AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ

Shubman Gill injury update: ಅಭ್ಯಾಸದ ವೇಳೆ ಬಲಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ಶುಭಮನ್ ಗಿಲ್, ಭಾರತ-ಶ್ರೀಲಂಕಾ XI ನಡುವಿನ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದು ಬ್ಯಾಟಿಂಗ್ ಮಾಡುವ ಮೂಲಕ ತಂಡದ ಆತಂಕ ದೂರ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಗಿಲ್ ಉತ್ತಮ ಜೊತೆಯಾಟ ನೀಡಿದ್ದು, ಟೀಂ ಇಂಡಿಯಾಗೆ ಸಮಾಧಾನ ತಂದಿದೆ. ಗಾಯದ ಸಂಕಷ್ಟದಲ್ಲಿರುವ ಭಾರತ ತಂಡಕ್ಕೆ ಗಿಲ್ ಉಪಸ್ಥಿತಿ ಅತ್ಯವಶ್ಯಕವಾಗಿತ್ತು.

ಪೃಥ್ವಿಶಂಕರ
|

Updated on: Aug 09, 2026 | 3:54 PM

Share
ಭಾರತ ಮತ್ತು ಶ್ರೀಲಂಕಾ XI ನಡುವಿನ 3 ದಿನಗಳ ಅಭ್ಯಾಸ ಪಂದ್ಯದ ಮೂರನೇ ದಿನದಂದು ಶ್ರೀಲಂಕಾ ನೀಡಿರುವ 207 ರನ್​ಗಳ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾ ಪರ ನಾಯಕ ಶುಭ್​ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಕರಾಗಿ ಕಣಕ್ಕಿಳಿದಿದ್ದಾರೆ. ಗಿಲ್ ಬ್ಯಾಟಿಂಗ್​ಗೆ ಇಳಿಯುವ ಮೂಲಕ ತಂಡದಲ್ಲಿ ಮೂಡಿದ್ದ ಆತಂಕವನ್ನು ಶಮನ ಮಾಡಿದ್ದಾರೆ(PC-PTI).

1 / 5
ವಾಸ್ತವವಾಗಿ ಉಭಯ ತಂಡಗಳ ನಡುವಿನ ಅಭ್ಯಾಸ ಪಂದ್ಯ ಆರಂಭಕ್ಕೆ ಒಂದು ದಿನ ಮೊದಲು ಅಭ್ಯಾಸದ ಅವಧಿಯಲ್ಲಿ ಶುಭ್​ಮನ್ ಗಿಲ್ ತಮ್ಮ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದಾಗಿ ಈ ಅಭ್ಯಾಸ ಪಂದ್ಯದ ಮೊದಲೆರಡು ದಿನ ಗಿಲ್ ಕಣಕ್ಕಿಳಿದಿರಲಿಲ್ಲ. ಗಿಲ್ ಬದಲಿಗೆ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದರು. ಆದರೆ ಎರಡನೇ ಇನ್ನಿಂಗ್ಸ್ ಗಿಲ್ ಬ್ಯಾಟಿಂಗ್ ಮಾಡಿದ್ದು ತಂಡಕ್ಕೆ ಸಮಾಧಾನ ತಂದಿದೆ(PC-PTI).

2 / 5
ಗಿಲ್ ಗಾಯದ ಬಗ್ಗೆ ಹೇಳಿಕೆ ನೀಡಿದ್ದ ಬಿಸಿಸಿಐ, ‘ಗುರುವಾರ ಭಾರತದ ಅಭ್ಯಾಸದ ಸಮಯದಲ್ಲಿ ನಾಯಕ ಶುಭಮನ್ ಗಿಲ್ ಅವರ ಬಲಗೈ ಉಂಗುರದ ಬೆರಳಿಗೆ ಗಾಯವಾಗಿದೆ. ಮುನ್ನೆಚ್ಚರಿಕೆಯಾಗಿ, ಶ್ರೀಲಂಕಾ XI ವಿರುದ್ಧದ ಅಭ್ಯಾಸ ಪಂದ್ಯದ ಮೊದಲ ದಿನದಂದು ಅವರು ಮೈದಾನಕ್ಕೆ ಇಳಿಯುವುದಿಲ್ಲ. ಗಿಲ್ ಅನುಪಸ್ಥಿತಿಯಲ್ಲಿ, ಉಪನಾಯಕ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ’ ಎಂದಿತ್ತು(PC-PTI).

3 / 5
ಗಿಲ್ ಗಾಯದಿಂದ ಚೇತರಿಸಿಕೊಂಡಿರುವುದು ತಂಡದ ಸಂಕಷ್ಟವನ್ನು ಕೊಂಚ ಕಡಿಮೆ ಮಾಡಿದೆ. ಏಕೆಂದರೆ ತಂಡದಲ್ಲಿ ಈಗಾಗಲೇ ಗಾಯಾಳುಗಳ ಸಂಖ್ಯೆ ಹೆಚ್ಚಿದೆ. ಗಾಯದಿಂದಾಗಿ ಜಸ್ಪ್ರೀತ್ ಬುಮ್ರಾ ಹಾಗೂ ಸಾಯಿ ಸುದರ್ಶನ್ ಸರಣಿಯಿಂದ ಹೊರಗುಳಿದಿದ್ದಾರೆ. ವಾಷಿಂಗ್ಟನ್ ಸುಂದರ್ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಗಿಲ್ ಉಪಸ್ಥಿತಿ ತಂಡಕ್ಕೆ ಅತ್ಯವಶ್ಯಕವಾಗಿತ್ತು(PC-PTI).

4 / 5
ಪಂದ್ಯದ ಬಗ್ಗೆ ಹೇಳುವುದಾದರೆ.. ಎರಡನೇ ಇನ್ನಿಂಗ್ಸ್​ನಲ್ಲಿ ಶ್ರೀಲಂಕಾ ತಂಡ 200 ರನ್​ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಭಾರತದ ಗೆಲುವಿಗೆ 207 ರನ್​ಗಳ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿರುವ ಜೈಸ್ವಾಲ್ ಹಾಗೂ ಗಿಲ್ ಈ ಸುದ್ದಿ ಬರೆಯುವ ಹೊತ್ತಿಗೆ 100 ರನ್​ಗಳ ಜೊತೆಯಾಟವನ್ನಾಡಿದ್ದಾರೆ(PC-PTI).

5 / 5
Follow Us
GBDA ಯೋಜನೆ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂದೇಶ

‘ನನ್ನ ಕನಸನ್ನು ಹೆಗಲ ಮೇಲೆ ಹೊತ್ತುಕೊಂಡ ಯಶ್: ಗೀತು ಮೋಹನ್​​ದಾಸ್ ಭಾವುಕ

ಟೆಕ್ಕಿ ಅದ್ವೈತ್ ಶಿವಗಂಗೆ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!

ಆಗಸ್ಟ್ 10 ರಿಂದ 16 ರವರೆಗಿನ ದ್ವಾದಶ ರಾಶಿಗಳ ಸಂಪೂರ್ಣ ವಾರಭವಿಷ್ಯ ಇಲ್ಲಿದೆ

ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್​​ಡಿಕೆ

ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ

ದೆಹಲಿಯಲ್ಲಿ ಭಾರೀ ಮಳೆ; ಪಾರ್ಕಿಂಗ್ ಗೋಡೆ ಕುಸಿದು 8 ಕಾರುಗಳು ಪೂರ್ತಿ ಜಖಂ

ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ

ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಅಮಿತ್ ಶಾ ಭೇಟಿ

ಮೂರೇ ವಾರಕ್ಕೆ ಕುಸಿದ 4,700 ಕೋಟಿ ವೆಚ್ಚದ ಲಕ್ನೋ-ಕಾನ್ಪುರ ಹೆದ್ದಾರಿ