತ್ತಿಟ್ಟಿತ್ತು. ಪ್ರಸ್ತುತ ಟೀಂ ಇಂಡಿಯಾ ವಿಶ್ವದ ಬಲಿಷ್ಠ ತಂಡಗಳ ಪೈಕಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.