AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೈವಾರಾಧನೆಯ ಪವಿತ್ರ ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಿಸುವುದು ಸಲ್ಲ: ಬಿಜೆಪಿ ಆಕ್ಷೇಪ

ದೈವಾರಾಧನೆಯ ಪವಿತ್ರ ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಿಸುವುದು ಸಲ್ಲ: ಬಿಜೆಪಿ ಆಕ್ಷೇಪ

ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Sep 18, 2026 | 11:10 AM

Share

ಸಿಎಂ ಡಿಕೆ ಶಿವಕುಮಾರ್ ಅವರ ಮಂಗಳೂರು ಡಿನ್ನರ್ ಮೀಟಿಂಗ್‌ನಲ್ಲಿ ಗಗ್ಗರ ಪ್ರದರ್ಶನದಿಂದ ವಿವಾದ ಸೃಷ್ಟಿಯಾಗಿದೆ. ತುಳುನಾಡಿನ ದೈವಾರಾಧನೆಯ ಪವಿತ್ರ ವಸ್ತುವಾದ ಗಗ್ಗರವನ್ನು ಮನೋರಂಜನೆಯಂತೆ ಪ್ರದರ್ಶಿಸಿದ್ದು, ಚಪ್ಪಲಿ ಧರಿಸಿ ವೀಕ್ಷಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಆಕ್ಷೇಪಕ್ಕೆ ಕಾರಣವಾಗಿದೆ. ಇದು ತುಳುನಾಡ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಎಂದು ಬಿಜೆಪಿ ಕಿಡಿಕಾರಿದೆ.

ಮಂಗಳೂರು, ಸೆಪ್ಟೆಂಬರ್ 18: ಸಿಎಂ ಡಿಕೆ ಶಿವಕುಮಾರ್ ಅವರು ಮಂಗಳೂರಿನ ತಣ್ಣೀರು ಬಾವಿ ಬೀಚ್‌ನಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಡಿನ್ನರ್ ಮೀಟಿಂಗ್ ಇದೀಗ ಗಗ್ಗರ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಯನ್ನು ಆಕರ್ಷಿಸುವ ಉದ್ದೇಶದಿಂದ ತುಳುನಾಡಿನ ಪ್ರಾಚೀನ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ವಸ್ತುಗಳನ್ನು ಉಸ್ತುವಾರಿ ಸಚಿವ ಯುಟಿ ಖಾದರ್ ಅವರು ಮುಖ್ಯಮಂತ್ರಿಯವರಿಗೆ ತೋರಿಸಿದ್ದರು. ಪ್ರಾಚೀನ ವಸ್ತುಗಳ ಜೊತೆಗೆ ತುಳುನಾಡ ದೈವಾರಾಧನೆಯ ಪವಿತ್ರ ವಸ್ತುವಾದ ಗಗ್ಗರವನ್ನೂ ಪ್ರದರ್ಶನಕ್ಕೆ ಇಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಬಿಜೆಪಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ದೈವಾರಾಧನೆಯ ಪವಿತ್ರ ಗಗ್ಗರವನ್ನು ಮನೋರಂಜನೆಯ ವಸ್ತುವನ್ನಾಗಿ ಪ್ರದರ್ಶಿಸಲಾಗಿದೆ’ ಎಂದು ದೂರಿದೆ. ಅಲ್ಲದೆ, ಚಪ್ಪಲಿ ಹಾಕಿಕೊಂಡು ಗಗ್ಗರವನ್ನು ಮುಟ್ಟಿದ್ದು ಮತ್ತು ವೀಕ್ಷಿಸಿದ್ದು ತುಳುನಾಡಿನ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಆರೋಪಿಸಿದೆ. ದೈವಕ್ಕೆ ಸಮಾನವಾದ ವಸ್ತುಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡುವುದು ಮತ್ತು ಅದಕ್ಕೆ ಸೂಕ್ತ ಗೌರವ ನೀಡದಿರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಬಿಜೆಪಿ ಎತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 18, 2026 10:33 AM

Follow Us