ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಬಿಗ್ ಬಾಸ್ ಮನೆಯಲ್ಲಿ ಆಸಿಯಾ ಹಾಗೂ ಕಿರಣ್ ಶಾಸ್ತ್ರಿ ನಡುವೆ ಕಟು ಮಾತುಗಳ ಸಮರ ನಡೆದಿದೆ. ಶಾಸ್ತ್ರಿ ಕೆರಳಿಸುವ ಮಾತುಗಳಿಗೆ ಆಸಿಯಾ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ಈ ಇಬ್ಬರ ನಡುವಿನ ಮಾತಿನ ಚಕಮಕಿ ಮನೆಯಲ್ಲಿ ದೊಡ್ಡ ಗಲಾಟೆಗೆ ಕಾರಣವಾಗಿದ್ದು, ವೀಕ್ಷಕರ ಗಮನ ಸೆಳೆದಿದೆ.
ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ವಾಗ್ವಾದಗಳು ಮಿತಿ ಮೀರುತ್ತಿವೆ. ಸಣ್ಣ ಸಣ್ಣ ವಿಚಾರಗಳಿಗೂ ದೊಡ್ಡ ಮಟ್ಟದ ಜಗಳಗಳು ನಡೆಯುತ್ತಿದ್ದು, ಇದೀಗ ಕಿರಣ್ ಶಾಸ್ತ್ರಿ ಹಾಗೂ ಆಸಿಯಾ ನಡುವೆ ಭಾರಿ ಹೈ-ವೋಲ್ಟೇಜ್ ಕಿತ್ತಾಟ ನಡೆದಿದೆ.
ಕ್ಯಾಪ್ಟನ್ಸಿ ಹಾಗೂ ಗೇಮ್ ಟಾಸ್ಕ್ ವಿಚಾರವಾಗಿ ಮಾತುಕತೆ ನಡೆಯುವ ವೇಳೆ, ಕಿರಣ್ ಶಾಸ್ತ್ರಿ ಅವರು ಆಸಿಯಾ ಅವರನ್ನು ಉದ್ದೇಶಪೂರ್ವಕವಾಗಿ ಟ್ರಿಗರ್ ಮಾಡುವಂತಹ ಮಾತುಗಳನ್ನು ಆಡಿದ್ದಾರೆ. ಇದು ಆಸಿಯಾ ಅವರ ಕೋಪದ ಕಟ್ಟೆಯನ್ನು ಒಡೆಯುವಂತೆ ಮಾಡಿದೆ.
ಶಾಸ್ತ್ರಿ ಅವರ ಮಾತಿನಿಂದ ತೀವ್ರ ಕೆರಳಿದ ಆಸಿಯಾ, ತಮ್ಮ ಮೇಲಿನ ನಿಯಂತ್ರಣ ಕಳೆದುಕೊಂಡು ಗಟ್ಟಿಯಾಗಿ ಕಿರುಚಾಡಿದ್ದಾರೆ. ‘ನನ್ನ ಬಗ್ಗೆ ಮಾತನಾಡಬೇಡಿ, ಸುಮ್ನೆ ಇರಬೇಕು’ ಎಂದು ಕೂಗಾಡುತ್ತಾ, ಮನೆಯಲ್ಲಿದ್ದ ವಸ್ತುಗಳನ್ನು ಕೈಯಲ್ಲಿ ಹಿಡಿದು ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ಇತರ ಸ್ಪರ್ಧಿಗಳು ಆಸಿಯಾ ಅವರನ್ನು ಶಾಂತಗೊಳಿಸಲು ಯತ್ನಿಸಿದರಾದರೂ, ಜಗಳ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಕಿರಣ್ ಶಾಸ್ತ್ರಿ ಅವರ ಈ ಟ್ರಿಗರಿಂಗ್ ಗೇಮ್ ಪ್ಲಾನ್ ಮನೆಯಲ್ಲಿ ಮತ್ತಷ್ಟು ಅಶಾಂತಿಗೆ ಕಾರಣವಾಗಿದ್ದು, ವೀಕ್ಷಕರಲ್ಲೂ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

