AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salman Khan

Salman Khan

ನಟ ಸಲ್ಮಾನ್​ ಖಾನ್​ ಅವರು ಹಿಂದಿ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಹೊಂದಿದ್ದಾರೆ. ಭಾರತದ ಶ್ರೀಮಂತ ನಟರಲ್ಲಿ ಅವರು ಕೂಡ ಇದ್ದಾರೆ. ಅಬ್ದಲ್​ ರಶೀದ್​ ಸಲೀಂ ಸಲ್ಮಾನ್​ ಖಾನ್​ ಎಂಬುದು ಅವರ ಪೂರ್ಣ ಹೆಸರು. 1988ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು.

ಆರಂಭದಲ್ಲೇ ಅವರಿಗೆ ಯಶಸ್ಸು ಸಿಕ್ಕಿತು. ವೃತ್ತಿಜೀವನದಲ್ಲಿ ಅವರು ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್​ ಮಾಡಿವೆ. ಹಿಂದಿ ಚಿತ್ರರಂಗದ ಮಾಸ್​ ಹೀರೋ ಆಗಿ ಅವರು ಗುರುತಿಸಿಕೊಂಡಿದ್ದಾರೆ. ‘ಮೈ ನೇ ಪ್ಯಾರ್​ ಕಿಯಾ’, ‘ಸಾಜನ್​’, ‘ಹಮ್​ ಆಪ್ಕೆ ಹೈ ಕೌನ್​’, ‘ದಬಂಗ್​’, ‘ಬಜರಂಗಿ ಭಾಯಿಜಾನ್​’, ‘ಏಕ್​ ಥಾ ಟೈಗರ್​’ ಮುಂತಾದವು ಸಲ್ಮಾನ್​ ಖಾನ್​ ನಟನೆಯ ಸೂಪರ್​ ಹಿಟ್​ ಸಿನಿಮಾಗಳು.

ಬಿಗ್​ ಬಾಸ್​ ನಿರೂಪಕನಾಗಿಯೂ ಅವರು ಫೇಮಸ್​ ಆಗಿದ್ದಾರೆ. ನಿರ್ಮಾಪಕನಾಗಿ ಹಲವು ಸಿನಿಮಾಗಳಿಗೆ ಸಲ್ಮಾನ್​ ಖಾನ್​ ಬಂಡವಾಳ ಹೂಡಿದ್ದಾರೆ. ವೃತ್ತಿಜೀವನದ ರೀತಿಯ ಅವರ ಖಾಸಗಿ ಬದುಕು ಕೂಡ ಸುದ್ದಿ ಆಗುತ್ತದೆ. ಹಲವರನ್ನು ಸಲ್ಮಾನ್​ ಖಾನ್​ ಪ್ರೀತಿಸಿದ್ದರು. ಆದರೆ ಯಾರನ್ನೂ ಅವರು ಮದುವೆ ಆಗಲಿಲ್ಲ. ಅವರ ಜೀವನದಲ್ಲಿ ಸಾಕಷ್ಟು ವಿವಾದಗಳು ಕೂಡ ಆಗಿವೆ. ಗ್ಯಾಂಗ್​ಸ್ಟರ್​ಗಳಿಂದ ಅವರಿಗೆ ಜೀವ ಬೆದರಿಕೆಯೂ ಬಂದಿದೆ.

ಇನ್ನೂ ಹೆಚ್ಚು ಓದಿ

ಸಲ್ಮಾನ್ ಖಾನ್ ಫಾರ್ಮ್​ ಹೌಸ್ ಒಳಗೆ ಪಾರ್ಟಿ ಹೇಗೆ ನಡೆಯುತ್ತೆ? ವಿವರಿಸಿದ ನಟಿ

ನಟ ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್​​ ಒಳಗೆ ಆಗಾಗ ಪಾರ್ಟಿ ನಡೆಯುತ್ತದೆ. ಅದರ ಬಗ್ಗೆ ಜನರಿಗೆ ಕುತೂಹಲ ಇದೆ. ಸಲ್ಮಾನ್ ಖಾನ್ ಜೊತೆ ಆಪ್ತವಾಗಿರುವ ಖ್ಯಾತ ನಟಿ ಶೆಹನಾಜ್ ಗಿಲ್ ಅವರು ಒಮ್ಮೆ ಆ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅಲ್ಲಿ ಏನೆಲ್ಲ ನಡೆಯುತ್ತದೆ? ಸಲ್ಮಾನ್ ಖಾನ್ ಅವರು ಹೇಗೆ ಇರುತ್ತಾರೆ ಎಂಬ ಬಗ್ಗೆ ಶೆಹನಾಜ್ ಗಿಲ್ ಮಾತನಾಡಿದ್ದಾರೆ.

ಭಯೋತ್ಪಾದಕರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರು ಇಲ್ಲ: ಪಾಕಿಸ್ತಾನ ಸ್ಪಷ್ಟನೆ

ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಮಾತನಾಡುವಾಗ ಸಲ್ಮಾನ್ ಖಾನ್ ಒಂದು ಎಡವಟ್ಟು ಮಾಡಿದ್ದರು. ಬಲೂಚಿಸ್ತಾನ ಹಾಗೂ ಪಾಕಿಸ್ತಾನ ಬೇರೆ ಬೇರೆ ದೇಶಗಳು ಎಂಬ ಅರ್ಥ ಬರುವ ರೀತಿಯಲ್ಲಿ ಅವರು ಹೇಳಿಕೆ ನೀಡಿದ್ದರು. ಆ ಘಟನೆಯ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ಬಲವಾಗಿ ಹಬ್ಬಿತ್ತು. ಆ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ.

ಸಲ್ಮಾನ್ ಭಯೋತ್ಪಾದಕ ಎಂದು ಪಾಕಿಸ್ತಾನ ಘೋಷಿಸಿಯೇ ಇಲ್ಲ, ಇದು ಶುದ್ಧ ಸುಳ್ಳು

ನಟ ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನ 'ಭಯೋತ್ಪಾದಕ' ಎಂದು ಘೋಷಿಸಿದೆ ಎಂಬುದು ಶುದ್ಧ ಸುಳ್ಳು ಸುದ್ದಿ. ಸೌದಿ ಅರೇಬಿಯಾದಲ್ಲಿ ಬಲೂಚಿಸ್ತಾನದ ಬಗ್ಗೆ ನೀಡಿದ ಹೇಳಿಕೆಯ ನಂತರ ಈ ವದಂತಿ ಹರಡಿತು. ಆದರೆ, ಪಾಕಿಸ್ತಾನದಿಂದ ಯಾವುದೇ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ. ಇದು ಫೇಕ್ ನ್ಯೂಸ್ ಆಗಿದ್ದು, ವೈರಲ್ ಆಗಿರುವ ವರದಿಗಳು ಆಧಾರರಹಿತವಾಗಿವೆ.

ಭಯೋತ್ಪಾದಕರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರು ಸೇರಿಸಿದ ಪಾಕಿಸ್ತಾನ ಸರ್ಕಾರ​?

ಬಲೋಚಿಸ್ತಾನ್ ಗೃಹ ಇಲಾಖೆ ಹೊರಡಿಸಿದೆ ಎನ್ನಲಾದ ನೋಟಿಸ್​​ನ ಪ್ರತಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೆ ಆ ನೋಟಿಸ್​​ನ ಸತ್ಯಾಸತ್ಯತೆ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ಬಗ್ಗೆ ಸುದ್ದಿ ಎಲ್ಲೆಡೆ ಹಬ್ಬಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕಂಠಪೂರ್ತಿ ಕುಡಿದು ಬಿಗ್ ಬಾಸ್​ ನಡೆಸಿಕೊಟ್ಟ ಸಲ್ಮಾನ್ ಖಾನ್? ವಿಡಿಯೋ ವೈರಲ್

ಸಲ್ಮಾನ್ ಖಾನ್ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಕುಡಿದು ನಡೆಸಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಅಭಿಮಾನಿಗಳು ಇದರ ಹಿಂದಿನ ಸತ್ಯಾಂಶವನ್ನು ಬಹಿರಂಗಪಡಿಸಿದ್ದಾರೆ. ಬಿಡುವಿಲ್ಲದ ವೇಳಾಪಟ್ಟಿ, ಸತತ ಪ್ರಯಾಣ, ಮತ್ತು ನಿದ್ದೆ ಇಲ್ಲದ ಕಾರಣ ಸಲ್ಮಾನ್ ಕಣ್ಣುಗಳು ಊದಿಕೊಂಡಿದ್ದವು. ಅವರ ಮುಖದಲ್ಲಿ ಕಾಣಿಸಿದ ಆಯಾಸವನ್ನು ಕುಡಿತ ಎಂದು ತಪ್ಪಾಗಿ ಅರ್ಥೈಸಲಾಗಿದೆ.

‘ತಾನ್ಯಾ ಮಿತ್ತಲ್ ಬಾಯಿಂದ ಕೆಟ್ಟ ಶಬ್ದ ಬಂದಿಲ್ಲ, ರಾಮ, ರಾಮ ಮಾತ್ರ ಹೇಳ್ತಾರೆ’; ಸಲ್ಲು ಪ್ರಶಂಸೆ

ಸಲ್ಮಾನ್ ಖಾನ್ ‘ಬಿಗ್ ಬಾಸ್ ಹಿಂದಿ 19’ರಲ್ಲಿ ತಾನ್ಯಾ ಮಿತ್ತಲ್ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ. ತಾನ್ಯಾ ಎಂದಿಗೂ ಕೆಟ್ಟ ಪದ ಬಳಸದಿರುವುದಕ್ಕೆ ಶ್ಲಾಘಿಸಿದ್ದಾರೆ. ಆದರೆ, ತಾನ್ಯಾ ವಿರುದ್ಧ ವಂಚನೆ ಆರೋಪವಿದ್ದು, ಕೇಸ್ ದಾಖಲಾಗಿದೆ. ಬಿಗ್ ಬಾಸ್ ಮನೆಯಲ್ಲೇ ಅವರನ್ನು ಬಂಧಿಸುವ ಸಾಧ್ಯತೆ ಕುರಿತು ಚರ್ಚೆ ನಡೆದಿದೆ.

‘ಶಿವ ಕಾರ್ತಿಕೇಯ ಸೆಟ್​ಗೆ ಬೇಗ ಬಂದರೂ ಸಿನಿಮಾ ಫ್ಲಾಪ್ ಆಯ್ತು’; ಮುರುಗದಾಸ್​ಗೆ ಸಲ್ಲು ಟಾಂಗ್

ಬಿಗ್ ಬಾಸ್ 19 ರಲ್ಲಿ ಸಲ್ಮಾನ್ ಖಾನ್ ವೈಯಕ್ತಿಕ ವಿವಾದಗಳಿಗೆ ಸ್ಪಷ್ಟನೆ ನೀಡುತ್ತಿದ್ದಾರೆ. ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ, ಅವರು ದಬಾಂಗ್ ನಿರ್ದೇಶಕ ಅಭಿನವ್ ಕಶ್ಯಪ್, ಗಾಯಕ ಅರಿಜಿತ್ ಸಿಂಗ್ ಮತ್ತು ಸಿಕಂದರ್ ನಿರ್ದೇಶಕ ಎ.ಆರ್. ಮುರುಗದಾಸ್ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸಲ್ಲು ಮನೆಯಲ್ಲಿ ಸಂಭ್ರಮ; ದೊಡ್ಡಪ್ಪನಾದ ಸಲ್ಮಾನ್ ಖಾನ್

Arbaz Khan: ಅರ್ಬಾಜ್ ಈ ಸಂತೋಷದ ಸುದ್ದಿಯನ್ನು ಇನ್ನೂ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿಲ್ಲವಾದರೂ, ಮಾಧ್ಯಮ ವರದಿಗಳ ಪ್ರಕಾರ, ಶುರಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಶುರಾ ಮತ್ತು ಅರ್ಬಾಜ್ ಈ ವರ್ಷದ ಜೂನ್‌ನಲ್ಲಿ ಎಲ್ಲರೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು.

‘ನಾನು ಒಂದು ದಿನ ಮಗು ಹೊಂದುತ್ತೇನೆ’; ಮನದ ಆಸೆ ಹೊರಹಾಕಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರ ಸಂಬಂಧಗಳ ಬಗ್ಗೆ ಹೇಳುವುದಾದರೆ, ನಟ ಅನೇಕ ಪ್ರಸಿದ್ಧ ಮತ್ತು ಜನಪ್ರಿಯ ನಟಿಯರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಆದರೆ ಸಲ್ಮಾನ್ ಖಾನ್ ಅವರ ಯಾವುದೇ ನಟಿಯೊಂದಿಗಿನ ಸಂಬಂಧವು ಮದುವೆಯ ಹಂತವನ್ನು ತಲುಪಲಿಲ್ಲ.ಈಗ ಅವರು ಒಂಟಿಯಾಗಿದ್ದಾರೆ. ಅವರಿಗೆ ಮಕ್ಕಳನ್ನು ಹೊಂದುವ ಆಸೆ ಬಂದಿದೆ.

ಇದಪ್ಪಾ ಸೇಡು ಅಂದ್ರೆ; ಸಲ್ಮಾನ್ ಖಾನ್​ಗೆ ಸೆಡ್ಡು ಹೊಡೆದು ರಿಯಾಲಿಟಿ ಶೋ ಹೋಸ್ಟ್ ಆದ ಅಶ್ನೀರ್

ಸಲ್ಮಾನ್ ಖಾನ್ ಅವರು ಅಶ್ನೀರ್ ಅವರ ಮೇಲೆ ಅಸಮಾಧಾನ ಹೊರಹಾಕಿದ್ದರು. ಈಗ ಅಶ್ನೀರ್ ಒಂದು ರಿಯಾಲಿಟಿ ಶೋ ಹೋಸ್ಟ್ ಆಗಿದ್ದಾರೆ. ಇದನ್ನು ಅನೇಕರು ಸಲ್ಮಾನ್ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರಯತ್ನ ಎಂದು ಪರಿಗಣಿಸಿದ್ದಾರೆ. ಅಶ್ನೀರ್ ಸಲ್ಮಾನ್ ಖಾನ್ ಅವರನ್ನು ನೇರವಾಗಿ ಉಲ್ಲೇಖಿಸದೆ, ರಿಯಾಲಿಟಿ ಶೋಗಳಲ್ಲಿನ ಸ್ಪರ್ಧಿಗಳಿಗಿಂತ ಸೆಲೆಬ್ರಿಟಿಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವುದನ್ನು ಟೀಕಿಸಿದ್ದಾರೆ.