AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2026-27ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 6ರಿಂದ ಶೇ. 7ಕ್ಕೆ ಏರಿಸಿದ ಮೂಡೀಸ್

ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6ರಷ್ಟು ಮಾತ್ರ ಹೆಚ್ಚಬಹುದು ಎಂದು ಈ ಹಿಂದೆ ಅಂದಾಜು ಮಾಡಿದ್ದ ಮೂಡೀಸ್, ಈಗ ಅಭಿಪ್ರಾಯ ಬದಲಿಸಿದೆ. 2026-27ರ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7ರಷ್ಟು ಬೆಳೆಯಬಹುದು ಎಂದು ಈ ರೇಟಿಂಗ್ ಏಜೆನ್ಸಿ ನಿರೀಕ್ಷಿಸಿದೆ. ಭಾರತದ ಆರ್ಥಿಕತೆಯ ಕ್ಷಮತೆಯ ಗುಣ ಇತ್ಯಾದಿ ಪೂರಕ ಅಂಶಗಳು ಮೂಡೀಸ್ ಅಂದಾಜು ಹೆಚ್ಚಿಸುವಂತೆ ಮಾಡಿವೆ.

2026-27ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 6ರಿಂದ ಶೇ. 7ಕ್ಕೆ ಏರಿಸಿದ ಮೂಡೀಸ್
ಆರ್ಥಿಕತೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 18, 2026 | 1:27 PM

Share

ನವದೆಹಲಿ, ಸೆಪ್ಟೆಂಬರ್ 18: ಅಂತರರಾಷ್ಟ್ರೀಯ ರೇಟಿಂಗ್ ಏಜೆನ್ಸಿ ಮೂಡೀಸ್ (Moody’s) ಭಾರತದ ಆರ್ಥಿಕತೆ ಬಗ್ಗೆ ನಿರೀಕ್ಷೆ ಹೆಚ್ಚಿಸಿಕೊಂಡಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕತೆಯು ಉತ್ತಮ ದೃಢತೆಯನ್ನು ಪ್ರದರ್ಶಿಸುತ್ತಿದೆ ಎಂದು ತಿಳಿಸಿರುವ ಅದು, ಪ್ರಸ್ತುತ ಹಣಕಾಸು ವರ್ಷದ ಭಾರತದ ಜಿಡಿಪಿ (GDP) ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 6 ರಿಂದ ಶೇ. 7 ಕ್ಕೆ ಏರಿಸಿದೆ.

ಜಾಗತಿಕ ಅಸ್ಥಿರತೆಗಳ ನಡುವೆಯೂ ಭಾರತವು ಇತರ G-20 ದೇಶಗಳಿಗಿಂತ ವೇಗವಾಗಿ ಬೆಳೆಯುತ್ತಿರುವುದನ್ನು ಮೂಡೀಸ್ ಕೊಂಡಾಡಿದೆ.

ಮೂಡೀಸ್ ಪ್ರಕಾರ ಭಾರತದ ಉತ್ತಮ ಬೆಳವಣಿಗೆಗೆ ಪ್ರಮುಖ ಕಾರಣಗಳಿವು

  • ಬಲವಾದ ಖಾಸಗಿ ಅನುಭೋಗ (Private consumption).
  • ಸಾರ್ವಜನಿಕ ಮೂಲಭೂತ ಸೌಕರ್ಯಗಳ ಮೇಲಿನ ವೆಚ್ಚದಿಂದ ಬಲವಾದ ಬಂಡವಾಳ ರಚನೆ.
  • ಖಾಸಗಿ ವಲಯದ ಹೂಡಿಕೆಯಲ್ಲಿ ಸಂಭವಿಸಲಿರುವ ಚೇತರಿಕೆ.
  • ಸೇವಾ ವಲಯದಲ್ಲಿ (Services sector) ಮುಂದುವರಿದಿರುವ ಉತ್ತಮ ಪ್ರಗತಿ.

ಇದನ್ನೂ ಓದಿ: ಸೆಮಿಕಂಡಕ್ಟರ್ ಭವಿಷ್ಯ ನಿರ್ಮಿಸಲು ಹೊರಟ ಭಾರತ; 1.27 ಲಕ್ಷ ಕೋಟಿ ರೂ ವೆಚ್ಚದ ಸೆಮಿಕಾನ್ 2.0 ಚಾಲನೆ

ಮೂಡೀಸ್​ನಿಂದ ಈ ಎಚ್ಚರಿಕೆಯೂ ಇದೆ..

ಜಾಗತಿಕ ಇಂಧನ ಬೆಲೆಗಳ ಏರಿಕೆ ಮತ್ತು ಎಲ್ ನಿನೋ (El Niño) ಪರಿಣಾಮದಿಂದ ಉಂಟಾಗುವ ಆಹಾರ ಪದಾರ್ಥಗಳ ಬೆಲೆ ಏರಿಕೆಯು ಹಣದುಬ್ಬರ ಹಾಗೂ ಒಟ್ಟಾರೆ ಬೆಳವಣಿಗೆಗೆ ಸವಾಲಾಗಿರಬಹುದು ಎಂದು ಸಂಸ್ಥೆ ಎಚ್ಚರಿಸಿದೆ.

ಭಾರತದ ಆರ್ಥಿಕತೆಯ ಆರೋಗ್ಯ

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪೆಟ್ಟು ಹೆಚ್ಚು ತಾಕದಿರಲೆಂದು ಭಾರತವು ಇಂಧನ ಖರೀದಿ ಮೂಲಗಳನ್ನು ವಿಸ್ತಾರಗೊಳಿಸಿದೆ. ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಹೆಚ್ಚಿಸಿದೆ. ಇದರ ಜೊತೆಗೆ, ದೇಶೀಯ ಬೇಡಿಕೆಯು ಬ್ಯಾಕಪ್ ರೀತಿ ಆರ್ಥಿಕತೆಗೆ ಶಾಕ್​ಗಳನ್ನು ತಡೆದುಕೊಳ್ಳಬಲ್ಲುದು.

ಇದನ್ನೂ ಓದಿ: ಭಾರತದ ಮೇಲೆ ಅಮೆರಿಕ ಶೇ. 100 ಟ್ಯಾರಿಫ್ ಹಾಕುವ ಭೀತಿ; ಬೃಹತ್ ಸುಂಕದ ತಡೆ ಬಂದರೆ ಭಾರತಕ್ಕಾಗುವ ಹಾನಿ ದೊಡ್ಡದೇ

ಅಲ್ಲದೇ, ಜಿಡಿಪಿ ಉತ್ತಮ ಬೆಳವಣಿಗೆ ಮುಂದುವರಿದಿದೆ. 2025ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಶೇ 7.3ರಷ್ಟು ಹೆಚ್ಚಿತ್ತು. 2026ರ ಕ್ಯಾಲೆಂಡರ್ ವರ್ಷದ ಮೊದಲ ಆರು ತಿಂಗಳು ಜಿಡಿಪಿ ಬೆಳವಣಿಗೆ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 8.2ರಷ್ಟು ಹೆಚ್ಚಿರುವುದು ಗಮನಾರ್ಹ. ಆರ್ಥಿಕತೆಯ ಇಂಥ ಕೆಲ ಪ್ರಮುಖ ಸಕಾರಾತ್ಮಕ ಅಂಶಗಳು ಮೂಡೀಸ್​ನ ನಿರೀಕ್ಷೆ ಹೆಚ್ಚಲು ಕಾರಣವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us