ಅಭಿಮಾನಿಯ ಕಾಲಿನ ಮೇಲೆ ಹತ್ತಿದ ಸಲ್ಮಾನ್ ಖಾನ್ ಕಾರು; ಚಾಲಕನ ಮೇಲೆ ಗರಂ
ಈ ಘಟನೆ ನಡೆದಾಗ ಸಲ್ಮಾನ್ ಖಾನ್ ಅವರು ಗರಂ ಆದರು. ಚಾಲಕನಿಗೆ ಅವರು ಗದರಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಸಲ್ಮಾನ್ ಖಾನ್ ಅವರ ನಡವಳಿಕೆಯನ್ನು ಕಂಡು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸಲ್ಮಾನ್ ಖಾನ್ ಕೋಪಿಷ್ಟ ಹಾಗೂ ಅಹಂಕಾರಿ’ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮುಂಬೈನಲ್ಲಿ ಗಣೇಶೋತ್ಸವದ ಅಂಗವಾಗಿ ರಾಜಕಾರಣಿ ಆಶಿಶ್ ಶೆಲಾರ್ ಅವರ ನಿವಾಸಕ್ಕೆ ಗಣಪತಿ ದರ್ಶನಕ್ಕಾಗಿ ತೆರಳಿದ್ದ ವೇಳೆ, ಅಭಿಮಾನಿಗಳ ನೂಕುನುಗ್ಗಲು ಉಂಟಾಗಿ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರ ಕಾಲಿನ ಮೇಲೆ ಕಾರು ಹರಿದಿದ್ದಕ್ಕೆ ಕೋಪಗೊಂಡ ಸಲ್ಮಾನ್ ಖಾನ್ ಅವರು ತಮ್ಮ ಚಾಲಕನಿಗೆ ಗದರಿ ಪೆಟ್ಟು ನೀಡಿರುವ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಣೇಶೋತ್ಸವದ ಕಾರ್ಯಕ್ರಮ ಮುಗಿಸಿ ಸಲ್ಮಾನ್ ಖಾನ್ ಹೊರಬರುತ್ತಿದ್ದಂತೆ, ಅವರನ್ನು ಹತ್ತಿರದಿಂದ ನೋಡಲು ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಈ ವೇಳೆ ಸಲ್ಮಾನ್ ಅವರು ತಮ್ಮ ಕಾರನ್ನು ತಲುಪುವುದೇ ದೊಡ್ಡ ಸವಾಲಾಗಿ ಪರಿಣಮಿಸಿತು. ಆರಂಭದಲ್ಲಿ ಸಲ್ಮಾನ್ ಖಾನ್ ಕೈಮುಗಿದು ದಾರಿ ಬಿಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು. ಆದರೆ ಪರಿಸ್ಥಿತಿ ಹದಗೆಟ್ಟಾಗ, ಭದ್ರತಾ ಸಿಬ್ಬಂದಿಯ ನೆರವಿನಿಂದ ಹೆಣಗಾಡುತ್ತಾ ಕಾರಿನೊಳಗೆ ಕುಳಿತರು.
ಚಾಲಕನಿಗೆ ಸಲ್ಮಾನ್ ಗದರಿದ್ದೇಕೆ?
ಸಲ್ಮಾನ್ ಕಾರಿನಲ್ಲಿ ಕುಳಿತ ನಂತರವೂ ಅಭಿಮಾನಿಗಳ ಗುಂಪು ಕಾರನ್ನು ಸುತ್ತುವರಿದಿತ್ತು. ಈ ಗೊಂದಲದ ನಡುವೆ ಚಾಲಕ ಕಾರನ್ನು ಮುಂದೆ ಚಲಾಯಿಸಲು ಯತ್ನಿಸಿದಾಗ, ಅಭಿಮಾನಿಯೊಬ್ಬರ ಕಾಲು ಕಾರಿನ ಚಕ್ರದ ಅಡಿಗೆ ಸಿಲುಕಿದೆ. ನೋವಿನಿಂದ ಆ ಅಭಿಮಾನಿ ಕಿರುಚಾಡಿದಾಗ ಹಾಗೂ ಅಲ್ಲಿದ್ದ ಫೋಟೋಗ್ರಾಫರ್‌ಗಳು ಕಾರನ್ನು ಸ್ವಲ್ಪ ಹಿಂದೆ ತೆಗೆಯುವಂತೆ ಕೂಗಿಕೊಂಡರು.
This is the real and complete video, you MF just post a 8 second video and troll him.
This video make me proud as a Fan of Salman Bhai.
Salman Khan angry at his driver after fan’s foot comes under the car. https://t.co/OtLO21T4Xa pic.twitter.com/fbbo4wKTwF
— Filmy_Duniya (@SalmanKingfv) September 18, 2026
ಇದನ್ನು ಕಂಡು ತೀವ್ರ ಆಕ್ರೋಶಗೊಂಡ ಸಲ್ಮಾನ್ ಖಾನ್ ಅವರು ಕಾರಿನಲ್ಲೇ ಕುಳಿತು ಚಾಲಕನ ಕೈಗೆ ಹೊಡೆದು, ಗದರಿದ್ದಾರೆ. ತಕ್ಷಣವೇ ಕಾರನ್ನು ಜನರಿಂದ ದೂರ ಒಯ್ಯುವಂತೆ ಚಾಲಕನಿಗೆ ಸೂಚಿಸಿದರು. ಸಲ್ಮಾನ್ ಖಾನ್ ಅವರು ತಮ್ಮ ಚಾಲಕನಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ಶಿವಣ್ಣ ಸಿನಿಮಾ ಮಾಡ್ತಾರಾ? ಶಿವರಾಜ್ಕುಮಾರ್ ಕೊಟ್ಟರು ಉತ್ತರ
ಒಂದೆಡೆ ಈ ಗೊಂದಲ ನಡೆಯುತ್ತಿದ್ದರೆ, ಇನ್ನೊಂದೆಡೆ ಸಲ್ಮಾನ್ ಖಾನ್ ಅವರ ಮಾನವೀಯತೆಯೂ ಕಂಡುಬಂತು. ನೂಕುನುಗ್ಗಲಿನ ನಡುವೆ ಸಣ್ಣ ಬಾಲಕನೊಬ್ಬ ಸಲ್ಮಾನ್ ಖಾನ್ ಅವರತ್ತ ಕೈ ಕುಲುಕಲು ಬಂದಾಗ, ಭದ್ರತಾ ಸಿಬ್ಬಂದಿ ಆತನನ್ನು ತಳ್ಳಲು ಯತ್ನಿಸಿದರು. ಇದನ್ನು ತಡೆದ ಸಲ್ಮಾನ್, ಬಾಲಕನೊಂದಿಗೆ ಹಸ್ತಲಾಘವ ಮಾಡಿ, ಆತನನ್ನು ಸುರಕ್ಷಿತವಾಗಿ ಜನಸಂದಣಿಯಿಂದ ಹೊರಗೆ ಕಳುಹಿಸಿದ ನಂತರವೇ ಕಾರು ಏರಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




