AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಗೆ ಹೊರಡಲು ರೆಡಿಯಾದ ಅವಿನಾಶ್ ಅನ್ನು ತಡೆದಿದ್ದು ಯಾರು?

ಬಿಗ್​ಬಾಸ್ ಮನೆಯಲ್ಲಿ ಎರಡನೇ ವಾರ ಜಗಳಗಳು ಬಲು ಜೋರಾಗಿ ನಡೆಯುತ್ತಿದೆ. ಅದರಲ್ಲೂ ಸಾಮಾನ್ಯರು, ಬಿಗ್​​ಬಾಸ್ ನಿಯಮ ಮುರಿಯುತ್ತಾ, ಉದ್ದೇಶಪೂರ್ವಕವಾಗಿ ಕಿರಿಕಿರಿ ಮಾಡುತ್ತಾ ಪದೇ ಪದೇ ಜಗಳಕ್ಕೆ ಕಾರಣ ಆಗುತ್ತಿದ್ದಾರೆ. ಅದರಲ್ಲೂ ಮಂಜನ ವರ್ತನೆಯಂತೂ ರೌಡಿಗಳನ್ನು ನೆನಪಿಸುತ್ತಿದೆ. ಅವಿನಾಶ್, ಮಂಜನ ಜೊತೆ ಜಗಳ ಮಾಡಿಕೊಂಡು ಮನೆಯಿಂದ ಹೊರಗೆ ಹೋಗಲು ಸಜ್ಜಾಗಿದ್ದರು.

ಮನೆಗೆ ಹೊರಡಲು ರೆಡಿಯಾದ ಅವಿನಾಶ್ ಅನ್ನು ತಡೆದಿದ್ದು ಯಾರು?
Bigg Boss Kannada Avinash
ಮಂಜುನಾಥ ಸಿ.
|

Updated on: Sep 18, 2026 | 10:54 PM

Share

ಬಿಗ್​​ಬಾಸ್ ಶೋನಲ್ಲಿ ಎರಡನೇ ವಾರ ಸಾಕಷ್ಟು ಡ್ರಾಮಾ ನಡೆದಿದೆ. ವಾರದ ಅಂತ್ಯಕ್ಕೆ ಬರುವ ಮುನ್ನವೇ ಮನೆಯಲ್ಲಿ ಸಾಕಷ್ಟು ಜಗಳ, ಬೈಗುಳ, ಕಿತ್ತಾಟ, ಪರಸ್ಪರ ನಿಂದನೆ, ದೂರು-ಪ್ರತಿದೂರು, ಕಣ್ಣೀರು ಎಲ್ಲವೂ ನಡೆದಿದೆ. ಅದರಲ್ಲೂ ಸಾಮಾನ್ಯರ ಖೋಟಾದಿಂದ ಒಳಗೆ ಹೋಗಿರುವವರು ಮನೆಯ ಇತರ ಸದಸ್ಯರ ನೆಮ್ಮದಿ ಹಾಳುಮಾಡಿದ್ದಾರೆ. ವಿಶೇಷವಾಗಿ ಮಂಜ ಮತ್ತು ಶಾಸ್ತ್ರಿ ಬಿಗ್​​ಬಾಸ್ ನಿಯಮಗಳನ್ನು ಗಾಳಿಗೆ ತೂರುತ್ತಾ, ವಿತಂಡ ವಾದ ಮಾಡುತ್ತಾ, ನಿಂದನೆ, ಟೀಕೆಗಳನ್ನು ಮಾಡುತ್ತಾ ಇತರ ಸ್ಪರ್ಧಿಗಳಿಗೆ ಕಿರಿ-ಕಿರಿ ಉಂಟು ಮಾಡುತ್ತಿದ್ದಾರೆ.

ಗುರುವಾರದ ಎಪಿಸೋಡ್​ನಲ್ಲಿ ಕಿಚನ್ ವಿಷಯದಲ್ಲಿ ಮಹಾಕವಿ ಮಂಜ ಮತ್ತು ಅವಿನಾಶ್ ಅವರ ನಡುವೆ ಜಗಳ ಆಗಿತ್ತು. ಬೇರೆಯವರಿಗೆ ಸೇರಿದ ಕೆಲ ವಸ್ತುಗಳನ್ನು ಮಂಜ, ಲಿಖಿತ್ ಇನ್ನೂ ಕೆಲವರು ತಿಂದಿದ್ದರು. ಇದು ಜಗಳಕ್ಕೆ ಕಾರಣವಾಯ್ತು. ಈ ವೇಳೆ ಮಂಜ ಮತ್ತು ಅವಿನಾಶ್ ನಡುವೆ ಜಗಳ ದೊಡ್ಡದಾಗಿಯೇ ನಡೆಯಿತು. ಯಾವ ಮಟ್ಟಿಗೆಂದರೆ ಅವಿನಾಶ್ ಅವರು ತಾಳ್ಮೆ ಕಳೆದುಕೊಂಡು ಮಂಜನಿಗೆ ಹೊಡೆಯುವುದಾಗಿ ನೇರವಾಗಿ ಹೇಳಿದರು. ಮಂಜನೂ ಸಹ ಅದಕ್ಕೆ ರೌಡಿ ರೀತಿಯ ಪ್ರತಿಕ್ರಿಯೆಯನ್ನೇ ನೀಡಿದ.

ಬಳಿಕ ಅವಿನಾಶ್ ಅವರು ತಾಳ್ಮೆ ಕಳೆದುಕೊಂಡು ಬಾಟೆಲ್ ಒಡೆದು ಹಾಕಿದರು. ಬಳಿಕ ಇಂಥಹವರ ಜೊತೆ ನಾನಿರುವುದಿಲ್ಲ ಎಂದು ಹೇಳಿ ಸೂಟ್​​ಕೇಸ್ ಪ್ಯಾಕ್ ಮಾಡಿ ಹೊರಡಲು ರೆಡಿಯಾದರು. ಸೀಕ್ರೆಟ್ ರೂಂಗೆ ಹೋಗಿ, ತಮ್ಮನ್ನು ಹೊರಗೆ ಕಳಿಸುವಂತೆ ಬಿಗ್​ಬಾಸ್ ಬಳಿ ಕೇಳಿ ಕೊಂಡರು. ‘ನೀವು ನನ್ನನ್ನು ವಾಪಸ್ ಮನೆಯ ಒಳಗೆ ಕಳಿಸಿದರೆ ನಾನು ಖಂಡಿತ ಮಂಜನನ್ನು ಹೊಡೆದು ಹೊರಗೆ ಹೋಗುತ್ತೇನೆ’ ಎಂದರು. ಬಹಳ ಬೇಸರದಲ್ಲಿದ್ದ ಅವಿನಾಶ್, ‘ಇವರಂಥ ಹೀನಾಯ ಮನಸ್ಸಿನ ವ್ಯಕ್ತಿಗಳ ಜೊತೆಗೆ ನನಗೆ ಇರಲು ಆಗುವುದಿಲ್ಲ. ನನ್ನೊಬ್ಬನೊಟ್ಟಿಗೆ ಹೀಗೆ ಆದರೆ ನಾನು ತಡೆದುಕೊಳ್ಳುತ್ತೇನೆ, ಆದರೆ ಬೇರೆವರಿಗೆ ಹೀಗಳೆದರೆ ನನ್ನಿಂದ ತಡೆಯಲು ಆಗುವುದಿಲ್ಲ. ಅವರು ಮನುಷ್ಯರೇ ಅಲ್ಲ’ ಎಂದು ಕಣ್ಣೀರು ಹಾಕಿದರು.

ಇದನ್ನೂ ಓದಿ:ಮಂಜ vs ಸೌಂದರ್ಯ: ಕೈ-ಕೈ ಮಿಲಾಯಿಸಿದರು ಬಿಟ್ಟಿದ್ದೇಕೆ ಬಿಗ್​​ಬಾಸ್

ಅವಿನಾಶ್ ಅವರು ಬಹಳ ಸಮಯ ಸೀಕ್ರೆಟ್ ರೂಂನಲ್ಲಿಯೇ ಇದ್ದರು. ಬಳಿಕ ಮಾತನಾಡಿದ ಬಿಗ್​​ಬಾಸ್, ‘ಇಲ್ಲಿಗೆ ಬರಲು ಸಾಕಷ್ಟು ನಿಯಮಗಳು ಇರುತ್ತವೆ. ಅರ್ಧಕ್ಕೆ ನಿಲ್ಲಿಸಿ ಹೋದರೆ ಸಹ ಅದಕ್ಕೆ ಕೆಲವು ಪರಿಣಾಮಗಳು ಇರುತ್ತವೆ. ಆ ಬಗ್ಗೆ ನಾವು ನಿಮ್ಮ ಪತ್ನಿಯೊಟ್ಟಿಗೆ ಮಾತನಾಡಿದ್ದೇವೆ. ಅವರು ಈಗ ನಿಮ್ಮೊಂದಿಗೆ ಮಾತನಾಡುತ್ತಾರೆ ಎಂದರು. ಬಳಿಕ ಅವಿನಾಶ್ ಪತ್ನಿ ಅವರು ಫೋನಿನ ಮೂಲಕ ಮಾತನಾಡಿದರು. ‘ನೀವು ಬಿಟ್ಟುಕೊಡಬೇಡಿ, ಬಿಟ್ಟುಕೊಡುವ ವ್ಯಕ್ತಿತ್ವ ನಿಮ್ಮದಲ್ಲ. ಅದೆಲ್ಲ ಆಗುತ್ತಲೇ ಇರುತ್ತದೆ. ‘ಜೈ ಶ್ರೀರಾಮ್’, ಶ್ರೀರಾಮನನ್ನು ನೆನಪು ಮಾಡಿಕೊಳ್ಳಿ, ಧೈರ್ಯ ತೆಗೆದುಕೊಂಡು ಮುಂದೆ ಹೋಗಿ’ ಎಂದು ಸ್ಪೂರ್ತಿ ತುಂಬಿದರು.

ಪತ್ನಿಯೊಟ್ಟಿಗೆ ಮಾತನಾಡಿದ ಕೂಡಲೇ ಅವಿನಾಶ್ ಅವರು ಮತ್ತೆ ಸ್ಟೆಡಿ ಆದರು. ಶಕ್ತಿ ಮೀರಿ ಆಟ ಆಡ್ತೀನಿ, ಮತ್ತೊಂದು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದರು. ಬಳಿಕ ಹೊರಗೆ ಬಂದ ಮೇಲೆ ಸಹ ಮಂಜನೊಟ್ಟಿಗೆ ಹೆಚ್ಚು ಮಾತನಾಡಲು ಸಹ ಹೋಗಲಿಲ್ಲ. ಮಂಜ ಅವಿನಾಶ್ ಅನ್ನು ರೇಗಿಸಿದರೂ ಸಹ ನಗುತ್ತಲೇ ಸುಮ್ಮನಿದ್ದರು. ಆ ಮೂಲಕ ಮಂಜನನ್ನು ಭಿನ್ನವಾಗಿ ಎದುರಿಸಲು ರೆಡಿಯಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ