AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್​​ಗೆ ಭಾರತದ ಅಧಿಕೃತ ಆಯ್ಕೆ ಮರಾಠಿ ಸಿನಿಮಾ ‘ಗೋಂಧಲ್’: ಏನಿದರ ವಿಶೇಷತೆ?

‘ಆರ್​​ಆರ್​​ಆರ್’ ಸಿನಿಮಾ ಆಸ್ಕರ್ ಅಂಗಳಕ್ಕೆ ಕಾಲಿರಿಸಿದ್ದು ಮಾತ್ರವೇ ಅಲ್ಲದೆ ಆಸ್ಕರ್ ಗೆದ್ದು ಇತಿಹಾಸ ಸೃಷ್ಟಿಸಿದೆ. ಭಾರತದ ಕೆಲ ಡಾಕ್ಯುಮೆಂಟರಿಗಳು ಸಹ ಆಸ್ಕರ್ ಗೆದ್ದಿವೆ. ಮಾತ್ರವಲ್ಲದೆ ಖುದ್ದು ಆಸ್ಕರ್, ಹಲವು ಭಾರತೀಯ ಸಿನಿಮಾಗಳನ್ನು ಗುರುತಿಸಿ ವಿಶೇಷ ಗೌರವವನ್ನು ನೀಡಿದೆ. ಹೀಗಿರುವಾಗ ಇದೀಗ ಮತ್ತೊಂದು ಆಸ್ಕರ್ ಹತ್ತಿರವಾಗುತ್ತಿದ್ದು, ಭಾರತದಿಂದ ಈ ಬಾರಿ ಅಳೆದು-ತೂಗಿ ಮರಾಠಿ ಸಿನಿಮಾ ಒಂದನ್ನು ಅಧಿಕೃತ ಆಯ್ಕೆಯನ್ನಾಗಿ ಪರಿಗಣಿಸಿ ಕಳಿಸಲಾಗಿದೆ.

ಆಸ್ಕರ್​​ಗೆ ಭಾರತದ ಅಧಿಕೃತ ಆಯ್ಕೆ ಮರಾಠಿ ಸಿನಿಮಾ ‘ಗೋಂಧಲ್’: ಏನಿದರ ವಿಶೇಷತೆ?
Gondhal
ಮಂಜುನಾಥ ಸಿ.
|

Updated on: Sep 18, 2026 | 4:57 PM

Share

ಮುಖ್ಯಾಂಶಗಳು

  • ಆಸ್ಕರ್ ರೇಸಿಗೆ ಭಾರತದ ಸಿನಿಮಾ
  • ಭಾರತದಿಂದ ಅಧಿಕೃತವಾಗಿ ಆಯ್ಕೆ ಆಯ್ತು ಮರಾಠಿ ಸಿನಿಮಾ
  • ಮರಾಠಿ ಸಿನಿಮಾ ‘ಗೋಂಧಲ್’ ಅಧಿಕೃತವಾಗಿ ಆಯ್ಕೆ ಆಗಿದೆ.

ಕೋವಿಡ್ ಬಳಿಕ ಭಾರತದ ಸಿನಿಮಾಗಳು ವಿಶ್ವಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಅದರಲ್ಲೂ ಭಾರತದ ಪ್ರಾದೇಶಿಕ ಭಾಷೆಯ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಪ್ರೇಕ್ಷಕರನ್ನು ಸೆಳೆಯುವುದು ಮಾತ್ರವೇ ಅಲ್ಲದೆ, ಆಸ್ಕರ್ ಅಂಥಹಾ ವಿಶ್ವ ಶ್ರೇಷ್ಠ ವೇದಿಕೆಗಳಲ್ಲಿ ಸ್ಥಾನ ಪಡೆಯುತ್ತಿದೆ. ‘ಆರ್​​ಆರ್​​ಆರ್’ ಸಿನಿಮಾ ಆಸ್ಕರ್ ಅಂಗಳಕ್ಕೆ ಕಾಲಿರಿಸಿದ್ದು ಮಾತ್ರವೇ ಅಲ್ಲದೆ ಆಸ್ಕರ್ ಗೆದ್ದು ಇತಿಹಾಸ ಸೃಷ್ಟಿಸಿದೆ. ಭಾರತದ ಕೆಲ ಡಾಕ್ಯುಮೆಂಟರಿಗಳು ಸಹ ಆಸ್ಕರ್ ಗೆದ್ದಿವೆ. ಮಾತ್ರವಲ್ಲದೆ ಖುದ್ದು ಆಸ್ಕರ್, ಹಲವು ಭಾರತೀಯ ಸಿನಿಮಾಗಳನ್ನು ಗುರುತಿಸಿ ವಿಶೇಷ ಗೌರವವನ್ನು ನೀಡಿದೆ. ಹೀಗಿರುವಾಗ ಇದೀಗ ಮತ್ತೊಂದು ಆಸ್ಕರ್ ಹತ್ತಿರವಾಗುತ್ತಿದ್ದು, ಭಾರತದಿಂದ ಈ ಬಾರಿ ಅಳೆದು-ತೂಗಿ ಮರಾಠಿ ಸಿನಿಮಾ ಒಂದನ್ನು ಅಧಿಕೃತ ಆಯ್ಕೆಯನ್ನಾಗಿ ಪರಿಗಣಿಸಿ ಕಳಿಸಲಾಗಿದೆ.

99ನೇ ಆಸ್ಕರ್ ಈ ಬಾರಿ ನಡೆಯಲಿದ್ದು, ಈ ಬಾರಿಯ ಆಸ್ಕರ್​​ಗೆ ಭಾರತದಿಂದ ಮರಾಠಿ ಸಿನಿಮಾ ‘ಗೊಂಧಲ್’ ಭಾರತದ ಸಿನಿಮಾ ಫೆಡರೇಷನ್ ಕಳಿಸಿಕೊಟ್ಟಿದೆ. ‘ಗೊಂಧಲ್’ ಸಿನಿಮಾವು ಆಸ್ಕರ್​​ನ ವಿದೇಶಿ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿಗಾಗಿ ಸ್ಪರ್ಧೆ ಮಾಡಲಿದೆ. ‘ಗೊಂಧಲ್’ ಸಿನಿಮಾವು ಮಹಾರಾಷ್ಟ್ರದಲ್ಲಿ ನಡೆಯುವ ಒಂದು ಆಚರಣೆಯ ಕುರಿತಾದ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ಸಂಸ್ಕೃತಿ, ಆಚರಣೆಯನ್ನು ಸಾರುವ ಕತೆಯನ್ನು ಸಿನಿಮಾ ಒಳಗೊಂಡಿದೆ.

ಈ ಬಾರಿ ‘ಧುರಂಧರ್’ ಸಿನಿಮಾವನ್ನು ಆಸ್ಕರ್​​ಗೆ ಕಳಿಸಬೇಕು ಎಂಬ ಒತ್ತಡ ಜ್ಯೂರಿ ಸದಸ್ಯರ ಮೇಲಿತ್ತು. ಅದರ ಜೊತೆಗೆ ನಾಗಾ ಸಿನಿಮಾ ‘ಅಂಗ’ ಮತ್ತು ತಮಿಳು ಸಿನಿಮಾ ‘ಡೊರೊತಿ’ ಸಹ ರೇಸಿನಲ್ಲಿದ್ದವು. ಆದರೆ ಅದ್ಯಾವುದನ್ನೂ ಅಲ್ಲದೆ, ಮರಾಠಿ ಸಿನಿಮಾ ‘ಗೋಂಧಲ್’ ಅನ್ನು ಸದಸ್ಯರು ಆಯ್ಕೆ ಮಾಡಿದ್ದಾರೆ. ಭಾರತೀಯ ಸಂಸ್ಕೃತಿ, ಆಚರಣೆಗಳ ಜೊತೆಗೆ ಸಿನಿಮಾದ ಕತೆಯಲ್ಲಿರುವ ಮಾನವನ ವ್ಯಕ್ತಿತ್ವದ ಅನಾವರಣ ಈ ಸಿನಿಮಾವನ್ನು ಆಸ್ಕರ್​​ ಆಯ್ಕೆಗೆ ಅರ್ಹವೆಂದು ಜ್ಯೂರಿ ಸದಸ್ಯರು ಪರಿಗಣಿಸಿದ್ದಾರೆ.

ಇದನ್ನೂ ಓದಿ:‘ಆಸ್ಕರ್ ಸಿಗಲೇ ಬೇಕು’: ‘ರಾಮಾಯಣ’ ಸಿನಿಮಾವನ್ನು ಕೊಂಡಾಡಿದ ಮಹಾರಾಷ್ಟ್ರ ಸಿಎಂ

ಗೋಂಧಾಲ್ ಕತೆ ಏನು?

‘ಗೋಂಧಾಲ್’ ಎಂಬುದು ರಾತ್ರಿ ಪೂರ್ತಿ ನಡೆಯುವ ಒಂದು ಪೂಜೆ ಆಚರಣೆ. ಈಗ ಆಸ್ಕರ್​​ಗೆ ಆಯ್ಕೆ ಆಗಿರುವ ಸಿನಿಮಾ ‘ಗೋಂಧಾಲ್’ ‘ಸುಮನ್’ ಎಂಬ ಪಾತ್ರದ ಸುತ್ತುವ ಕತೆಯನ್ನು ಒಳಗೊಂಡಿದೆ. ಹಳ್ಳಿಯೊಂದಕ್ಕೆ ಸೊಸೆಯಾಗಿ ಬರುವ ಸುಮನ್, ಪತಿ ಆನಂದ್ ಜೊತೆಗೆ ಆರಾಮದ ಜೀವನ ನಡೆಸುತ್ತಿರುತ್ತಾಳೆ. ಆದರೆ ಆಕೆ, ‘ಗೋಂಧಾಲ್’ ಆಚರಣೆಯಲ್ಲಿ ಪ್ರಮುಖನಾದ ಗೋಂಧಾಲಿ ಸಾಹೇಬ ಎಂಬಾತನ ಮೇಲೆ ಪ್ರೀತಿ ಬೆಳೆಸಿಕೊಳ್ಳುತ್ತಾಳೆ. ಆಕೆ ತನ್ನ ಪತಿಯಿಂದ ದೂರಾಗಲು ಪತಿಯ ಸಂಬಂಧಿಯೊಬ್ಬನ ಸಹಾಯ ಪಡೆಯುತ್ತಾಳೆ. ಆದರೆ ಆಕೆ ಮದುವೆ ಸಂಕೋಲೆಯಿಂದ ಸ್ವಾತಂತ್ರ್ಯ ಪಡೆಯಲು ಮಾಡುವ ಈ ಪ್ರಯತ್ನದಲ್ಲಿ ಒಂದು ಕೊಲೆ ನಡೆದು ಹೋಗುತ್ತದೆ. ಬಳಿಕ ಪ್ರತಿಯೊಬ್ಬರೂ ಸಹ ತಮ್ಮನ್ನು ತಾವು ಕಾಪಾಡಿಕೊಳ್ಳುವ ಮಾಡುವ ಪ್ರಯತ್ನಗಳು ಸಿನಿಮಾದ ಕತೆಗೆ ಥ್ರಿಲ್ಲರ್ ಗುಣವನ್ನು ಸೇರಿಸಿದೆ. ಈ ಸಿನಿಮಾವನ್ನು ಸಂತೋಷ್ ದಾವ್ಕರ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ