AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷ ಇಲ್ಲಿಯವರೆಗೆ 14 ಲಕ್ಷ ಕೋಟಿ ರೂ ದಾಟಿದ ಒಟ್ಟು ನೇರ ತೆರಿಗೆ ಸಂಗ್ರಹ

ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಇತ್ಯಾದಿ ಡೈರೆಕ್ಟ್ ಟ್ಯಾಕ್ಸ್ ಸಂಗ್ರಹ ಈ ವರ್ಷ ಸಖತ್ತಾಗಿ ಆಗುತ್ತಿದೆ. ಏಪ್ರಿಲ್ 1ರಿಂದ ಸೆಪ್ಟೆಂಬರ್ 17ರವರೆಗೆ ಒಟ್ಟು ನೇರ ತೆರಿಗೆ ಸಂಗ್ರಹ ಶೇ 15.19ರಷ್ಟು ಹೆಚ್ಚಳಗೊಂಡು 14.35 ಲಕ್ಷ ಕೋಟಿ ರೂ ಆಗಿದೆ. ಬಜೆಟ್​ನಲ್ಲಿ ಸರ್ಕಾರವು ಡೈರೆಕ್ಟ್ ಟ್ಯಾಕ್ಸ್​ಗಳಿಂದ 27 ಲಕ್ಷ ಕೋಟಿ ರೂ ನಿರೀಕ್ಷೆ ಮಾಡಿದೆ.

ಈ ವರ್ಷ ಇಲ್ಲಿಯವರೆಗೆ 14 ಲಕ್ಷ ಕೋಟಿ ರೂ ದಾಟಿದ ಒಟ್ಟು ನೇರ ತೆರಿಗೆ ಸಂಗ್ರಹ
ಆದಾಯ ತೆರಿಗೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 18, 2026 | 6:17 PM

Share

ನವದೆಹಲಿ, ಸೆಪ್ಟೆಂಬರ್ 18: ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿರುವ ಹೊಸ ದತ್ತಾಂಶದ ಪ್ರಕಾರ, 2026-27ನೇ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (ಸೆಪ್ಟೆಂಬರ್ 17) ಭಾರತದ ನಿವ್ವಳ ನೇರ ತೆರಿಗೆ (Net Direct Tax) ಸಂಗ್ರಹವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (YoY) 12.96% ಹೆಚ್ಚಾಗಿ 12.12 ಲಕ್ಷ ಕೋಟಿ ರೂಗೆ ತಲುಪಿದೆ.

ಏಪ್ರಿಲ್ 1ರಿಂದ ಸೆಪ್ಟೆಂಬರ್ 17ರವರೆಗೆ ಒಟ್ಟು ನೇರ ತೆರಿಗೆ ಸಂಗ್ರಹ 14.32 ಲಕ್ಷ ಕೋಟಿ ರೂ ಆಗಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ, ಗ್ರಾಸ್ ಟ್ಯಾಕ್ಸ್ ಕಲೆಕ್ಷನ್ 15.19% ಹೆಚ್ಚಳ ಆಗಿದೆ. ತೆರಿಗೆ ರಿಫಂಡ್ಸ್ 2.20 ಲಕ್ಷ ಕೋಟಿ ರೂ (29.19% ಏರಿಕೆ) ಇದೆ. ಒಟ್ಟು ತೆರಿಗೆಯ ಮೊತ್ತದಲ್ಲಿ ರಿಫಂಡ್ಸ್ ಕಳೆದರೆ ಉಳಿಯುವ ನಿವ್ವಳ ಡೈರೆಕ್ಟ್ ಟ್ಯಾಕ್ಸ್ ಸಂಗ್ರಹವು 12,12,410.71 ಕೋಟಿ ರೂಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 10,73,272.17 ಕೋಟಿ ರೂ ಇತ್ತು.

ಒಟ್ಟು ಮುಂಗಡ ತೆರಿಗೆ (Advance Tax) ಸಂಗ್ರಹ 16.18% ಹೆಚ್ಚಾಗಿ 5.22 ಲಕ್ಷ ಕೋಟಿ ರೂಗೆ ತಲುಪಿದೆ. ಕಾರ್ಪೊರೇಟ್ ಅಡ್ವಾನ್ಸ್ ಟ್ಯಾಕ್ಸ್ 18.09% ಏರಿಕೆ ಕಂಡಿದ್ದರೆ, ನಾನ್-ಕಾರ್ಪೊರೇಟ್ (ವ್ಯಕ್ತಿಗತ) ಮುಂಗಡ ತೆರಿಗೆ 9.24% ಹೆಚ್ಚಾಗಿದೆ.

ಇದನ್ನೂ ಓದಿ: 2026-27ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 6ರಿಂದ ಶೇ. 7ಕ್ಕೆ ಏರಿಸಿದ ಮೂಡೀಸ್

ನಿವ್ವಳ ಕಾರ್ಪೊರೇಟ್ ತೆರಿಗೆ ಕಳೆದ ವರ್ಷ 4.65 ಲಕ್ಷ ಕೋಟಿ ರೂ ಇತ್ತು. ಈ ವರ್ಷ 5.56 ಲಕ್ಷ ಕೋಟಿ ರೂ. ನಿವ್ವಳ ನಾನ್-ಕಾರ್ಪೊರೇಟ್ (ವೈಯಕ್ತಿಕ ಆದಾಯ ತೆರಿಗೆ ಇತ್ಯಾದಿ) 6.16 ಲಕ್ಷ ಕೋಟಿ ರೂ ಇದೆ. ಕಳೆದ ವರ್ಷ ಇದು 5.81 ಲಕ್ಷ ಕೋಟಿ ರೂ ಇತ್ತು.

ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT): ಷೇರು ಮಾರುಕಟ್ಟೆ ವಹಿವಾಟಿನ ಮೇಲಿನ STT ಸಂಗ್ರಹವು 52.9% ತೀವ್ರ ಏರಿಕೆ ಕಂಡು 40,214.36 ಕೋಟಿ ರೂ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ Rs 26,305.72 ಕೋಟಿ ಇತ್ತು.

ಇದನ್ನೂ ಓದಿ: ಈ ದಾಖಲೆಗಳಿದ್ರೆ ಎಲ್‌ಪಿಜಿ ಗ್ಯಾಸ್ ಕನೆಕ್ಷನ್ ವಿಳಾಸ ಬದಲಾವಣೆ ಸುಲಭ

ಬಜೆಟ್ ಗುರಿಯನ್ನು ಸುಲಭವಾಗಿ ದಾಟಲಿರುವ ತೆರಿಗೆ ಆದಾಯ

2026ರ ಬಜೆಟ್​ನಲ್ಲಿ ಸರ್ಕಾರ ತೆರಿಗೆಗಳಿಂದ 44 ಲಕ್ಷ ಕೋಟಿ ರೂ ಆದಾಯ ನಿರೀಕ್ಷೆ ಮಾಡಿತ್ತು. ಅದರಲ್ಲಿ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳೆರಡೂ ಸೇರಿವೆ. ಇನ್ಕಮ್ ಟ್ಯಾಕ್ಸ್ ಇತ್ಯಾದಿ ತೆರಿಗೆಗಳು ಡೈರೆಕ್ಟ್ ಟ್ಯಾಕ್ಸ್ ಎನಿಸಿದ್ದು, ಪ್ರಸಕ್ತ ವರ್ಷಕ್ಕೆ ಸರ್ಕಾರ 27 ಲಕ್ಷ ಕೋಟಿ ರೂ ಗುರಿ ಇಟ್ಟಿದೆ. ಈಗ ಅರ್ಧ ವರ್ಷದೊಳಗೆಯೇ ನೇರ ತೆರಿಗೆ ಸಂಗ್ರಹ 14 ಲಕ್ಷ ಕೋಟಿ ರೂ ದಾಟಿರುವುದು ಗಮನಾರ್ಹ. ದೇಶದ ಆರ್ಥಿಕತೆಯಲ್ಲಿ ವಹಿವಾಟು ಹಾಗೂ ಖಾಸಗಿ/ಕಾರ್ಪೊರೇಟ್ ಆದಾಯದಲ್ಲಿ ಸ್ಥಿರ ಬೆಳವಣಿಗೆ ಮುಂದುವರಿದಿರುವುದನ್ನು ಈ ಅಂಕಿ-ಅಂಶಗಳು ತೋರಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು