AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಪಂದ್ಯದಲ್ಲಿ 7 ದಾಖಲೆಗಳನ್ನು ನಿರ್ಮಿಸಿದ ಅಭಿಷೇಕ್ ಶರ್ಮಾ..!

ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ 34 ಎಸೆತಗಳಲ್ಲಿ 108 ರನ್ ಗಳಿಸಿ ಮಿಂಚಿದರು. ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಭಾರತದ ಅತಿ ವೇಗದ ಟಿ20 ಅಂತರಾಷ್ಟ್ರೀಯ ಶತಕದ ದಾಖಲೆ ಬರೆದರು. 'ಪಂದ್ಯಶ್ರೇಷ್ಠ' ಮತ್ತು 'ಸರಣಿಶ್ರೇಷ್ಠ' ಪ್ರಶಸ್ತಿ ಪಡೆದ ಅಭಿಷೇಕ್, ಪವರ್‌ಪ್ಲೇ, ಅತಿ ವೇಗದ ಅರ್ಧಶತಕ, ಹೆಚ್ಚು ಸಿಕ್ಸರ್‌ಗಳು ಸೇರಿದಂತೆ 7 ಪ್ರಮುಖ ದಾಖಲೆಗಳನ್ನು ನಿರ್ಮಿಸಿ ಹೊಸ ಇತಿಹಾಸ ಸೃಷ್ಟಿಸಿದರು.

ಪೃಥ್ವಿಶಂಕರ
|

Updated on:Sep 18, 2026 | 3:29 PM

Share
ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅಭಿಷೇಕ್ ಶರ್ಮಾ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಕೇವಲ 34 ಎಸೆತಗಳನ್ನು ಎದುರಿಸಿದ ಅಭಿಷೇಕ್ 11 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳ ಸಹಿತ 108 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್​ಗಾಗಿ ಅಭಿಷೇಕ್​ಗೆ ‘ಪಂದ್ಯಶ್ರೇಷ್ಠ' ಮತ್ತು ‘ಸರಣಿಶ್ರೇಷ್ಠ' ಪ್ರಶಸ್ತಿಯೂ ಲಭಿಸಿತು. ಹಾಗೆಯೇ ಅಭಿಷೇಕ್ ಬರೋಬ್ಬರಿ 7 ದಾಖಲೆಗಳನ್ನು ನಿರ್ಮಿಸಿದರು(PC-PTI).

1 / 8
ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಮೂಲಕ ಭಾರತದ ಪರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆ ಅಭಿಷೇಕ್ ಪಾಲಾಗಿದೆ. ಇದಕ್ಕೂ ಮೊದಲು ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. 2017 ರಲ್ಲಿ ಇಂದೋರ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು(PC-PTI).

2 / 8
ಇದರ ಜೊತೆಗೆ ಐಸಿಸಿಯ ಪೂರ್ಣಾವಧಿ ಸದಸ್ಯತ್ವ ಹೊಂದಿರುವ ತಂಡಗಳ ಪಟ್ಟಿಯಲ್ಲಿ ಅತಿ ವೇಗದ ಟಿ20 ಶತಕ ಬಾರಿಸಿದ ದಾಖಲೆಯೂ ಅಭಿಷೇಕ್ ಪಾಲಾಗಿದೆ. ಇದಕ್ಕೂ ಮೊದಲು, ಈ ದಾಖಲೆಯನ್ನು ಸಿಕಂದರ್ ರಜಾ ಮತ್ತು ಫಿನ್ ಅಲೆನ್ ಜಂಟಿಯಾಗಿ ಹೊಂದಿದ್ದರು. ಇವರಿಬ್ಬರು ತಲಾ 33 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಹಾಗೆಯೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಮೂರನೇ ಅತಿ ವೇಗದ ಶತಕವೂ ಇದಾಗಿದೆ(PC-PTI).

3 / 8
ಈ ಪಂದ್ಯದಲ್ಲಿ ಮೊದಲ ಆರು ಓವರ್‌ಗಳಲ್ಲಿ ಅಂದರೆ ಪವರ್‌ಪ್ಲೇನಲ್ಲಿ ಅಭಿಷೇಕ್ ಅದ್ಭುತ ಬ್ಯಾಟಿಂಗ್ ಮಾಡಿದರು. ಪವರ್‌ಪ್ಲೇನಲ್ಲಿ ಕೇವಲ 22 ಎಸೆತಗಳಲ್ಲಿ 76 ರನ್ ಬಾರಿಸಿದರು. ಈ ಮೂಲಕ ಪುರುಷರ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಪವರ್‌ಪ್ಲೇ ಸಮಯದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಇದಕ್ಕೂ ಮೊದಲು, ಈ ದಾಖಲೆ ಪೋರ್ಚುಗಲ್‌ನ ಕುಲ್ದೀಪ್ ಘೋಲಿಯಾ ಅವರ ಹೆಸರಿನಲ್ಲಿತ್ತು. 2023 ರಲ್ಲಿ ಮಾಲ್ಟಾ ವಿರುದ್ಧದ ಪವರ್‌ಪ್ಲೇನಲ್ಲಿ ಅವರು 25 ಎಸೆತಗಳಲ್ಲಿ 74 ರನ್ ಸಿಡಿಸಿದ್ದರು(PC-PTI).

4 / 8
ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್, 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಅಭಿಷೇಕ್ 6ನೇ ಬಾರಿಗೆ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ(PC-PTI).

5 / 8
ಇದು ಟಿ20 ಕ್ರಿಕೆಟ್‌ನಲ್ಲಿ  ಅಭಿಷೇಕ್ ಶರ್ಮಾ ಅವರ 10 ನೇ ಶತಕವಾಗಿದ್ದು, ಈ ಮೂಲಕ ವಿರಾಟ್ ಕೊಹ್ಲಿ ಅವರ 10 ಟಿ20 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಭಿಷೇಕ್ ಈಗ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್ ಆಗುವ ಅವಕಾಶವನ್ನು ಹೊಂದಿದ್ದಾರೆ. ಹಾಗೆ ಮಾಡಲು ಅವರಿಗೆ ಇನ್ನೂ ಒಂದು ಶತಕದ ಅಗತ್ಯವಿದೆ(PC-PTI).

6 / 8
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಅಭಿಷೇಕ್ ಶರ್ಮಾ ಒಟ್ಟು 22 ಸಿಕ್ಸರ್‌ಗಳನ್ನು ಬಾರಿಸಿದರು. ಈ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಒಬ್ಬರು ಬಾರಿಸಿದ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಅಭಿಷೇಕ್ ಸರಿಗಟ್ಟಿದ್ದಾರೆ. ಈ ಮೊದಲು ಅಂದರೆ 2025 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಭಿಷೇಕ್ ಅವರೇ 22 ಸಿಕ್ಸರ್‌ಗಳನ್ನು ಬಾರಿಸಿದ್ದರು(PC-PTI).

7 / 8
ಅಭಿಷೇಕ್ ಶರ್ಮಾ ತಮ್ಮ ಶತಕದ ಶೇಕಡಾ 94.44 ರಷ್ಟು ರನ್‌ಗಳನ್ನು ಬೌಂಡರಿಗಳ ಮೂಲಕವೇ ಕಲೆಹಾಕಿದರು. ಇದರೊಂದಿಗೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಬೌಂಡರಿಗಳ ಮೂಲಕ ಗಳಿಸಿದ ಅತಿ ಹೆಚ್ಚು ರನ್ ಇದಾಗಿದೆ. ಈ ವಿಷಯದಲ್ಲಿ ಅಭಿಷೇಕ್ ಟರ್ಕಿಯ ಮೊಹಮ್ಮದ್ ಫಹಾದ್ ಅವರನ್ನು ಹಿಂದಿಕ್ಕಿದ್ದಾರೆ(PC-PTI).

8 / 8

Published On - 3:27 pm, Fri, 18 September 26

Follow Us
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು

ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ

ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ

ಟಿ ನರಸೀಪುರದಲ್ಲಿ ಬಿಗಿ ಭದ್ರತೆ: 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ

ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು

ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್

ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು

ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ