AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Varun Chakravarthy: ‘ಮಲ್ಲು’ ಇದ್ದರೆ ಕಪ್ ನಮ್ಮದೇ..!

T20 World Cup 2026: ಈ ಬಾರಿಯ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಬರೋಬ್ಬರಿ 255 ರನ್ ಕಲೆಹಾಕಿತ್ತು. ಈ ಕಠಿಣ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 159 ರನ್​ಗಳಿಸಿ ಆಲೌಟ್ ಆಗಿದ್ದರು. ಈ ಮೂಲಕ ಭಾರತ ತಂಡವು 96 ರನ್​ಗಳ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.

Varun Chakravarthy: 'ಮಲ್ಲು' ಇದ್ದರೆ ಕಪ್ ನಮ್ಮದೇ..!
Varun Chakravarthy
ಝಾಹಿರ್ ಯೂಸುಫ್
|

Updated on: Mar 16, 2026 | 9:19 AM

Share

ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಜಯಭೇರಿ ಬಾರಿಸಿದೆ. ಈ ಜಯಭೇರಿಯೊಂದಿಗೆ ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿ ಹಿಡಿದಿದೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ತಂಡ ಎನಿಸಿಕೊಂಡಿದೆ. ಈ ವಿಶೇಷ ಸಾಧನೆ ಮಾಡಿದ ಚಾಂಪಿಯನ್ ತಂಡವನ್ನು ಭಾನುವಾರ (ಮಾ.15) ದೆಹಲಿಯಲ್ಲಿ ನಡೆದ ಬಿಸಿಸಿಐ ನಮನ್ ಅವಾರ್ಡ್ಸ್​ನಲ್ಲಿ ಗೌರವಿಸಲಾಗಿದೆ. ಈ ವೇಳೆ ಮಾತನಾಡಿದ ವರುಣ್ ಚಕ್ರವರ್ತಿ, ‘ಮಲ್ಲು’ ಪ್ರಸಂಗವನ್ನು ತೆರೆದಿಟ್ಟಿದ್ದಾರೆ.

ಚಾಂಪಿಯನ್ ಪಟ್ಟ ಅಲಂಕರಿಸಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವರುಣ್ ಚಕ್ರವರ್ತಿ, ಭಾರತ ತಂಡದಲ್ಲಿ ಮಲ್ಲು ಕ್ರಿಕೆಟಿಗನೊಬ್ಬನಿದ್ದರೆ ವಿಶ್ವಕಪ್ ಗೆಲ್ಲುತ್ತೆ ಎಂಬ ಮೀಮ್ ಒಂದೊಂದಿದೆ. ಈ ಬಾರಿ ನಮ್ಮೊಂದಿಗೆ ಸಂಜು ಸ್ಯಾಮ್ಸನ್ ಇದ್ದರು. ಅದರಂತೆ ಈ ಸಲನೂ ನಾವು ಕಪ್ ಗೆದ್ದಿದ್ದೇವೆ ಎಂದು ತಮಾಷೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಭಾರತ ತಂಡಕ್ಕೆ  ಸಂಜು ಸ್ಯಾಮ್ಸನ್ ಅವರನ್ನು ಸೇರಿಸಿಕೊಂಡಿದ್ದೇ ತಂಡದ “ಮಾಸ್ಟರ್‌ಸ್ಟ್ರೋಕ್”. ಸ್ಯಾಮ್ಸನ್ ಅವರ ಉಪಸ್ಥಿತಿಯೇ ತಂಡಕ್ಕೆ ಅದೃಷ್ಟ ತಂದಿತು ಎಂಬುದನ್ನು ವರುಣ್ ಚಕ್ರವರ್ತಿ ಹೇಳಿದ್ದಾರೆ.

ಇನ್ನು ವರುಣ್ ಚಕ್ರವರ್ತಿ ಅವರ ಈ ಹೇಳಿಕೆ ನಿಜವೇ ಎಂದು ಪರಿಶೀಲಿಸಿದರೆ, ಭಾರತ ತಂಡ ವಿಶ್ವಕಪ್ ಗೆದ್ದಾಗೆಲ್ಲಾ ಮಲ್ಲು ಅಥವಾ ಮಲಯಾಳಿ ಆಟಗಾರನೊಬ್ಬ ತಂಡದಲ್ಲಿದದ್ದು ನಿಜ.

2007ರ ಟಿ20 ವಿಶ್ವಕಪ್ ಗೆದ್ದಾಗ ಕೇರಳದ ಶ್ರೀಶಾಂತ್ ಭಾರತ ತಂಡದಲ್ಲಿದ್ದರು. ಇನ್ನು 2011 ರಲ್ಲಿ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದಾಗಲೂ ಶ್ರೀಶಾಂತ್ ಚಾಂಪಿಯನ್ ತಂಡದಲ್ಲಿದ್ದರು.

ಇನ್ನು 2024 ರಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಜಯಸಿದಾಗ ಮಲಯಾಳಿಯಾಗಿ ಸಂಜು ಸ್ಯಾಮ್ಸನ್ ತಂಡದಲ್ಲಿದ್ದರು. ಇದೀಗ 2026 ರಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿದಾಗಲೂ ಸಂಜು ತಂಡದಲ್ಲಿದ್ದಾರೆ.

1983 ರಲ್ಲಿ ಭಾರತ ತಂಡದಲ್ಲಿ ಮಲಯಾಳಿ ಇದ್ದರಾ?

1983 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತಂಡ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಾಗಲೂ ಮಲಯಾಳಿ ಆಟಗಾರೊಬ್ಬರು ತಂಡದಲ್ಲಿದ್ದರು ಎಂಬುದು ವಿಶೇಷ.  ಹೌದು, 1983ರ ವಿಶ್ವಕಪ್ ಗೆದ್ದ ಭಾರತ ತಂಡದಲ್ಲೂ ಒಬ್ಬ “ಮಲ್ಲು” ಆಟಗಾರ ಇದ್ದರು. ಅವರ ಹೆಸರು ಸುನಿಲ್ ವಲ್ಸನ್.

ಇದನ್ನೂ ಓದಿ: IPL 2026: ಈ ಬಾರಿಯ ಐಪಿಎಲ್​ನಲ್ಲಿ RCBಗೆ ‘ಗೋಲ್ಡನ್’ ಗೌರವ!

ಸುನಿಲ್ ವಲ್ಸನ್ ಅವರು ಹುಟ್ಟಿದ್ದು ಸಿಕಂದರಾಬಾದ್‌ನಲ್ಲಾದರೂ, ಅವರ ಪೋಷಕರು ಕೇರಳದ ಕಣ್ಣೂರು ಮೂಲದವರು. 1983ರ ವಿಶ್ವಕಪ್ ತಂಡದಲ್ಲಿದ್ದ 14 ಆಟಗಾರರಲ್ಲಿ ಸುನಿಲ್ ಅವರು ಮಾತ್ರ ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯವನ್ನು ಆಡಲಿಲ್ಲ. ಆದರೂ ಅವರು ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಹಾಗಾಗಿ, ಭಾರತ ತಂಡದಲ್ಲಿ “ಮಲಯಾಳಿ ಇದ್ದರೆ ಅದನ್ನು ಅದೃಷ್ಟದ ಸಂಕೇತ” ಎಂದು ಮೀಮ್‌ಗಳಲ್ಲಿ ಕರೆಯಲಾಗುತ್ತದೆ.

  • 1983: ಸುನಿಲ್ ವಲ್ಸನ್
  • 2007 & 2011: ಎಸ್. ಶ್ರೀಶಾಂತ್
  • 2024 & 2026: ಸಂಜು ಸ್ಯಾಮ್ಸನ್
Follow Us