AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಟಿ ಲೈಟ್ಸ್’ ವಿಮರ್ಶೆ: ಮೆಜೆಸ್ಟಿಕ್ ಏರಿಯಾದ ಕರಾಳ ಮುಖ ಅನಾವರಣ ಮಾಡುವ ಸಿನಿಮಾ

‘ಸಿಟಿ ಲೈಟ್ಸ್’ ವಿಮರ್ಶೆ: ಮೆಜೆಸ್ಟಿಕ್ ಏರಿಯಾದ ಕರಾಳ ಮುಖ ಅನಾವರಣ ಮಾಡುವ ಸಿನಿಮಾ
City Lights Review

ಸಿಟಿ ಲೈಟ್ಸ್

A
  • Time - 129 Minutes
  • Released - September 18, 2026
  • Language - Kannada
  • Genre - Drama, Romantic
Cast - ವಿನಯ್ ರಾಜ್​ಕುಮಾರ್, ಮೋನಿಷಾ ವಿಜಯ್ ಕುಮಾರ್, ಉಮಾಶ್ರೀ, ವಿನೋದ್ ಮಾಸ್ಟರ್, ಪುನೀತ್, ವೀರ ದೇವರಾಜ್, ವಸಂತಾ ಕೃಷ್ಣಮೂರ್ತಿ ಮುಂತಾದವರು.
Director - ದುನಿಯಾ ವಿಜಯ್ (ವಿಜಯ್ ಕುಮಾರ್)
3.5
Critic's Rating
ಮದನ್​ ಕುಮಾರ್​
|

Updated on: Sep 18, 2026 | 3:13 PM

Share

ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಯಶಸ್ಸು ಕಂಡವರು ದುನಿಯಾ ವಿಜಯ್. ಈ ಮೊದಲು ‘ಸಲಗ’ ಹಾಗೂ ‘ಭೀಮ’ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಈಗ ‘ಸಿಟಿ ಲೈಟ್ಸ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮೊದಲೆರಡು ಸಿನಿಮಾಗಳಲ್ಲಿ ನಿರ್ದೇಶನದ ಜೊತೆಗೆ ಸ್ವತಃ ನಟಿಸಿದ್ದ ಅವರು ಈಗ ಸಂಪೂರ್ಣವಾಗಿ ತೆರೆಹಿಂದೆ ನಿಂತು ಕೆಲಸ ಮಾಡಿದ್ದಾರೆ. ವಿಜಯ್ ಮತ್ತು ವಿಕ್ರಮ್ ಆರ್ಯ ಅವರು ಒಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ‘ಸಿಟಿ ಲೈಟ್ಸ್’ ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಈ ವಿಮರ್ಶೆ ಓದಿ..

‘ಸಿಟಿ ಲೈಟ್ಸ್’ ಸಿನಿಮಾದ ಮೂಲಕ ದುನಿಯಾ ವಿಜಯ್ ಅವರ ಎರಡನೇ ಪುತ್ರಿ ಮೋನಿಷಾ ವಿಜಯ್ ಕುಮಾರ್ ಅವರು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ನೀಡಿದ್ದಾರೆ. ಅವರಿಗೆ ಜೋಡಿಯಾಗಿ ವಿನಯ್ ರಾಜ್​ಕುಮಾರ್ ಅವರು ಅಭಿನಯಿಸಿದ್ದಾರೆ. ಉಮಾಶ್ರೀ ಕೂಡ ಒಂದು ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ಮಾಸ್ಟರ್, ಪುನೀತ್, ವೀರ ದೇವರಾಜ್, ವಸಂತಾ ಕೃಷ್ಣಮೂರ್ತಿ ಮುಂತಾದ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ.

ದುನಿಯಾ ವಿಜಯ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ಕಥೆ ಮತ್ತು ಪಾತ್ರಗಳ ಹಿನ್ನೆಲೆ ಬಹಳ ಭಿನ್ನವಾಗಿರುತ್ತದೆ ಎಂಬುದು ಖಚಿತ. ‘ಸಲಗ’ ಮತ್ತು ‘ಭೀಮ’ ಸಿನಿಮಾಗಳನ್ನು ನೋಡಿದವರಿಗೆ ಅದು ಸ್ಪಷ್ಟವಾಗಿ ತಿಳಿದಿರುತ್ತದೆ. ಈಗ ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಕೂಡ ಅವರು ಅಂಥದ್ದೇ ಒಂದು ಡಿಫರೆಂಟ್ ಲೋಕವನ್ನು ಅನಾವರಣ ಮಾಡಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್ ಬಗ್ಗೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ತೋರಿಸಲಾಗಿದೆ. ಆದರೆ ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಮೆಜೆಸ್ಟಿಕ್ ಏರಿಯಾದ ಇನ್ನೊಂದು ಕರಾಳ ಮುಖವನ್ನು ತೆರೆದಿಡಲಾಗಿದೆ. ಮೋನಿಷಾ ಅವರಿಗೆ ಮೊದಲ ಸಿನಿಮಾದಲ್ಲಿಯೇ ಡಿಫರೆಂಟ್ ಆದಂತಹ ಪಾತ್ರ ಸಿಕ್ಕಿದೆ. ಅದನ್ನು ಅವರು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮೋನಿಷಾ ಅವರು ಕಾಣಿಸಿಕೊಳ್ಳುವುದೇ ಮಧ್ಯಂತರದ ವೇಳೆಗೆ. ಆದರೂ ಕೂಡ ಅವರ ಪಾತ್ರವೇ ಸಿನಿಮಾದಲ್ಲಿ ಹೈಲೈಟ್ ಆಗಿದೆ.

ಊರಿನಿಂದ ಕೆಲಸ ಹುಡುಕಿಕೊಂಡು ಮೆಜೆಸ್ಟಿಕ್​ಗೆ ಬರುವ ಶಿವ ಎಂಬ ಯುವಕನಾಗಿ ವಿನಯ್ ರಾಜ್​ಕುಮಾರ್ ಅವರು ನಟಿಸಿದ್ದಾರೆ. ಅಲ್ಲಿ ಶಿವನಿಗೆ ಹಲವು ತಾಪತ್ರಯಗಳು ಎದುರಾಗುತ್ತವೆ. ಅದರ ನಡುವೆಯೇ, ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕುವ ಅಮಾಯಕ ಹೆಣ್ಣು ಮಗಳಾಗಿ ಮೋನಿಷಾ ಕಾಣಿಸಿಕೊಂಡಿದ್ದಾರೆ. ಈ ಎರಡೂ ಪಾತ್ರಗಳು ಆಕಸ್ಮಿಕವಾಗಿ ಭೇಟಿ ಆಗುತ್ತವೆ. ಅಲ್ಲಿಂದ ಮುಂದೇನಾಗುತ್ತದೆ ಎಂಬುದೇ ‘ಸಿಟಿ ಲೈಟ್ಸ್’ ಕಹಾನಿ.

ಒಂದು ಲವ್ ಸ್ಟೋರಿ, ತೃತೀಯ ಲಿಂಗಿಗಳ ತಳಮಳ, ಪುಡಿ ರೌಡಿಗಳ ಅಟ್ಟಹಾಸ, ರಾಜಕೀಯದವರ ಭ್ರಷ್ಟಾಚಾರ, ಪೊಲೀಸರ ಕಳ್ಳಾಟ, ವೇಶ್ಯೆಯರ ಬದುಕಿನ ಸಂಕಟ ಸೇರಿದಂತೆ ಹಲವು ಅಂಶಗಳನ್ನು ಬೆರೆಸಿ ‘ಸಿಟಿ ಲೈಟ್ಸ್’ ಸಿನಿಮಾ ಮಾಡಲಾಗಿದೆ. ಎಲ್ಲವನ್ನೂ ಒಂದಕ್ಕೊಂದು ತಳುಕು ಹಾಕಿಕೊಂಡಿರುವ ರೀತಿಯಲ್ಲಿ ಕಥೆ ಹೆಣೆಯಲಾಗಿದೆ. ಸಸ್ಪೆನ್ಸ್ ಮೂಡಿಸುತ್ತಾ, ಆ್ಯಕ್ಷನ್ ತೋರಿಸುತ್ತಾ, ಸಂದೇಶ ನೀಡುತ್ತಾ ಈ ಕಥೆ ಸಾಗುತ್ತದೆ. ಹಲವು ಅಂಶಗಳ ಮಿಶ್ರಣದ ಬದಲು ನಿರ್ದಿಷ್ಟ ವಿಷಯದ ಮೇಲೆ ಕಥೆ ಕೇಂದ್ರೀಕೃತ ಆಗಿದ್ದರೆ ಸಿನಿಮಾ ಇನ್ನಷ್ಟು ಆಪ್ತವೆಸಿಕೊಳ್ಳುತ್ತಿತ್ತು. ಕೆಲವು ದೃಶ್ಯಗಳಲ್ಲಿ ಸ್ವಲ್ಪ ವಿವರಣೆ ಬೇಕಿತ್ತು ಎನಿಸುತ್ತದೆ.

ಇದನ್ನೂ ಓದಿ: ‘ಸಿಟಿ ಲೈಟ್ಸ್’ ಬೆಂಬಲಿಸಿದ ದೊಡ್ಮನೆಯವರಿಗೆ ದುನಿಯಾ ವಿಜಯ್ ಧನ್ಯವಾದ: ವಿಡಿಯೋ

ಪಟಪಟನೆ ಸಾಗುವ ಗುಣ ಈ ಸಿನಿಮಾಗಿದೆ. 2 ಗಂಟೆ 9 ನಿಮಿಷಗಳ ಅವಧಿಯಲ್ಲಿ ಎಲ್ಲವನ್ನೂ ತೋರಿಸಲಾಗಿದೆ. ಗೊಂದಲಕ್ಕೆ ಅವಕಾಶ ನೀಡದ ರೀತಿಯಲ್ಲಿ ನಿರ್ದೇಶಕ ದುನಿಯಾ ವಿಜಯ್ ಅವರು ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಹಾಸ್ಯಕ್ಕಾಗಿಯೂ ಒಂದಷ್ಟು ದೃಶ್ಯಗಳನ್ನು ಮೀಸಲಿಡಲಾಗಿದೆ. ಆದರೆ ಲವ್, ಸೆಂಟಿಮೆಂಟ್, ಕ್ರೈಂ ಹಾಗೂ ಆ್ಯಕ್ಷನ್ ದೃಶ್ಯಗಳಿಗೆ ಹೋಲಿಸಿದರೆ ಕಾಮಿಡಿ ದೃಶ್ಯಗಳು ಅಷ್ಟೇನೂ ಕೈ ಹಿಡಿದಿಲ್ಲ. ಆ ಬಗ್ಗೆ ಸ್ವಲ್ಪ ಗಮನ ಹರಿಸುವ ಅವಶ್ಯಕತೆ ಇತ್ತು.

ಇತರೆ ಸಿನಿಮಾಗಳಲ್ಲಿ ಕಾಣಿಸುವ ಪಾತ್ರಗಳಿಗಿಂತ ದುನಿಯಾ ವಿಜಯ್ ನಿರ್ದೇಶನದ ಸಿನಿಮಾಗಳಲ್ಲಿ ಇರುವ ಪಾತ್ರಗಳು ಡಿಫರೆಂಟ್ ಆಗಿರುತ್ತವೆ. ಅಂಥ ಪಾತ್ರಗಳು ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಕೂಡ ಮುಂದುವರಿದಿವೆ. ಆ ರೀತಿಯ ಪಾತ್ರಗಳ ಕಾರಣದಿಂದಲೇ ಈ ಚಿತ್ರಕ್ಕೆ ಬೇರೆ ರೀತಿಯ ಫೀಲ್ ಸಿಕ್ಕಿದೆ. ಇನ್ನು, ತಾಂತ್ರಿಕ ವರ್ಗದಲ್ಲಿ ಚರಣ್ ರಾಜ್ ಅವರ ಸಂಗೀತ, ಶಿವ ಸೇನಾ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಅವರ ಸಂಕಲನ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ
ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ
ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ
ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ
ಟಿ ನರಸೀಪುರದಲ್ಲಿ ಬಿಗಿ ಭದ್ರತೆ: 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಟಿ ನರಸೀಪುರದಲ್ಲಿ ಬಿಗಿ ಭದ್ರತೆ: 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ